ಕನ್ನಡತಿ ಅನುಷಾ ಶೆಟ್ಟಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ತೆಲುಗು ಸ್ಟಾರ್ ನಾಗ ಶೌರ್ಯ; ಮದುವೆ ಫೋಟೋಗಳು ವೈರಲ್

Published : Nov 20, 2022, 02:17 PM IST

ತೆಲುಗಿನ ಖ್ಯಾತ ನಟ ನಾಗ ಶೌರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರೇಯಸಿ ಅನುಷಾ ಶೆಟ್ಟಿ ಜೊತೆ ನಾಗ ಶೌರ್ಯ ಇಂದು (ನವೆಂಬರ್ 20) ಹಸೆಮಣೆ ಏರಿದರು. 

PREV
17
ಕನ್ನಡತಿ ಅನುಷಾ ಶೆಟ್ಟಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ತೆಲುಗು ಸ್ಟಾರ್ ನಾಗ ಶೌರ್ಯ; ಮದುವೆ ಫೋಟೋಗಳು ವೈರಲ್

ತೆಲುಗಿನ ಖ್ಯಾತ ನಟ ನಾಗ ಶೌರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರೇಯಸಿ ಅನುಷಾ ಶೆಟ್ಟಿ ಜೊತೆ ನಾಗ ಶೌರ್ಯ ಇಂದು (ನವೆಂಬರ್ 20) ಹಸೆಮಣೆ ಏರಿದರು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ನಾಗ ಶೌರ್ಯ ಮತ್ತು ಅನುಷಾ ಪತಿ-ಪತ್ನಿಯರಾದರು. 

27

ಕನ್ನಡತಿ ಅನುಷಾ ಶೆಟ್ಟಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗ ಶೌರ್ಯ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇಬ್ಬರ ಮದುವೆಗೆ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. 

37

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದಾಗಿರುವ ಜೆಡಬ್ಲ್ಯೂ ಮ್ಯಾರಿಯಟ್ ನಲ್ಲಿ ನಾಗ ಶೌರ್ಯ ಮತ್ತು ಅನುಷಾ ಮದುವೆ ನೆರವೇರಿದೆ. ಎರಡು ದಿನಗಳ ಮೊದಲೇ ಮದುವೆ ಸಮಾರಂಭ ಪ್ರಾರಂಭವಾಗಿತ್ತು. ಪ್ರೀ ವೆಡ್ಡಿಂಗ್ ಶಾಸ್ತ್ರಗಳ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಬ್ಬರು ಕುಟುಂಬದವರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

47

ಮದುಮಗ ನಾಗಶೌರ್ಯ ಪಂಚೆ ಶಲ್ಯಾದಲ್ಲಿ ಮಿಂಚಿದ್ರೆ ಮದುಮಗಳು ಅನುಷಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಪಕ್ಕಾ ದಕ್ಷಿಣ ಭಾರತದ ಶೈಲಿಯಲ್ಲಿ ಮದುವೆ ಸಂಭ್ರಮ ನಡೆದಿದೆ. ಈಗಾಗಲೇ ಮದುವೆ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

57

ಕನ್ನಡತಿ ಅನುಷಾ ಶೆಟ್ಟಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರದ್ದು ಲವ್ ಮ್ಯಾರೇಜ್. ಕುಟುಂಬದವರ ಒಪ್ಪಿಗೆ ಪಡೆದು ಇಬ್ಬರೂ ಇಂದು ಮದುವೆಯಾಗುತ್ತಿದ್ದಾರೆ. ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಹೈದರಾಬಾದ್ ನಲ್ಲಿ ಆರತಕ್ಷತೆ ಸಂಭ್ರಮ ನಡೆಸುವ ಸಾಧ್ಯತೆ ಇದೆ. 

67

ನಾಗ ಶೌರ್ಯ ಸಿನಿಮಾಗಳ ಬಗ್ಗೆ ಹೇಳುವುದಾರೆ ಸದ್ಯ ತಮ್ಮ 24 ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ NS24 ಎಂದು ಹೆಸರಿಸಲಾಗಿದೆ. ಮೊದಲ ಬಾರಿಗೆ ನಿರ್ದೇಶಕ ಎಸ್‌ಎಸ್ ಅರುಣಾಚಲಂ ಜೊತೆ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದ್ದು ಚಿತ್ರೀಕರಣ ಹಂತದಲ್ಲಿದೆ. 

77

2011ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ನಾಗಶೌರ್ಯ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆ ಚಲೋ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಕೊನೆಯದಾಗಿ ನಾಗಶೌರ್ಯ ಕೃಷ್ಣ ವೃಂದ ವಿಹಾರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನೇಕ ಸಿನಿಮಾಗಳು ನಾ ಶೌರ್ಯ ಕೈಯಲ್ಲಿದೆ.  
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories