ಹಲವು ನಗರಗಳಲ್ಲಿ 5 ಐಷಾರಾಮಿ ಆಸ್ತಿ ಖರೀದಿಸಿದ ರಶ್ಮಿಕಾ ಮಂದಣ್ಣ ಹೇಳೋದೇನು?

Published : Feb 11, 2023, 05:01 PM ISTUpdated : Feb 11, 2023, 05:26 PM IST

ಇಂದು ರಶ್ಮಿಕಾ ಮಂದಣ್ಣ (Rashmika Mandanna) ದೇಶದ ಫೇಮಸ್‌ ನಟಿಯರಲ್ಲಿ ಒಬ್ಬರು. ಕನ್ನಡದ ನಂತರ ತೆಲಗು, ತಮಿಳು ಸಿನಿಮಾಗಳಲ್ಲಿ ತಮ್ಮ ಹವಾ ಎಬ್ಬಿಸಿದ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಜನಪ್ರಿಯತೆಯ ಜೊತೆ ವಿವಾದಗಳು ಸಹ ರಶ್ಮಿಕಾರ ಬೆನ್ನ ಹಿಂದಿವೆ. ಅದರ ಜೊತೆಗೆ ರಶ್ಮಿಕಾ ಮಂದಣ್ಣ ದೇಶದ ಹಲವು ನಗರಗಳಲ್ಲಿ 5 ಏಷರಾಮಿ ಆಸ್ತಿಗಳನ್ನು ಖರೀದಿಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಬಗ್ಗೆ ಸ್ವತಃ ನಟಿ ಮೌನ ಮುರಿದ್ದಾರೆ. ಅಷ್ಷಕ್ಕೂ ರಶ್ಮಿಕಾ ಏನು ಹೇಳಿದ್ದಾರೆ ನೋಡಿ.

PREV
17
ಹಲವು ನಗರಗಳಲ್ಲಿ 5  ಐಷಾರಾಮಿ ಆಸ್ತಿ ಖರೀದಿಸಿದ ರಶ್ಮಿಕಾ ಮಂದಣ್ಣ ಹೇಳೋದೇನು?

ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್, ಗೋವಾ, ಕೂರ್ಗ್, ಮುಂಬೈ ಮತ್ತು ಬೆಂಗಳೂರಿನಲ್ಲಿ 5 ಐಷಾರಾಮಿ ಫ್ಲ್ಯಾಟ್‌ ಹಾಗೂ ಮನೆಗಳನ್ನು ಖರೀದಿಸಿದ್ದಾರೆ ಎಂದು ಬಹಳ ದಿನಗಳಿಂದ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ನಟಿ ಉತ್ತರಿಸಿದ್ದಾರೆ

27

ಹೈದರಾಬಾದ್, ಗೋವಾ, ಕೂರ್ಗ್, ಮುಂಬೈ ಮತ್ತು ಬೆಂಗಳೂರಿನಲ್ಲಿ ನಟಿ ಐದು ಸುಂದರವಾದ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ ಎಂಬ  ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಇತ್ತೀಚೆಗೆ ರಶ್ಮಿಕಾ  ಪ್ರತಿಕ್ರಿಯಿಸಿದ್ದಾರೆ.

37

'ಅದು ನಿಜವಾಗಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳಿಕೆ ನೀಡುವುದರ ಮೂಲಕ ರಶ್ಮಿಕಾ ಎಲ್ಲಾ ವರದಿಗಳನ್ನು ಸುಳ್ಳು ಎಂದು ತಳ್ಳಿಹಾಕಿದರು.

47

ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ಅವರು ಆಗಾಗ್ಗೆ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸುತ್ತಾರೆ ಮತ್ತು Instagram ನಲ್ಲಿ  ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

57

ರಶ್ಮಿಕಾ ಕೊನೆಯದಾಗಿ ಶಂತನು ಬಾಗ್ಚಿ ಅವರ ನಿರ್ದೇಶನದ ಚಿತ್ರ ಮಿಷನ್ ಮಜ್ನುದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡರು. ಇದು ಓಟಿಟಿಯಲ್ಲಿ ಬಿಡುಗಡೆಯಾಗಿದೆ.
 

67

ಅವರು ಮುಂದಿನ ಬಹು ನಿರೀಕ್ಷಿತ ಚಿತ್ರ ಅನಿಮಲ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಪ್ರಸ್ತುತ ಈ ಯೋಜನೆಯು ನಿರ್ಮಾಣ ಹಂತದಲ್ಲಿದೆ ಮತ್ತು ಆಗಸ್ಟ್ 11, 2023 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

77

ಇವುಗಳ ಜೊತೆಗೆ, ರಶ್ಮಿಕಾ ಅವರ ಆಕೌಂಟ್‌ನಲ್ಲಿ  ಪುಷ್ಪ: ದಿ ರಾಜ್ ಕೂಡ ಇದೆ.  ಸದ್ಯ ಪುಷ್ಪಾ 2  ಚಿತ್ರದ ಶೂಟಿಂಗ್ ವಿಶಾಖಪಟ್ಟಣಂನಲ್ಲಿ ನಡೆಯುತ್ತಿದೆ. ಅಲ್ಲು ಅರ್ಜುನ್ ಪ್ರಮುಖ ಪಾತ್ರದಲ್ಲಿದ್ದಾರೆ.

Read more Photos on
click me!

Recommended Stories