ಆಲಿಯಾ ರಣಬೀರ್ ದಾಖಲೆ ಮುರಿದ ಸಿದ್ಧಾರ್ಥ್ ಮಲ್ಹೋತ್ರ- ಕಿಯಾರಾ ದಂಪತಿ
First Published | Feb 11, 2023, 4:48 PM ISTಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಅಂತಿಮವಾಗಿ ಫೆಬ್ರವರಿ 7 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸಪ್ತಪದಿ ತುಳಿದರು. ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದೆ. ಫೋಟೋಗಳನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿವೆ. ಈಗ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆಯ ಫೋಟೋಗಳು Instagram ನಲ್ಲಿ ಅತಿ ಹೆಚ್ಚು ಮೆಚ್ಚುಗೆ ಗಳಿಸಿದ ಸೆಲೆಬ್ರೆಟಿ ಮದುವೆ ಫೋಟೋಗಳಾಗಿವೆ.