Naga Chaitanya-Samantha ಡಿವೋರ್ಸ್ ಬಗ್ಗೆ ರಾಮ್ ಚರಣ್ ಪ್ರತಿಕ್ರಿಯೆ ಇದು..

Suvarna News   | Asianet News
Published : Dec 28, 2021, 06:25 PM IST

ಸೌತ್‌ನ ಟಾಪ್‌ ನಟಿಯರಲ್ಲಿ ಒಬ್ಬರಾದ  ಸಮಂತಾ ರುತ್ ಪ್ರಭು (Samantha Ruth Prabhu) ಈ ವರ್ಷ, ಸಮಂತಾ ರುತ್ ಪ್ರಭು ಅನೇಕ ಕಾರಣಗಳಿಗಾಗಿ ಸಾಕಷ್ಟು ಸುದ್ದಿಯಲ್ಲಿದ್ದರು. ಅದರಲ್ಲಿ ಪತಿ ನಾಗ ಚೈತನ್ಯ (Naga Chaitanya) ಅವರಿಂದ ನಟಿ ಡಿವೋರ್ಸ್ ಪಡೆದಿರುವುದು ಪ್ರಮುಖ ಹೆಡ್‌ಲೈನ್‌ ನ್ಯೂಸ್‌ ಆಗಿತ್ತು. ಇತ್ತೀಚಿಗೆ RRR ಸಿನಿಮಾದ ಪ್ರಚಾರದ ಸಮಯದಲ್ಲಿ, ನಟ ರಾಮ್ ಚರಣ್ (Ram Charan) ಅವರನ್ನು ಸಮಂತಾ ರುತ್ ಪ್ರಭುವಿನ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಅವರು ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ? ಪೂರ್ತಿ ವಿವರಕ್ಕೆ ಮುಂದೆ ಓದಿ.

PREV
16
Naga Chaitanya-Samantha  ಡಿವೋರ್ಸ್ ಬಗ್ಗೆ ರಾಮ್ ಚರಣ್ ಪ್ರತಿಕ್ರಿಯೆ ಇದು..

ಸಮಂತಾ ರುತ್ ಪ್ರಭು ಪ್ರಸ್ತುತ ತನ್ನ ಫ್ರೆಂಡ್ಸ್‌ ಜೊತೆ ಗೋವಾದಲ್ಲಿ ಈ ವರ್ಷದ ಕೊನೆಯ ವಾರವನ್ನು ಆನಂದಿಸುತ್ತಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಕೆಲವು ಖುಷಿಯಾಗಿ ಎಂಜಾಯ್‌ ಮಾಡುತ್ತಿರುವ  ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

26

ಈಗ ಅವರು ತಮ್ಮ ಆತ್ಮೀಯರಾದ ಮಾಡೆಲ್-ವಕೀಲರಾದ ವಾಸುಕಿ ಸುಂಕವಲ್ಲಿ ಮತ್ತು ಮಾಡೆಲ್-ಉದ್ಯಮಿ ಶಿಲ್ಪಾ ರೆಡ್ಡಿ ಅವರೊಂದಿಗೆ ತಮ್ಮ ವರ್ಷವನ್ನು ಕೊನೆಗೊಳಿಸುತ್ತಿದ್ದಾರೆ. ಎಲ್ಲಾ ಮೂವರು ಸುಂದರಿಯರು ನೀರಿನಲ್ಲಿ ನಿಂತಿರುವ ಫೋಟೋವನ್ನು ಹಂಚಿಕೊಂಡಿರುವ ಸಮಂತಾ  'ಸ್ವಲ್ಪ ಸ್ವರ್ಗ' ಮತ್ತು 'ಗೋವಾ ಡೈರಿಸ್‌' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

36

ವೈಯಕ್ತಿಕ ಜೀವನದಿಂದ ಹಿಡಿದು ವೃತ್ತಿಪರ ಆಯ್ಕೆಗಳು ಇತ್ಯಾದಿಗಳ ವರೆಗೆ ಈ ವರ್ಷ, ಸಮಂತಾ ರುತ್ ಪ್ರಭು ಅನೇಕ ಕಾರಣಗಳಿಗಾಗಿ ಸಾಕಷ್ಟು ಸುದ್ದಿಯಲ್ಲಿದ್ದರು. ಅದರಲ್ಲಿ ಪತಿ ನಾಗ ಚೈತನ್ಯ ಅವರಿಂದ ಡಿವೋರ್ಸ್ ಪಡೆದಿರುವುದು ಹೆಡ್‌ಲೈನ್‌ ನ್ಯೂಸ್‌ ಆಗಿದೆ. 

46

RRR ಪ್ರಚಾರದ ಸಮಯದಲ್ಲಿ, ರಾಮ್ ಚರಣ್ ಅವರನ್ನು ಸಮಂತಾ ರುತ್ ಪ್ರಭುವಿನ ಬಗ್ಗೆ ಕೇಳಲಾಯಿತು. ರಾಮ್ ಚರಣ್ ಮತ್ತು ಸಮಂತಾ ಇಬ್ಬರೂ 2018 ರ ತೆಲುಗು ಪೀರಿಯಡ್‌ ಡ್ರಾಮ ರಂಗಸ್ಥಳಂ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 

56

ಆ ವರ್ಷದ ಹಿಟ್ ಫಿಲ್ಮ್‌ ಆಗಿದ್ದ ರಂಗಸ್ಥಳಂ ಅನ್ನು ದಶಕದ ಅತ್ಯುತ್ತಮ ಟಾಲಿವುಡ್ (Tollywood) ಚಲನಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಮತ್ತು ಅತ್ಯುತ್ತಮ ಆಡಿಯೋಗ್ರಫಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದಿದೆ.
 

66

ಸಂದರ್ಶನದಲ್ಲಿ ಸ್ಯಾಮ್ ಬಗ್ಗೆ ಕೇಳಿದಾಗ, ರಾಮ್ ಚರಣ್ ಅವರು 'ದೊಡ್ಡದಾಗಿ, ಸ್ಟ್ರಾಂಗ್‌ ಆಗಿ ಹಿಂದಿರುಗಿ ಎಂದು ಹೇಳಲು ಬಯಸುತ್ತೇನೆ' ಎಂದು ಹೇಳಿದರು. ನಟ ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನಂತರ ಬಹುಶಃ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪರೋಕ್ಷವಾಗಿ ಉತ್ತೇಜಿಸಿದ್ದಾರೆ ನಟ ರಾಮ್ ಚರಣ್.  ಸಮಂತಾ ನಂತರ ಟ್ವಿಟರ್‌ನಲ್ಲಿ ಮೂರು ಹೃದಯದ ಎಮೋಜಿಗಳೊಂದಿಗೆ ಈ ಸಂದರ್ಶನದ ಕ್ಲಿಪ್ ಅನ್ನು ಹಂಚಿಕೊಂಡಿದ್ದರು.

Read more Photos on
click me!

Recommended Stories