Influential People : ಏಕಮೇವ ಅದ್ವಿತೀಯಳಾದ ಏಕ್ತಾ... ಅಮೀರ್ ಖಾನ್‌ಗಿಂತ ಮುಂದೆ!

Published : Dec 28, 2021, 12:31 AM ISTUpdated : Dec 28, 2021, 12:33 AM IST

ಮುಂಬೈ(ಡಿ. 28)  ಅಮೆರಿಕದ ನಿಯತಕಾಲಿಕ Variety ನ ಟಾಪ್  500  ಪಟ್ಟಿಯಲ್ಲಿ ಬಾಲಿವುಡ್ (Bollywood)  ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಸ್ಥಾನ ಪಡೆದುಕೊಂಡಿದ್ದಾರೆ. ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ (Influential People) ಹೊರಹೊಮ್ಮಿದ್ದಾರೆ.

PREV
15
Influential People : ಏಕಮೇವ ಅದ್ವಿತೀಯಳಾದ ಏಕ್ತಾ... ಅಮೀರ್ ಖಾನ್‌ಗಿಂತ ಮುಂದೆ!

ಭಾರತೀಯ ಚಿತ್ರರಂಗ ವಿಶ್ವಖ್ಯಾತಿಯನ್ನು ಗಳಿಸಿಕೊಂಡು ಮುಂದೆ ನುಗ್ಗುತ್ತಿದೆ . ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಗಳಿಸಿದವರಿದ್ದಾರೆ.  ಆಸ್ಕರ್ ನಾಮನಿರ್ದೇಶನದಿಂದ ಹೆಸರು ಸಂಪಾದಿಸಿಕೊಂಡವರಿದ್ದಾರೆ. 

ಕೊರೋನಾದಿಂದ ಚೇತರಿಸಿಕೊಂಡ ಬೇಬೋ Christmas ಪಾರ್ಟಿಯಲ್ಲಿ!

25

ಇತ್ತೀಚೆಗೆ ವೆರೈಟಿಯು ಜಾಗತಿಕ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಏಕ್ತಾ ಕಪೂರ್ ಸ್ಥಾನ  ಪಡೆದುಕೊಂಡಿದ್ದಾರೆ. ಅಮೆರಿಕದ ನಿಯತಕಾಲಿಕ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 9 ಭಾರತೀಯರ ಹೆಸರುಗಳಿವೆ. ಏಕ್ತಾ ಹೆಸರು ಮುಂಚೂಣಿಯಲ್ಲಿದೆ.

35

ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ನಿರ್ಮಾಪಕಿ ಸೋಶಿಯಲ್ ಮೀಡಿಯಾ ಮುಖೇನ ಧನ್ಯವಾದ ತಿಳಿಸಿದ್ದಾರೆ. ಏಕ್ತಾ ಅವರನ್ನು ಹೊರತುಪಡಿಸಿ, ಮೋನಿಕಾ ಶೆರ್ಗಿಲ್, ಅಕ್ಷಯ್ ಕುಮಾರ್, ಮುಖೇಶ್ ಅಂಬಾನಿ, ಕಲಾನಿದಿ ಮಾರನ್, ಸಿದ್ಧಾರ್ಥ್ ರಾಯ್ ಕಪೂರ್, ಅಮೀರ್ ಖಾನ್ ಮತ್ತು ಶಿವಾನಿ ಪಾಂಡ್ಯ ಮಲ್ಹೋತ್ರಾ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

45

ಬಾಲಾಜಿ ಟೆಲಿಫಿಲ್ಮ್ಸ್‌ನ ಪಾಲುದಾರ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ಏಕ್ತಾ ಕಪೂರ್ ಗುರುತಿಸಿಕೊಂಡಿದ್ದಾರೆ. ತನ್ನ ಟಿವಿ ಶೋಗಳು ಮತ್ತು  ಸೀರಿಯಲ್ ಮೂಲಕ ಕ್ರಿಯಾಶೀಲತೆಯನ್ನು ಏಕ್ತಾ ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ಮ್ಯಾಗಜೀನ್ ಬರೆದಿದೆ.

55

ಬಾಲಾಜಿ ಟೆಲಿಫಿಲ್ಮ್ಸ್ ದಕ್ಷಿಣ ಏಷ್ಯಾದ ಅತಿದೊಡ್ಡ ನಿರ್ಮಾಣ ಸಂಸ್ಥೆ ಎಂಬ ಶ್ರೇಯವನ್ನು ಪಡೆದುಕೊಂಡಿದೆ.  ಏಕ್ತಾ ಕಪೂರ್ಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವುದು ಎರಡನೇ ಸಾರಿ.

Read more Photos on
click me!

Recommended Stories