ತೆಲುಗು ಸಿನಿಮಾದಲ್ಲಿ ದಿಯಾ ಖ್ಯಾತಿಯ ಖುಷಿ ನಟನೆ

First Published | Sep 22, 2021, 1:03 PM IST
  • ತೆಲುಗು ಸಿನಿಮಾದಲ್ಲಿ ಖುಷಿ ರವಿ ನಟನೆ
  • ದಿಯಾದಿಂದ ಖ್ಯಾತಿ ಪಡೆದು ಈಗ ಟಾಲಿವುಡ್‌ನಲ್ಲೂ ಖುಷಿ

ನಟಿ ದಿಯಾ ಖುಷಿ ಟಾಲಿವುಡ್‌ ಪ್ರವೇಶಿಸಿದ್ದಾರೆ. ಖುಷಿ ಅಭಿನಯದ ಮೊದಲ ತೆಲುಗು ಚಿತ್ರಕ್ಕೆ ಸೆ.19ರಂದು ಹೈದರಾಬಾದ್‌ನಲ್ಲಿ ಮುಹೂರ್ತ ಆಗಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಂದೀಪ್‌ ಕಿಶನ್‌ ಈ ಚಿತ್ರದ ನಾಯಕ.

‘ದಿಯಾ’ ಚಿತ್ರದ ಮೂಲಕ ಮನೆಮಾತಾದ ಖುಷಿ ರವಿ, ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಲು ಕಾರಣ ಇದೇ ‘ದಿಯಾ’ ಸಿನಿಮಾ. ಇತ್ತೀಚೆಗೆ ಇದರ ಡಬ್ಬಿಂಗ್‌ ವರ್ಷನ್‌ ತೆಲುಗಿನಲ್ಲೂ ಬಿಡುಗಡೆ ಆಗಿತ್ತು.

Tap to resize

ತೆಲುಗಿನಲ್ಲಿ ‘ದಿಯಾ’ ಚಿತ್ರವನ್ನು ನೋಡಿದ ನಿರ್ದೇಶಕ ವಿ ಆನಂದ್‌ ಅವರು ಖುಷಿ ಅವರನ್ನು ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಅಡಿಪೊಳಿ ಅನ್ನೋ ಆಲ್ಬಂ ಸಾಂಗ್ ಮೂಲಕ ಖುಷಿ ಈಗ ಕಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ದಿಯಾ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರ ಮನಸು ಗೆದ್ದ ನಟಿ ಖುಷಿಗೆ ಈಗ ಬಹಳಷ್ಟು ಸಿನಿಮಾ ಆಫರ್‌ಗಳೂ ಬರುತ್ತಿದ್ದು ಟಾಲಿವುಡ್‌ನಲ್ಲಿಯೂ ನಟಿ ಮಿಂಚಲಿದ್ದಾರೆ. ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಹೆಚ್ಚಾಗಿದೆ

ಖುಷಿ, ವಿವೇಕ್‌ ಸಿಂಹ ಜೋಡಿಯ 'ಸ್ಪೂಕಿ ಕಾಲೇಜ್‌'

ಕನ್ನಡದಲ್ಲಿ ದಿಯಾ ಸೇರಿದಂತೆ 4ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಖುಷಿ ರವಿ. 28 ವರ್ಷದ ನಟಿ ವಿವಾಹಿತೆಯಾಗಿ ಅಮ್ಮನಾಗಿ ಹಿರೋಯಿನ್ ಆಗಿ ಮಿಂಚುತ್ತಿರುವುದು ವಿಶೇಷ

Latest Videos

click me!