ಮರಾಠಿ ಮತ್ತು ಹಿಂದಿ ಸಿನಿಮಾದಲ್ಲಿ ನಟಿಸಿರುವ ಯುವ ನಟಿ ಈಶ್ವರಿ ದೇಶಪಾಂಡೆ ಗೋವಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
25 ವರ್ಷದ ನಟಿ ತನ್ನ ಸ್ನೇಹಿತ ಶುಭಂ ದಡ್ಗೆ ಜೊತೆ ಪ್ರಯಾಣಿಸುತ್ತಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬರ್ದೇಜ್ ತಾಲೂಕಿನ ಅರ್ಪೋರಾ ಅಥವಾ ಹಡ್ಫಡೆ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಈಶ್ವರಿಯ ಕಾರು ಬೆಳಗ್ಗೆ 5: 30 ರ ಸುಮಾರಿಗೆ ಬಾಗಾ ಕ್ರೀಕ್‌ಗೆ ನುಗ್ಗಿದೆ. ಕಾರಿನ ಮಧ್ಯದಿಂದ ಬೀಗ ಹಾಕಿದ್ದರಿಂದ ನಟಿಗೆ ಇಳಿಯಲು ಸಾಧ್ಯವಾಗಿರದು ಎನ್ನಲಾಗಿದೆ. ಈಶ್ವರಿ ಮತ್ತು ಆಕೆಯ ಸ್ನೇಹಿತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬಾಲಿವುಡ್ ನಟಿಯ ಮೇಲೆ ಆ್ಯಸಿಡ್ ದಾಳಿ ಯತ್ನ
ಈಶ್ವರಿ ದೇಶಪಾಂಡೆ ತನ್ನ ಸ್ನೇಹಿತ ಶುಭಂ ದಡ್ಗೆಯೊಂದಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ಅವರ ಕಾರು ಗೋವಾದ ಬಾರ್ಡೆಜ್ ತಾಲೂಕಿನ ಅರ್ಪೋರಾ ಹಳ್ಳಿಯ ಬಳಿ ಅಪಘಾತಕ್ಕೀಡಾಗಿದೆ.
ಬಾಗಾ ಕ್ರೀಕ್‌ನಲ್ಲಿ ಕಾರು ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಈಶ್ವರಿ ಮತ್ತು ಶುಭಂ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದರು. ಅವರು ಸೆಪ್ಟೆಂಬರ್ 15 ಬುಧವಾರ ಗೋವಾಕ್ಕೆ ಬಂದಿದ್ದರು.
ನಟಿ ಮರಾಠಿ ಮತ್ತು ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇವೆರಡೂ ಇನ್ನೂ ಬಿಡುಗಡೆಯಾಗಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಗೋವಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಭಂ ದಾಡ್ಗೆ ಕಾರನ್ನು ಚಾಲನೆ ಮಾಡುತ್ತಿದ್ದರು ಎಂದು ಅಂಜುನಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಸೂರಜ್ ಗವಾಸ್ ಹೇಳಿದ್ದಾರೆ. ಪ್ರಾಥಮಿಕ ತನಿಖೆಯು ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ ಎಂದು ಸೂಚಿಸುತ್ತದೆ ಎಂದಿದ್ದಾರೆ.
ನಿಯಂತ್ರಣ ಕಳೆದುಕೊಂಡ ನಂತರ, ಕಾರು ಎದುರಿನ ಕಾರಿಡಾರ್‌ಗೆ ಅಡ್ಡಲಾಗಿ ಮತ್ತೆ ನೀರಿಗೆ ಬೀಳುವ ಮೊದಲು ಹಿಂದಕ್ಕೆ ಬಂದಿತ್ತು. ಬೆಳಗ್ಗೆ 7 ಗಂಟೆ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಅವರು ಕಾರು ಮತ್ತು ಇಬ್ಬರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.