ಬಾಲಿವುಡ್ ನಟಿಯ ಮೇಲೆ ಆ್ಯಸಿಡ್‌ ದಾಳಿ ಯತ್ನ

First Published | Sep 22, 2021, 10:09 AM IST
  • ಬಾಲಿವುಡ್ ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್‌ ದಾಳಿ ಯತ್ನ
  • ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ನಟಿ

ದುಷ್ಕರ್ಮಿಗಳ ಗುಂಪೊಂದು ತಮ್ಮ ಮೇಲೆ ಆ್ಯಸಿಡ್‌ ದಾಳಿಗೆ ಯತ್ನಿಸಿದಾಗಿ ಬಾಲಿವುಡ್‌ ನಟಿ ಪಾಯಲ್‌ ಘೋಷ್‌ ಆರೋಪಿಸಿದ್ದಾರೆ.

ಸೋಮವಾರ ಮೆಡಿಕಲ್‌ನಿಂದ ಕೆಲ ಔಷಧಗಳನ್ನು ಪಡೆದು ಕಾರ್‌ ಹತ್ತುವ ಸಂದರ್ಭದಲ್ಲಿ ಬೈಕ್‌ ಮೇಲೆ ದಾವಿಸಿದ ಮುಸುಕುಧಾರಿಗಳು ನನ್ನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲು ಮುಂದಾದರು ಎಂದಿದ್ದಾರೆ.

Tap to resize

ಅವರ ಕೈಗಳಲ್ಲಿ ಬಾಟಲ್‌ವೊಂದಿತ್ತು. ಬಹುಶಃ ಅದು ಆ್ಯಸಿಡ್‌ ಆಗಿರಬಹುದು. ಅವರಿಂದ ಹೇಗೋ ತಪ್ಪಿಸಿಕೊಂಡು ಪಾರಾದೆ. ಈ ವೇಳೆ ಕೈಗೆ ಸ್ವಲ್ಪ ಪೆಟ್ಟಾಗಿದೆ ಎಂದು ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ. ಪಾಯಲ್‌ ಬಾಲಿವುಡ್‌ ಸಿನಿಮಾ ನಿರ್ದೇಶಕ ಅನುರಾಗ್‌ ಕಶ್ಯಪ್‌ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಸುದ್ದಿಯಾಗಿದ್ದರು. ಇದು ಹಿಂದಿ ಚಿತ್ರರಂಗದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.

ನಟಿ ಯಾರನ್ನಾದರೂ ಅನುಮಾನಿಸುತ್ತಿದ್ದಾರೆಯೇ ಎಂದು ಮಾಧ್ಯಮದೊಂದಿಗೆ ಮಾತನಾಡಿ, ಖಂಡಿತಾವಗಿ ಅವರು ನನ್ನ ಹಿತೈಷಿಯಲ್ಲ. ಆದರೆ ಎಲ್ಲವನ್ನೂ ಪ್ಲಾನ್ ಮಾಡಿ ಮಾಡಿದಂತಿದೆ ಎಂದಿದ್ದಾರೆ.

ಸಿನಿಮಾ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾನು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಯೋಜಿಸುತ್ತಿದ್ದೇನೆ ಎಂದಿರುವ ನಟಿ ಕೇಂದ್ರ ಸಚಿವ ರಾಮ್‌ದಾಸ್ ಅವರನ್ನು ಭೇಟಿ ಮಾಡಿದ್ದಾರೆ.

Latest Videos

click me!