ಮತ್ತೊಂದೆಡೆ, ಕಾರ್ತಿಕ್ ಆರ್ಯನ್ ಅಭಿನಯದ 'ಢಾಕಡ್' ಚಿತ್ರದ ಜೊತೆಗೆ ಬಿಡುಗಡೆಯಾದ 'ಭೂಲ್ ಭುಲೈಯಾ 2' ಮೊದಲ ದಿನವೇ ಬಚ್ಚನ್ ಪಾಂಡೆ, ಗಂಗೂಬಾಯಿ ಕಥಿಯಾವಾಡಿ ಸೇರಿದಂತೆ ಯಾವುದೇ ಬಾಲಿವುಡ್ ಚಿತ್ರ ಗಳಿಸಲು ಸಾಧ್ಯವಾಗದಂತಹ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಹಿಂದಿ ಚಿತ್ರರಂಗದಲ್ಲಿ ಈ ವರ್ಷದ ಅತಿದೊಡ್ಡ ಓಪನಿಂಗ್ ಎಂದರೆ ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ', ಬಿಡುಗಡೆಯಾದ ಮೊದಲ ದಿನವೇ 13.25 ಕೋಟಿ ಗಳಿಸಿದೆ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ಮತ್ತು ಟಬು ಅಭಿನಯದ ಚಿತ್ರ 'ಭೂಲ್ ಭುಲಯ್ಯ 2' ಈ ದಾಖಲೆಯನ್ನು ಮುರಿದು ಸುಮಾರು 14.75 ಕೋಟಿ ರೂ ಗಳಿಸಿದೆ