ಹುಡುಗಿಯರ ಆತ್ಮಹತ್ಯೆಗೆ ಕಾರಣವಾದ ನಟನ ಕಪ್ಪು ಕೋಟು; ಧರಿಸದಂತೆ ನ್ಯಾಯಾಲಯದಿಂದ ನಿಷೇಧ!

First Published Sep 26, 2022, 4:27 PM IST

ಸ್ಟೈಲ್‌ ಮತ್ತು ತಮ್ಮ ಧ್ವನಿಯ ಮೂಲಕ  ಪ್ರಸಿದ್ಧರಾದ ಬಾಲಿವುಡ್‌ ನಟ ದೇವ್ ಆನಂದ್ (Dev Anand) ಅವರ 99 ನೇ ಜನ್ಮದಿನ ಇಂದು.  ಸೆಪ್ಟೆಂಬರ್ 26 ರಂದು 1923 ರಲ್ಲಿ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಜನಿಸಿದ ದೇವ್ ಆನಂದ್ ಇಂದಿಗೂ ನೆನಪಿನಲ್ಲಿರುವ ಆ ಕಾಲದ  ಕೆಲವೇ ಬಾಲಿವುಡ್‌ ಸ್ಟಾರ್ಸ್‌ಲ್ಲಿ ಒಬ್ಬರು.  ಸೂಪರ್‌ಸ್ಟಾರ್ ದೇವ್ ಆನಂದ್   ಧರಿಸಿದ್ದ ಕಪ್ಪು ಕೋಟ್‌ಗೆ ಹುಡುಗಿಯರು ಹುಚ್ಚು ಅಭಿಮಾನಿಯಾಗಿದ್ದರು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಕಪ್ಪು ಕೋಟ್ ಧರಿಸಿದ್ದ ಈತನನ್ನು ನೋಡಿ ಹುಡುಗಿಯರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ದೇವ್ ಆನಂದ್ ಅವರಿಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ. 

ಬಾಲಿವುಡ್‌ಗೆ ಹಲವು ಹಿಟ್‌ ಚಿತ್ರಗಳನ್ನು ನೀಡಿದ ದೇವ್ ಆನಂದ್ ಅವರು ತಮ್ಮ ಕಾಲದಲ್ಲಿ ಬಿಳಿ ಅಂಗಿ ಮತ್ತು ಕಪ್ಪು ಕೋಟ್ ಸಾಕಷ್ಟು ಜನಪ್ರಿಯಗೊಳಿಸಿದ್ದರು. ಜನರು ಅದರ ಈ ಸ್ಟೈಲಿಗೆ ಫಿದಾ ಆಗಿದ್ದರು ಮತ್ತು ಅದನ್ನು ಕಾಪಿ ಮಾಡಲು  ಪ್ರಾರಂಭಿಸಿದರು.

ದೇವ್ ಆನಂದ್ ಬಿಳಿ ಶರ್ಟ್ ಮತ್ತು ಕಪ್ಪು ಕೋಟಿನ ಟ್ರೆಂಡ್‌ ಪ್ರಾರಂಭಿಸಿದರು. ಆದರೆ ಇದರ ಒಂದು ಅಘಾತ  ಸಂಭವಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ದೇವ್ ಆನಂದ್‌ ಅವರು ಅದನ್ನು ಧರಿಸಿದಂತೆ ನ್ಯಾಯಾಲಯವು ನಿಷೇಧಿಸಿತ್ತು.

ದೇವ್ ಆನಂದ್ ಅವರು ಬಿಳಿ ಶರ್ಟ್ ಮತ್ತು ಕಪ್ಪು ಕೋಟು ಧರಿಸುವುದನ್ನು ನಿಷೇಧಿಸಿದ ಹಿಂದೆ ದೊಡ್ಡ ಕಾರಣವಿದೆ. ಹುಡುಗಿಯರು ಕಪ್ಪು ಕೋಟಿನಲ್ಲಿ ಅವರನ್ನು ನೋಡಿದಾಗಲೆಲ್ಲಾ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕಾಯಿತು.

ಅವರ ನಿಜವಾದ ಹೆಸರು ದೇವ್ ಆನಂದ್ ಅಲ್ಲ ಧರ್ಮದೇವ್ ಪಿಶೋರಿಮಲ್ ಆನಂದ್. ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಅವರು ತಮ್ಮ ಹೆಸರನ್ನು ಬದಲಾಯಿಸಿದರು. ಈ ನಟನಿಗೆ  ಪದವಿ ಮುಗಿಸಿ ಮುಂದೆ ಓದುವ ಆಸೆಯಿತ್ತು, ಆದರೆ ಮುಂದೆ ಓದಲು ಹಣವಿಲ್ಲ ಎಂದು ತಂದೆ ನಿರಾಕರಿಸಿದ್ದರು ಎನ್ನಲಾಗಿದೆ.

ದೇವ್ ಆನಂದ್ ಮುಂದೆ ಓದಲು ಸಾಧ್ಯವಾಗಲಿಲ್ಲ ಆದರೆ ಅವರು ತಮ್ಮ ನಟನೆಯ ಕನಸನ್ನು ನನಸಾಗಿಸಲು ಮುಂಬೈಗೆ ಬಂದರು. ಕಷ್ಟಪಟ್ಟು ಕೆಲಸ ಮಾಡಿದರೂ ಚಿತ್ರಗಳು ಸಿಗದೇ ಇದ್ದಾಗ ಜೀವನೋಪಾಯಕ್ಕಾಗಿ ಮಿಲಿಟರಿ ಸೆನ್ಸಾರ್ ಕಚೇರಿಯಲ್ಲಿ ಕೆಲಸ ಆರಂಭಿಸಿದರು.
 

ಒಂದು ವರ್ಷ ಕೆಲಸ ಮಾಡಿದ ನಂತರ,  ಇಪ್ಟಾದೊಂದಿಗೆ ಸಂಬಂಧ ಹೊಂದಿದ್ದ ಅವರ ಅಣ್ಣ ಚೇತನ್ ಆನಂದ್ ಬಳಿಗೆ ಹೋದರು. ಈ ಸಮಯದಲ್ಲಿ ದೇವ್ ಆನಂದ್ ಅವರಿಗೆ ನಾಟಕಗಳಲ್ಲಿ ಕೆಲಸ ಮಾಡುವ ಅವಕಾಶವೂ ಸಿಕ್ಕಿತು.

ಅವರು 1946 ರ ಚಲನಚಿತ್ರ ಹಮ್ ಏಕ್ ಹೈ ಮೂಲಕ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದರು. ಆದರೆ, ಜಿದ್ದಿ ಸಿನಿಮಾದಿಂದ ಗುರುತಿಸಿಕೊಂಡರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.

ಅವರು ಕಾಲಾ ಬಜಾರ್, ಸಿಐಡಿ, ಕಾಲಾ ಪಾನಿ, ತೇರೆ ಘರ್ ಕೆ ಸಾಮ್ನೆ, ಜ್ಯುವೆಲ್ ಥೀಫ್, ಹೀರಾ ಪನ್ನಾ, ಹರೇ ರಾಮ ಹರೇ ಕೃಷ್ಣ, ಪ್ರೇಮ್ ಪೂಜಾರಿ, ಗೈಡ್, ಜಾನಿ ಮೇರಾ ನಾಮ್ ಮುಂತಾದ ಅನೇಕ ಹಿಟ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

click me!