ದೀಪಿಕಾ-ರಣ್ವೀರ್, ಐಶ್ವರ್ಯಾ, ಸಲ್ಮಾನ್, ಕತ್ರಿನಾ; ಅನಂತ್ ಅಂಬಾನಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್

First Published Jan 20, 2023, 10:57 AM IST

ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಅನಂತ್ ಅಂಬಾನಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್ ಭಾಗಿಯಾಗಿದ್ದರು. 

ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. 

ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಅಂಬಾನಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಮುಕೇಶ್ ಅಂಬಾನಿ ಆ್ಯಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದ್ದು ಕುಟುಂಬ ಸದಸ್ಯರು, ಸ್ನೇಹಿತರು, ಆಪ್ತರು ಭಾಗಿಯಾಗಿದ್ದರು. ಗುಜರಾತಿ ಸಂಪ್ರದಾಯದ ಪ್ರಕಾರ ಉಂಗುರ ಬದಲಾಯಿಸಿಕೊಂಡಿದ್ದಾರೆ. 

Latest Videos


ಅಂಬಾನಿ ಮಗನ ಮದುವೆಯಲ್ಲಿ ಜಾನ್ವಿ ಕಪೂರ್ ಮತ್ತು ಸಹೋದರಿ ಖುಷಿ ಕಪೂರ್ ಇಬ್ಬರೂ ಹಾಜರಾಗಿದ್ದರು. ಸಹೋದರಿಯರು ಇಬ್ಬರೂ ಕ್ಯಮರಾ ಮುಂದೆ ಕ್ಯೂಟ್ ಪೋಸ್ ನೀಡಿ ಸಮಾಂಭಕ್ಕೆ ಎಂಟ್ರಿ ಕೊಟ್ಟರು. ಇಬ್ಬರು ಹೆವಿ ಎಂಬ್ರಾಯಿಡರಿ ಡಿಸೈನ್ ಇರುವ ಲೆಹಂಗಾ ಧರಿಸಿದ್ದರು. 
 

Anant Ambani

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮಗಳು ಆರಾಧ್ಯಾ ಜೊತೆ ನಿಶ್ಚಿತಾರ್ಥ ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ದರು. ಹಸಿರು ಬಣ್ಣದ ಹೆವಿ ಡಿಸೈನ್ ಇರುವ ಸೆಲ್ವರ್ ಧರಿಸಿದ್ದರು. ಮಗಳು ಆರಾಧ್ಯಾ ಕೂಡ ಸೆಲ್ವರ್ ಧರಿಸಿದ್ದರು. ಇಬ್ಬರೂ ಪಾಪಾರಾಜಿಗಳಿಗೆ ಪೋಸ್ ನೀಡಿದ್ದಾರೆ. ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಲ್ಮಾನ್ ಖಾನ್ ಕೂಡ ಅಂಬೀನಿ ಪುತ್ರನ ನಿಶ್ಚಿತಾರ್ಥ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಜೊತೆ ಸಹೋದರಿಯ ಪುತ್ರಿ ಕೂಡ ಸಾಥ್ ನೀಡಿದರು. ಸಹೋದರಿಯ ಪುತ್ರಿಯ ಜೊತೆ ಸಲ್ಮಾನ್ ಫೋಟೋಗೆ ಪೋಸ್ ನೀಡಿದರು. ನೀಲಿ ಬಣ್ಣದ ಶಾರ್ವಾನಿ ಧರಿಸಿದ್ದ ಸಲ್ಮಾನ್ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Anant Ambani

ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಂಪತಿ ಕೂಡ ಅನಂತ್ ಅಂಬಾನಿಯ ನಿಶ್ಚಿತಾರ್ಥ ಸಂಭ್ರಮದಲ್ಲಿ ಹಾಜರಿದ್ದರು. ದೀಪಿಕಾ ಕೆಂಪು ಬಣ್ಣದ ಎಂಬ್ರಾಯಿಡರಿ ಡಿಸೈನ್ ಮಾಡಿರುವ ಸೀರೆ ಧರಿಸಿದ್ದರು. ಕೊರಳಿಗೆ ಆಭರಣ ಹಾಕಿದ್ದರು. ಇನ್ನೂ ರಣ್ವೀರ್ ಸಿಂಗ್ ನೀಲಿ ಬಣ್ಣದ ಬಟ್ಟೆ ಧರಿಸಿದ್ದರು. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಅನನ್ಯಾ ಪಾಂಡೆ ಬಿಳಿ ಬಣ್ಣದ ಲೆಹಂಗಾ ಧರಿಸಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟರು. ಅನನ್ಯಾ ಜೊತೆ ಅರ್ಜುನ್ ಕಪೂರ್ ಕೂಡ ಕ್ಯಾಮರಾಗೆ ಪೋಸ್ ನೀಡಿದರು. ನೀತು ಕಪೂರ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಅನಂತ್ ಅಂಬಾನಿ ನಿಷ್ತಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. 

ಅಂದಹಾಗೆ ಅಂಬಾನಿ ಮನೆಯ ಸಂಭ್ರಮ ಅಂದ್ಮೇಲೆ ಬಾಲಿವುಡ್ ಸ್ಟಾರ್ಸ್ ಇಲ್ಲದೇ ಸಂಪೂರ್ಣ ಆಗಲು ಸಾಧ್ಯವೇ ಇಲ್ಲ. ಅಂಬಾನಿ ಮನೆಯ ಅದ್ದೂರಿ ಸಮಾರಂಭದಲ್ಲಿ ಬಾಲಿವುಡ್ ನ ಅನೇಕ ಮಂದಿ ಹಾಜರಾಗಿದ್ದರು. ಕಲಾವಿದರು ಕ್ಯಾಮರಾ ಮುಂದೆ ಪೋಸ್ ನೀಡಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

click me!