ದಕ್ಷಿಣ ಭಾರತದ ಸ್ಟಾರ್ ದಂಪತಿ ಸಮಂತಾ ಅಕ್ಕಿನೇನಿ(Samantha Akkineni) ಮತ್ತು ನಾಗ ಚೈತನ್ಯ ಅವರು ಅಕ್ಟೋಬರ್ 2 ರ ಶನಿವಾರ ಪತಿ -ಪತ್ನಿಯಾಗಿ ಬೇರೆಯಾಗುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲೇ ಅವರ ವಿಚ್ಚೇದನೆ ಕಾರಣದ ಕುರಿತ ಚರ್ಚೆ ಹೆಚ್ಚಾಗಿದೆ.
211
ಸಮಂತಾ ಮತ್ತು ಚೈತನ್ಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಆಲೋಚನೆಯ ನಂತರ ಸ್ಯಾಮ್ ಮತ್ತು ನಾನು ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದೆವು. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಅದು ನಮ್ಮ ಸಂಬಂಧದ ಮೂಲವಾಗಿತ್ತು ಎಂದಿದ್ದರು ಜೋಡಿ.
311
ಅದು ಇನ್ನೂ ಇರಲಿದೆ ಎಂದು ನಂಬುತ್ತೇವೆ, ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು(Fans), ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮುಂದುವರಿಯಲು ಬೇಕಾದ ಖಾಸಗಿತನವನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ ಎಂದಿದ್ದರು.
411
ಈಗಾಗಲೇ ಸೌತ್‌ನ ಕ್ಯೂಟ್ ಜೋಡಿಯಾಗಿದ್ದ ಸಮಂತಾ-ನಾಗ್ ವಿಚ್ಚೇದನೆಗೆ ಕಾರಣಗಳೇನೆಂಬ ಚರ್ಚೆಗಳಾಗಿದೆ. ಆದರೆ ಈ ಬಗ್ಗೆ ಜೋಡಿಗಳ್ಯಾರು ಏನೂ ಹೇಳಿಲ್ಲ. ತಮ್ಮ ವಿಚ್ಚೇದನೆ ಕಾರಣ ಬಹಿರಂಗಪಡಿಸಿಲ್ಲ.
511
ನಾಗ ಚೈತನ್ಯನ ಕುಟುಂಬ ಸಮಂತಾ ಬೋಲ್ಡ್ ಪಾತ್ರಗಳನ್ನು ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ ಹಾಗಾಗಿ ಇದು ಕಲಹವಾಗಿತ್ತು ಎನ್ನಲಾಗಿತ್ತು. ಸಮಂತಾ ಡಿಸೈನರ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ
611
ಆದರೆ ಸಮಂತಾ ಅಥವಾ ನಾಗ ಚೈತನ್ಯ ಇಬ್ಬರೂ ತಮ್ಮ ದಾಂಪತ್ಯದಲ್ಲಿ ಏನು ತಪ್ಪಾಗಿದೆ ಎಂಬುದರ ಬಗ್ಗೆ ಮಾತನಾಡಿಲ್ಲ. ಮಗುವನ್ನು ಹೊಂದು ಬಗ್ಗೆ ಜೋಡಿ ಮಧ್ಯೆ ಭಿನ್ನಾಭಿಪ್ರಾಯ ಇತ್ತು ಎಂದೂ ಹೇಳಲಾಗುತ್ತಿದೆ.
711
ತನ್ನ ಎಲ್ಲಾ ಸೋಷಿಯಲ್ ಮೀಡಿಯಾ ಎಕೌಂಟ್‌ಗಳಲ್ಲಿ ಸಮಂತಾ ತನ್ನ ಗಂಡನ ಸರ್ ನೇಮ್ ಅಕ್ಕಿನೇನಿಯನ್ನು ತೆಗೆದುಹಾಕಿದಾಗ ಈ ಜೋಡಿಯ ವಿಚ್ಛೇದನದ ವದಂತಿಗಳು ಪ್ರಾರಂಭವಾಗಿದ್ದವು.
811
ಸಮಂತಾ ಮುಂಬೈಗೆ(Mumbai) ಶಿಫ್ಟ್ ಅಗುವ ಬಗ್ಗೆ ಮಾಧ್ಯಮ ಸುದ್ದಿಯಾಗಿತ್ತು. ಆದರೆ ನಟಿ ತಾವು ಹೈದರಾಬಾದ್ ಬಿಟ್ಟು ಹೋಗುವುದಿಲ್ಲ ಎಂದು ವದಂತಿಗೆ ಫುಲ್‌ಸ್ಟಾಪ್ ಇಟ್ಟರು.
ಇತರ ನೂರು ವದಂತಿಗಳಂತೆ, ಇದು ನಿಜವಲ್ಲ. ಈ ವದಂತಿ ಎಲ್ಲಿಂದ ಶುರುವಾಯಿತೋ ಗೊತ್ತಿಲ್ಲ. ಹೈದರಾಬಾದ್(Hyderabad) ನನ್ನ ಮನೆ, ಮತ್ತು ಇದು ಯಾವಾಗಲೂ ನನ್ನ ಮನೆ. ಈ ಸ್ಥಳವು ನನಗೆ ಎಲ್ಲವನ್ನೂ ನೀಡುತ್ತಿದೆ. ನಾನು ಇಲ್ಲಿ ಸಂತೋಷದಿಂದ ಮುಂದುವರಿಯುತ್ತೇನೆ ಎಂದಿದ್ದರು.
1011
ಸಮಂತಾ ಅವರು ಕಾತು ವಾಕುಲಾ ಎರಡು ಕಾದಲ್ ನಲ್ಲಿ ವಿಜಯ್ ಸೇತುಪತಿ ಮತ್ತು ಕೀರ್ತಿ ಸುರೇಶ್, ನಯನತಾರಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
1111
ಸಮಂತಾ ಡಿಸೈನರ್(Designer) ಜೊತೆಗೆ ಕ್ಲೋಸ್ ಆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದ್ದು ವಿಚ್ಚೇದನೆ ಆಗಿರುವುದಕ್ಕೆ ಇದೇ ಕಾರಣ ಎಂದೂ ಚರ್ಚೆಯಾಗುತ್ತಿದೆ