Anant Ambani Engagement; ದೀಪಿಕಾ ಧರಿಸಿದ ಸೀರೆಯ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರ, ಲಕ್ಷಕ್ಕೂ ಅಧಿಕ

Published : Jan 20, 2023, 04:20 PM IST

ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಂಭ್ರಮದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಲುಕ್ ಗಮನ ಸೆಳೆಯುತ್ತಿದೆ. ದೀಪಿಕಾ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ಅಚ್ಚರಿ ಪಡುತ್ತೀರಿ.

PREV
16
Anant Ambani Engagement; ದೀಪಿಕಾ ಧರಿಸಿದ ಸೀರೆಯ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರ, ಲಕ್ಷಕ್ಕೂ ಅಧಿಕ

ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.

26

ನಿಶ್ಚಿತಾರ್ಥ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ಸ್ ಹಾಜರಿದ್ದರು. ಬಿ ಟೌನ್ ಮಂದಿಯಲ್ಲಿ ಹೆಚ್ಚು ಗಮನ ಸೆಳೆದಿದ್ದು ದೀಪಿಕಾ ಮತ್ತು ರಣ್ವೀರ್ ಸಿಂಗ್ ಜೋಡಿ. ದೀಪಿಕಾ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ದೀಪ್‌ವೀರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 

36

ಫ್ಯಾಷನ್ ವಿಚಾರವಾಗಿ ಆಗಾಗ ಗಮನ ಸೆಳೆಯುವ ನಟಿ ದೀಪಿಕಾ ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲೂ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 
 

46

ದೀಪಿಕಾ ಧರಿಸಿದ್ದ ಸೀರೆ ಬರೊಬ್ಬರಿ ರೇಷ್ಮೆಯದ್ದಾಗಿದೆ. ಆರ್ಗಾಂಜ ಸೀರೆ ಇದಾಗಿದ್ದು ಅಷ್ಟೇ ದುಬಾರಿ ಕೂಡ ಆಗಿದೆ. ಈ ಸೀರೆಯ ಬೆಲೆ 149,500 ರೂಪಾಯಿ ಆಗಿದೆ. ಡೋರಿ ಕಸೂತಿ, ಚೆವ್ರಾನ್ ಲೇಸ್ ಮತ್ತು ಆಭರಗಳಿಂದ ತುಂಬಿದ ಬಾರ್ಡರ್ ಸೀರೆ ದೀಪಿಕಾ ಧರಿಸಿದ್ದರು. ಎಂಬ್ರಾಯಿಡರಿ ಬ್ಲೌಸ್ ಧರಿಸಿದ್ದರು. 

56

ದುಬಾರಿ ಸೀರೆ ಜೊತೆಗೆ ಆಭರಣ ಕೂಡ ಗಮನ ಸಳೆಯುತ್ತಿತ್ತು. ಮಾಯಾ ಸಾಂಘವಿ ಜ್ಯುವೆಲ್ಸ್‌ ಅನ್ನು ಧರಿಸಿದ್ದರು. ಇನ್ನೂ ರಣ್ವೀರ್ ಸಿಂಗ್ ಲುಕ್ ಕೂಡ ವೈರಲ್ ಆಗಿದೆ.

66

ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಅಂಬಾನಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಮುಕೇಶ್ ಅಂಬಾನಿ ಆ್ಯಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದ್ದು ಕುಟುಂಬ ಸದಸ್ಯರು, ಸ್ನೇಹಿತರು, ಆಪ್ತರು ಭಾಗಿಯಾಗಿದ್ದರು. ಗುಜರಾತಿ ಸಂಪ್ರದಾಯದ ಪ್ರಕಾರ ಉಂಗುರ ಬದಲಾಯಿಸಿಕೊಂಡರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories