ಪ್ರಿಯಾ ಪ್ರಕಾಶ್ ವಾರಿಯನ್ ಎನ್ನುವುದಕ್ಕಿಂತ ಕಣ್ಸನ್ನೆ ಸುಂದರಿ ಎಂದರೆ ಥಟ್ ಅಂತ ಎಲ್ಲರಿಗೂ ಗೊತ್ತಾಗಲಿದೆ. `ಒರು ಆಡಾರ್ ಲವ್’ ಸಿನಿಮಾ ಮೂಲಕ ರಾಷ್ಟ್ರಮಟ್ಟದ ಗಮನ ಸೆಳೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಸಿನಿಮಾ ಬಳಿಕ ಪ್ರಿಯಾ ನಟಿಸಿದ ಚಿತ್ರಗಳು ಹಿಟ್ ಆಗದಿದ್ದರೂ ಪ್ರಿಯಾ ಸದಾ ಸುದ್ದಿಯಲ್ಲಿರುತ್ತಾರೆ.
27
ಪ್ರಿಯಾ ಸದ್ಯ ಮಲಯಾಳಂ ಜೊತೆಗೆ ಬೇರೆ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತಗೆ ಪ್ರಿಯಾ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿರುವ ನಟಿ ಪ್ರಿಯಾ ಪ್ರಕಾಶ್ ಒಂದಿಷ್ಟು ಸುಂದರು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
37
ಬೋಲ್ಡ್ ಆಗಿ ಪೋಸ್ ನೀಡುತ್ತಿದ್ದ ನಟಿ ಪ್ರಿಯಾ ಪ್ರಕಾಶ್ ಇದೀಗ ಸೀರೆ ಧರಿಸಿ ಟ್ರಡೀಷನಲ್ ಲುಕ್ ನಲ್ಲಿ ಪೋಸ್ ನೀಡಿದ್ದಾರೆ. ಪ್ರಿಯಾ ಅವರ ರಾಯಲ್ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
47
ಗೋಲ್ಡನ್ ಬಣ್ಣದ ಸೀರೆಯಲ್ಲಿ ಪ್ರಿಯಾ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಕೊರಳಿಗೆ ಮತ್ತು ಕಿವಿಗೆ ಹೆವಿ ಆಭರಣ ಧರಿಸಿದ್ದಾರೆ. ರಾಣಿಯ ಹಾಗೆ ಮಿಂಚಿರುವ ಪ್ರಿಯಾ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.
57
ಪ್ರಿಯಾ ಸುಂದರ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಹುಡುಗರ ಹೃದಯ ಗತಿ ಏನು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಲೈಕ್ಸ್ ಒತ್ತಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
67
ತಮ್ಮ ಕಣ್ಸನ್ನೆ ವೀಡಿಯೋ ಮೂಲಕ ರಾತ್ರೋ ರಾತ್ರಿ ಫೇಮಸ್ ಆದ ನಟಿ ಪ್ರಿಯಾ ನಂತರ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಬಿಗ್ ಬ್ರೇಕ್‌ಗಾಗಿ ಕಾಯ್ತಿದ್ದಾರೆ.
77
ಇನ್ನೂ ಪ್ರಿಯಾ ಕನ್ನಡ ಸಿನಿಮಾದಲ್ಲೂ ಮಿಂಚಿದ್ದಾರೆ. ಶ್ರೇಯಸ್ ಮಂಜು ಅವರಿಗೆ ಜೋಡಿಯಾಗಿ ಕನ್ನಡದ ವಿಷ್ಣು ಪ್ರಿಯಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಬಳಿಕ ಮತ್ತೆ ಕನ್ನಡಕ್ಕೆ ಬಂದಿಲ್ಲ. ಸದ್ಯ ಮಲಯಾಳಂ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.