ರಣಬೀರ್ ಕಪೂರ್ ಜೊತೆ ನಟಿಸಿದ ನಟಿಯರು ಇವರು, ಯಾರ ಯಾರ ಜೊತೆ ಡೇಟಿಂಗ್ ಮಾಡಿದ್ದಾರೆ!

First Published | Nov 29, 2023, 5:30 PM IST

ಬಾಲಿವುಡ್‌ನ ಹ್ಯಾಂಡ್‌ಸಮ್‌ ನಟ ರಣಬೀರ್‌ ಕಪೂರ್‌ (Ranbir Kapoor) ಅವರ ಆನಿಮಲ್‌ (Animal) ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಡಿಸೆಂಬರ್‌ ಒಂದರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ  (Rashmika Mandanna) ರಣಬೀರ್‌ ಅವರಿಗೆ ಜೋಡಿಯಾಗಿದ್ದಾರೆ. ರಣಬೀರ್ ಕಪೂರ್ ಅವರ ಜೊತೆ ಕೆಲಸ ಮಾಡಿದ ಸಹ ತಾರೆಯರ ಪಟ್ಟಿ ಇಲ್ಲಿದೆ.

ಸೋನಮ್‌ ಕಪೂರ್:
ಸಾವಾರಿಯಾ ಇದು ರಣಬೀರ್ ಕಪೂರ್ ಅವರ ಚೊಚ್ಚಲ ಚಿತ್ರ. ಇದರಲ್ಲಿ ಅವರು ಸೋನಮ್ ಕಪೂರ್ ಅವರೊಂದಿಗೆ ಜೋಡಿಯಾಗಿ ನಟಿಸಿದ್ದಾರೆ, ಈ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. 

ಕೊಂಕಣಾ ಸೇನ್ ಶರ್ಮಾ:
ಇಯಾನ್ ಮುಖರ್ಜಿ ನಿರ್ದೇಶನದ ವೇಕಪ್‌ ಸಿದ್ ಚಿತ್ರದಲ್ಲಿ ರಣಬೀರ್‌ ಕಪೂರ್‌ ಅವರು ಕೊಂಕಣಾ ಸೇನ್‌ ಶರ್ಮಾ ಜೊತೆ ನಟಿಸಿದ್ದಾರೆ . ಈ ಸಿನಿಮಾದಲ್ಲಿ ರಣಬೀರ್  ಕೇರ್‌ಲೆಸ್ ಶ್ರೀಮಂತ ಕಾಲೇಜು ಹುಡುಗನ  ಪಾತ್ರವನ್ನು ನಿರ್ವಹಿಸಿದ್ದಾರೆ.

Tap to resize

ಕತ್ರಿನಾ ಕೈಫ್:
ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಅಜಬ್ ಪ್ರೇಮ್ ಕಿ ಗಜಬ್ ಕಹಾನಿಯಲ್ಲಿ ಕತ್ರಿನಾ ಕೈಫ್ ಎದುರು ರಣಬೀರ್ ಕಪೂರ್ ಜೋಡಿಯಾಗಿದ್ದರು. 
 

ನರ್ಗಿಸ್ ಫಕ್ರಿ:
ಇಮ್ತಿಯಾಜ್ ಅಲಿ ನಿರ್ದೇಶನದ ರಾಕ್‌ಸ್ಟಾರ್‌ನಲ್ಲಿ ರಣಬೀರ್ ಕಪೂರ್ ಸಂಗೀತಗಾರನ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಮಾದಲ್ಲಿ ಸಹನಟಿಯಾಗಿರುವ  ನರ್ಗಿಸ್ ಫಕ್ರಿ ಅವರ ಜೊತೆ ರಣಬೀರ್‌ ಕೆಮಿಸ್ಟ್ರಿ  ಭಾರೀ ಮೆಚ್ಚುಗೆಗೆ ಪಾತ್ರವಾಯಿತು. 

ಪ್ರಿಯಾಂಕಾ ಚೋಪ್ರಾ:
ಬರ್ಫಿ ಈ  ಹಾಟ್ ವಾರ್ಮಿಂಗ್ ಅನುರಾಗ್ ಬಸು ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಿಯಾಂಕಾ ಚೋಪ್ರಾ ಮತ್ತು ಇಲಿಯಾನಾ ಡಿಕ್ರೂಜ್ ಅವರೊಂದಿಗೆ ನಟಿಸಿದ್ದಾರೆ. 
 

ದೀಪಿಕಾ ಪಡುಕೋಣೆ:
ಅಯಾನ್ ಮುಖರ್ಜಿ ನಿರ್ದೇಶಿಸಿದ ಯೇ ಜವಾನಿ ಹೇ ದೀವಾನಿ ರೊಮ್ಯಾಂಟಿಕ್ ಡ್ರಾಮಾದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ರಣಬೀರ್ ಕಪೂರ್ ತೆರೆ ಹಂಚಿಕೊಂಡಿದ್ದಾರೆ. 
 

ರಶ್ಮಿಕಾ ಮಂದಣ್ಣ:
ಆನಿಮಲ್‌ ಸಿನಿಮಾದಲ್ಲಿ ರಣಬೀರ್ ಕಪೂರ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. ಡಿಸೆಂಬರ್‌ 1ರಂದು ಬಿಡುಗಡೆಗೆ ಸಿದ್ಧವಾಗಿರುವ  ಈ ಸಿನಿಮಾದ  ಟ್ರೇಲರ್ ಈಗಾಗಲೇ  ಭಾರೀ ಹವಾ ಸೃಷ್ಟಿಸಿದೆ ಮತ್ತು  ಜೋಡಿಯನ್ನು ಹಿಟ್ ಮಾಡುವ ನಿರೀಕ್ಷೆಯಿದೆ. 

Latest Videos

click me!