2135 ಕೋಟಿ ರೂ. ಬಂಡವಾಳ, ಬಾಲಿವುಡ್‌ಗೆ ಠಕ್ಕರ್‌ ಕೊಡಲು ರೆಡಿಯಾಗಿದೆ ದಕ್ಷಿಣ ಭಾರತದ ಈ 6 ಚಿತ್ರಗಳು!

First Published Nov 29, 2023, 1:39 PM IST

ಇತ್ತೀಚಿನ ದಿನಗಳಲ್ಲಿ  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವಾರು ಉತ್ತಮ ಚಿತ್ರಗಳು ಬರುತ್ತಿವೆ, ಅದು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿ ಇತಿಹಾಸ ಸೃಷ್ಟಿಸುತ್ತಿದೆ. ಇದೀಗ ದಕ್ಷಿಣ ಭಾರತದ ಹಲವು ಚಿತ್ರಗಳು ಬಾಲಿವುಡ್‌ ಚಿತ್ರರಂಗಕ್ಕೆ ಠಕ್ಕರ್‌ ಕೊಡಲು ಮುಂದಾಗಿದೆ. ಬಹುನೀರೀಕ್ಷಿತ ಚಿತ್ರಗಳ ಪಟ್ಟಿ ಇಲ್ಲಿದೆ.
 

ದಕ್ಷಿಣದ ಚಿತ್ರ ಕಾಂತಾರ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಈಗ ಅದರ ಮುಂದುವರಿದ ಭಾಗದ ಚಿತ್ರೀಕರಣ ನಡೆಯುತ್ತಿದೆ.  ಕಾಂತಾರ ಅಧ್ಯಾಯ 1 ರ ಮೊದಲ ಟೀಸರ್  ಬಿಡುಗಡೆಯಾಗಿದ್ದು, 1ಕೋಟಿ 90 ಲಕ್ಷಕ್ಕೂ ಹೆಚ್ಚು ಜನ ಎರಡು ದಿನದಲ್ಲಿ ವೀಕ್ಷಿಸಿದ್ದಾರೆ. ಸಹಜವಾಗಿ ಜನರ ಉತ್ಸಾಹವನ್ನು ಹೆಚ್ಚಿಸಿದೆ. ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಚಿತ್ರ 400 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಇದರ ಎರಡನೇ ಭಾಗವಾಗಿ ಕಾಂತಾರ ಅಧ್ಯಾಯ 1  ಚಿತ್ರ ಮುಂದಿನ ವರ್ಷದ ಕೊನೆಗೆ ರಿಲೀಸ್ ಆಗಲಿದೆ. 125 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿದ್ದು, ಅದನ್ನು ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.

ಬಾಲಿವುಡ್‌ ಚಿತ್ರರಂಗಕ್ಕೆ ಟಕ್ಕರ್ ಕೊಡಲು ಸೌತ್ ಸಿನಿ ಜಗತ್ತಿನಲ್ಲಿ ಅನೇಕ ಸಿನೆಮಾಗಳು ದೊಡ್ಡ ಮಟ್ಟದಲ್ಲಿ ಚಿತ್ರೀಕರಣಗೊಂಡು ಬ್ಲಾಕ್‌ಬಸ್ಟರ್ ಚಿತ್ರವಾಗಿ ಮೂಡಿಬರಲು ತಯಾರಿ ನಡೆಸುತ್ತಿವೆ.  ಒಟ್ಟು ಆರು ಚಿತ್ರಗಳಿಗೆ ನಿರ್ಮಾಪಕರು 2135 ಕೋಟಿ ರೂ. ಬಂಡವಾಳ ಹಾಕಿದ್ದು, ಈ ಎಲ್ಲಾ ಚಿತ್ರಗಳ ಟೀಸರ್‌ಗಳನ್ನು ನೋಡಿದ ನಂತರ, ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ. ಈ ಕಥೆಗಳು ಹೃದಯಗಳನ್ನು ಗೆಲ್ಲುವುದು ಮಾತ್ರವಲ್ಲದೆ ಬಾಕ್ಸ್ ಆಫೀಸ್‌ನಲ್ಲಿಯೂ ಕೊಳ್ಳೆ ಹೊಡೆಯುವ ಮಟ್ಟಿಗೆ ತಯಾರಾಗಿದೆ. 

Latest Videos


ಇನ್ನು ಅಲ್ಲು ಅರ್ಜುನ್‌ ನಟನೆಯ ತೆಲುಗು ಸಿನೆಮಾ ಪುಷ್ಪ 2 ಅಥವಾ ಪುಷ್ಪಾ: ದಿ ರೂಲ್  ಈ ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಚಿತ್ರ ನೋಡಲು ಜನ  ಕುತೂಹಲದಿಂದ ಕಾಯುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಭಾಗವು ದೇಶ ಮತ್ತು ವಿದೇಶಗಳಲ್ಲಿ ಬಹಳ ಜನಪ್ರಿಯವಾಯಿತು. ಚಿತ್ರದ ಕಥೆಯಿಂದ ಹಿಡಿದು ಸಂಭಾಷಣೆಯವರೆಗೂ ಜನರ ಮನ ಗೆದ್ದಿದೆ. ಇದಲ್ಲದೆ, ಚಿತ್ರದ ಎಲ್ಲಾ ಹಾಡುಗಳು ಸಹ ಬ್ಲಾಕ್ಬಸ್ಟರ್ ಹಿಟ್‌ ಆಗಿತ್ತು. ಈಗ ಚಿತ್ರದ ಎರಡನೇ ಭಾಗವನ್ನು ಮೊದಲನೆಯದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಪುಷ್ಪ 2 ಚಿತ್ರದ ಬಜೆಟ್ 500 ಕೋಟಿ. ಮೊದಲ ಭಾಗ ಕೇವಲ 60 ಕೋಟಿ ರೂ. ಬಂಡವಾಳ ಹಾಕಲಾಗಿತ್ತು. 

ತೆಲುಗು ನಟ ಪ್ರಭಾಸ್ ಅವರ ಮುಂಬರುವ ಚಿತ್ರ ಕಲ್ಕಿ 2898 AD ಇಲ್ಲಿಯವರೆಗಿನ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುತ್ತದೆ. 700 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ಚಿತ್ರದಲ್ಲಿ ಪ್ರಭಾಸ್ ಮತ್ತೊಮ್ಮೆ ‘ದೇವರ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಕಲ್ಕಿ ಚಿತ್ರದಲ್ಲಿ ಪ್ರಭಾಸ್ ವಿಷ್ಣುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಕಮಲ್ ಹಾಸನ್ ಕೂಡ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಭಾಸ್ ಅವರ ಸಲಾರ್ ಕೂಡ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ, ಇದರಲ್ಲಿ ಅವರು ಶ್ರುತಿ ಹಾಸನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. 400 ಕೋಟಿ ವೆಚ್ಚದಲ್ಲಿ ಸಲಾರ್ ಚಿತ್ರ ತಯಾರಾಗುತ್ತಿದ್ದು, ಕೆಜಿಎಫ್ ಖ್ಯಾತಿಯ ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಸಲಾರ್: ಭಾಗ 1 - ಕದನ ವಿರಾಮವನ್ನು ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು ಕೂಡ ನಟಿಸಿದ್ದಾರೆ.

ತಮಿಳು ನಟ ಧನುಷ್ ಮತ್ತು ಕನ್ನಡ ನಟ ಶಿವ ರಾಜ್‌ಕುಮಾರ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವು ಡಿಸೆಂಬರ್ 15ರಂದು 2023 ರಂದು ಥಿಯೇಟರ್‌ಗೆ ಬರಲಿದೆ. ಈ ಚಿತ್ರವನ್ನು 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ಧನುಷ್ ಕ್ಯಾಪ್ಟನ್ ಮಿಲ್ಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಭಾರೀ ನಿರೀಕ್ಷೆ ಹೆಚ್ಚಿಸಿದೆ.

ತಮಿಳು ನಟ ಸೂರ್ಯ ಅಭಿನಯದ 'ಕಂಗುವ' ಸಿನಿಮಾದ ಬಗ್ಗೆಯೂ ಭಾರೀ ನಿರೀಕ್ಷೆ ಹುಟ್ಟಿದೆ. ಚಿತ್ರದಲ್ಲಿ ನಾಯಕಿಯಾಗಿ ದಿಶಾ ಪಟಾನಿ ಕೂಡ ನಟಿಸುತ್ತಿದ್ದಾರೆ. 350 ಕೋಟಿ ವೆಚ್ಚದಲ್ಲಿ ಕಂಗುವ ತಯಾರಾಗುತ್ತಿದ್ದು, ಸೂರ್ಯ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ವಿಶ್ವದಾದ್ಯಂತ 38 ಭಾಷೆಗಳಲ್ಲಿ 3D ಮತ್ತು IMAX ವಿಧದಲ್ಲಿ ಬಿಡುಗಡೆಯಾಗಲಿದ್ದು, ಇತಿಹಾಸವನ್ನು ಸೃಷ್ಟಿಸಲು ಸಜ್ಜಾಗುತ್ತಿದೆ. 2024ರಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಕಂಗುವವನ್ನು ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ.

click me!