1963 ರಲ್ಲಿ ಇಟಲಿಯಿಂದ ಹೊರಬಂದ ಸರಣಿ ಫೋಟೋಗಳು ಇಂದು ನಮಗೆ ತಿಳಿದಿರುವಂತೆ ಸಿನಿತಾರೆಯರ ಸಂಸ್ಕೃತಿಯನ್ನು ಬದಲಾಯಿಸಿದವು. ಅದಕ್ಕೂ ಮೊದಲು, ಪಾಪರಾಜಿ ಎಂಬ ಪದವು ಇಟಲಿ ಮತ್ತು ಹಾಲಿವುಡ್‌ನ ಹೊರಗೆ ಕೇಳಿ ಬಂದಿರಲಿಲ್ಲ. ಆದರೆ ಶೀಘ್ರದಲ್ಲೇ, ಆ ಪದ ಜಾಗತಿಕ ವಿದ್ಯಮಾನದಲ್ಲಿ ವೈರಲ್ ಆಯ್ತು. ಜೊತೆಗೆ ಇದು ಇಬ್ಬರು ಪ್ರಮುಖ ಸೂಪರ್‌ಸ್ಟಾರ್‌ಗಳ ವಿವಾಹೇತರ ಸಂಬಂಧವನ್ನು ಬಯಲು ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು.