ಹಿಂದಿ ಕಿರುತೆರೆ ನಟಿ ಅಂಕಿತಾ ಲೋಖಂಡೆ (Ankita Lokhande)ಅವರು 'ಪವಿತ್ರ' ಎಂಬ ಶೀರ್ಷಿಕೆಯೊಂದಿಗೆ ತಮ್ಮ ಮತ್ತು ವಿಕ್ಕಿ ಜೈನ್ ಅವರ ವಿವಾಹಪೂರ್ವ ಆಚರಣೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಂಕಿತಾ ಹಸಿರು ಮತ್ತು ಗುಲಾಬಿ ಬಣ್ಣದ ಕಾಂಬಿನೇಷನ್ ಸೀರೆಯನ್ನು ಉಟ್ಟಿದ್ದರು. ವಿಕ್ಕಿಯನ್ನು ಕೆನೆ ಬಣ್ಣದ ಕುರ್ತಾದಲ್ಲಿ ಕಾಣಬಹುದು. ಈ ಜೋಡಿ 3 ವರ್ಷಗಳಿಗೂ ಹೆಚ್ಚು ಕಾಲ ಒಟ್ಟಿಗೆ ಇದ್ದಾರೆ.
ವಿಕ್ಕಿ ಜೈನ್ ಅವರು ಶಾಸ್ತ್ರಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮರಾಠಿಯಲ್ಲಿ ನಾನು ನಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ. ಆದರೆ ಪಿಕ್ಚರ್ ತೋ ಅಭಿ ಬಾಕಿ ಹೈ ಮೇರೆ ದೋಸ್ತ್ ಎಂದು ಸೇರಿಸಿದ್ದಾರೆ.
ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಮೂಲಕ ತನ್ನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲು, ಪವಿತ್ರಾ ರಿಷ್ತಾ ಧಾರವಾಹಿಯಲ್ಲಿ ಅರ್ಚನಾ ಪಾತ್ರಕ್ಕಾಗಿ ಅಂಕಿತಾ ಹೆಸರುವಾಸಿಯಾಗಿದ್ದರು. ಕಾರ್ಯಕ್ರಮದಲ್ಲಿ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಮಾನವ್ ಪಾತ್ರವನ್ನು ಮಾಡಿದ್ದರು.
ಪವಿತ್ರ ರಿಷ್ತಾ ಎರಡನೇ ಸೀಸನ್‌ನಲ್ಲಿ ಅಂಕಿತಾ ಲೋಖಂಡೆ ನಟಿಸಿದ್ದಾರೆ. ಇದರಲ್ಲಿ ಅವರು ಮೊದಲ ಸೀಸನ್‌ನಿಂದ ತನ್ನ ಪಾತ್ರವನ್ನು ಪುನರಾವರ್ತಿಸಿದರೆ ಮಾನವ್ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಬದಲಿಗೆ ಶಾಹೀರ್ ಶೇಖ್ ನಟಿಸಿದ್ದಾರೆ.
ಕಿರುತೆರೆಯಲ್ಲಿ ಸುಶಾಂತ್ ಸಿಂಗ್‌ಗೆ ದೊಡ್ಡ ಸಕ್ಸಸ್ ತಂದುಕೊಟ್ಟ ಧಾರವಾಹಿ ಇದು. ಈ ಮೂಲಕ ಧಾರವಾಹಿ ಪ್ರಿಯರ ಮನೆಮಾತಾಗಿದ್ದರು ಸುಶಾಂತ್ ಸಿಂಗ್.