Cannes 2022: ರೆಡ್‌ ಕಾರ್ಪೆಟ್‌ ಮೇಲೆ ಕೈ ಕೊಟ್ಟ Deepika Padukone ಡ್ರೆಸ್‌

Published : May 25, 2022, 05:53 PM IST

ದೀಪಿಕಾ ಪಡುಕೋಣೆ  ( Deepika Padukone) ಅವರು ಕಾನ್ಸ್ ಫಿಲ್ಮ್ ಫೆಸ್ಟಿವಲ್‌ (Cannes Film Festival)ನಲ್ಲಿ ತಮ್ಮ ಅತ್ಯಾಕರ್ಷಕ ಉಡುಗೆಗಾಗಿ ವಿಶ್ವದಾದ್ಯಂತ ಪ್ರಶಂಸೆ ಗಳಿಸುತ್ತಿದ್ದಾರೆ. ಮಂಗಳವಾರ, ಅವರು ಕಿತ್ತಳೆ ಬಣ್ಣದ (Orange Gown) ಗೌನ್‌ನಲ್ಲಿ ರೆಡ್‌ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡರು, ಆದರೆ ಅವರ ಉದ್ದ ಉಡುಪಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಕಂಡುಬಂದಿತು. ದೀಪಿಕಾ ತಮಮ್ ಡ್ರೆಸ್‌ ಜೊತೆ ಹೋರಾಟ್ ನಡೆಸುವುದು ಕಂಡುಬಂದಿದೆ. ಸಮಾರಂಭದಲ್ಲಿ ಇಲ್ಲಿಯವರೆಗೆ ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವ ದೀಪಿಕಾ ಮೊದಲ ಬಾರಿಗೆ ನರ್ವಸ್ ಆಗಿ ಕಾಣಿಸಿಕೊಂಡಿದ್ದಾರೆ. 

PREV
17
Cannes 2022: ರೆಡ್‌ ಕಾರ್ಪೆಟ್‌ ಮೇಲೆ ಕೈ ಕೊಟ್ಟ Deepika Padukone ಡ್ರೆಸ್‌
Deepika Padukone

ದೀಪಿಕಾ ಪಡುಕೋಣೆ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಜ್ಯೂರಿ ಸದಸ್ಯೆಯಾಗಿ (Jury Member) ಸೇರಿದ್ದಾರೆ. ಭಾರತವನ್ನು ಪ್ರತಿನಿಧಿಸುತ್ತಿರುವ ದೀಪಿಕಾ ಇಲ್ಲಿಯವರೆಗೆ ತುಂಬಾ ಸಂತೋಷ ಮತ್ತು ಆರಾಮದಾಯಕವಾಗಿ ಕಾಣುತ್ತಿದ್ದಾರೆ, 

27
Deepika Padukone

ಅವರ ಪ್ರತಿ ಸಂದರ್ಭದಲ್ಲೂ ತುಂಬಾ ಆತ್ಮವಿಶ್ವಾಸದಿಂದ ಕಾಣುತ್ತಿದ್ದಳು. ಆದರೆ ಮಂಗಳವಾರ ಸಂಜೆ, ಅವರು ರೆಡ್ ಕಾರ್ಪೆಟ್ (Red Carpet) ಮೇಲೆ ನರ್ವಸ್‌ ಆಗಿ ಕಾಣಿಸಿಕೊಂಡರು. ಮೆಟ್ಟಿಲುಗಳನ್ನು ಹತ್ತುವಾಗ ಡ್ರೆಸ್‌  ಸಿಕ್ಕಿ ಬೀಳುವ ಭಯದಲ್ಲಿದ್ದರೂ ಆಕೆ ತನ್ನನ್ನು ತಾನೇ ಹಿಡಿದುಕೊಂಡು ನಾಟಕೀಯವಾಗಿ ಹೆಜ್ಜೆ ಹಾಕುತ್ತಿದ್ದರು. ತನ್ನನ್ನು ತಾನೇ ಹಿಡಿದುಕೊಂಡು ನಾಟಕೀಯವಾಗಿ ಹೆಜ್ಜೆ ಹಾಕುತ್ತಿದ್ದರು.

37
Deepika Padukone

ದೀಪಿಕಾ ಪಡುಕೋಣೆ ಮೇ 24 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ರೆಡ್ ಕಾರ್ಪೆಟ್ಮೇ (Red Carpet) ಲೆ ಕೇಸರಿ ಡ್ರೆಸ್‌ನೊಂದಿಗೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಹಿಂದೆ ಉದ್ದವಾದ ವಿಸ್ತಾರವಾದ ಕಿತ್ತಳೆ ಬಣ್ಣದ ಗೌನ್‌ ಧರಿಸಿದ್ದ ನಟಿ ಹೋಗುವ ದಾರಿಯಲ್ಲಿ ಹಲವಾರು ಬಾರಿ ಸಿಕ್ಕಿಹಾಕಿಕೊಳ್ಳುವುದು ಕಂಡುಬಂದಿತು.


 

 

47

ಫಿಗರ್-ಹಗಿಂಗ್ ಪೀಸ್‌ನಲ್ಲಿ ನಡೆಯುವಾಗ ದೀಪಿಕಾ ಹಲವಾರು ಬಾರಿ ಬೀಳುವ ಭಯದಲ್ಲಿದ್ದರು, ಈ ಸಮಯದಲ್ಲಿ ಅವರು ಉದ್ವಿಗ್ನರಾಗಿರುವುದು ಕಂಡುಬಂದಿದೆ. ಒಮ್ಮೆ ಅವರು ಕೋಪದಲ್ಲಿ ತನ್ನ ಉಡುಪನ್ನು ಸರಿಹೊಂದಿಸುವುದು ಕಂಡುಬಂದಿದೆ.

57
Deepika Padukone

ಇಲ್ಲಿ ಉಪಸ್ಥಿತರಿರುವ ಸಹ ತೀರ್ಪುಗಾರರ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿ ಕೂಡ ಅವರಿಗೆ ಸಹಾಯ ಮಾಡಿದರು, ಆದರೆ ಈ ಘಟನೆಯಿಂದ ಗಾಬರಿಯಾಗಿದ್ದ  ದೀಪಿಕಾರ ಮುಖದ ಬಣ್ಣ ಬದಲಾಗಿದ್ದು ಸ್ಪಷ್ಟವಾಗಿ ಕಾಣಿಸಿದೆ.
 

67

ದೀಪಿಕಾ ಪಡುಕೋಣೆ ಮತ್ತು ಈ ಈವೆಂಟ್‌ನ ಇತರ ತೀರ್ಪುಗಾರರ ಸದಸ್ಯರು  L'innocent ಚಿತ್ರದ ಪ್ರದರ್ಶನಕ್ಕೆ ಆಗಮಿಸಿದ್ದರು. ದೀಪಿಕಾ ಕೂಡ ತೀರ್ಪುಗಾರರ ಜೊತೆ ಪೋಸ್ ಕೊಡಬೇಕಿತ್ತು.
 


 


 

 

77
Deepika Padukone

ದೀಪಿಕಾರ ಉಡುಗೆ (Dress) ಅವರ ಹಿಂದೆ ನೆರಿಗೆಯ ಬಟ್ಟೆಯ ಉದ್ದನೆಯ ರೈಲಿನಂತೆ ಓಡುತ್ತಿತ್ತು. ಆದರೆ ಚಲಿಸುತ್ತಿರುವಾಗ ಅದು ಮತ್ತೆ ಮತ್ತೆ ಆವರ ಕಾಲಿಗೆ ಸಿಕ್ಕಿಕೊಳ್ಳುತ್ತಿತ್ತು. ಅವರು ಸ್ವಲ್ಪ ಬಲ ಅಥವಾ ಎಡಕ್ಕೆ ಚಲಿಸಿದಾಗಲೆಲ್ಲಾ ಅವಳು ತಲೆಬಾಗಿ ಡ್ರೆಸ್‌ ಅನ್ನು ನಿರ್ವಹಿಸುತ್ತಿದ್ದರು.


 


 

Read more Photos on
click me!

Recommended Stories