17 ವರ್ಷಗಳ ಸಂಗಾತಿ ವರಿಸಿದ ನಿರ್ಮಾಪಕ Hansal Mehta

Published : May 25, 2022, 05:00 PM IST

'ಸ್ಕ್ಯಾಮ್ 1992' ನಂತಹ ಸೂಪರ್‌ಹಿಟ್ ವೆಬ್‌ಸೀರೀಸ್ (Superhit Web Series) ನೀಡಿದ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ (Hansal Mehta) ಅವರು ದೀರ್ಘಕಾಲದ ಸಂಗಾತಿ ಸಫೀನಾ ಹುಸೇನ್ (Safina Hussain) ಅವರನ್ನು ವಿವಾಹವಾದರು. ಈ ಮಾಹಿತಿಯನ್ನು ಸ್ವತಃ 54 ವರ್ಷದ ಹನ್ಸಲ್ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ. ಅವರು ತಮ್ಮ ಸಿಂಪಲ್ ಸೀ ವೆಡ್ಡಿಂಗ್ (Simple Sea Wedding) ಸಮಾರಂಭದ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ. ಹನ್ಸಲ್ ಮೆಹ್ತಾ ಅವರ ಈ ಎರಡನೇ ಮದುವೆಯ ಫೋಟೋಗಳು ಇಲ್ಲಿವೆ.  

PREV
18
17 ವರ್ಷಗಳ ಸಂಗಾತಿ ವರಿಸಿದ ನಿರ್ಮಾಪಕ Hansal Mehta

 '17 ವರ್ಷಗಳ ನಂತರ, ಇಬ್ಬರು ಮಕ್ಕಳು, ನಮ್ಮ ಇಬ್ಬರು ಮಕ್ಕಳು ಬೆಳೆಯುತ್ತಿರುವುದನ್ನು ಮತ್ತು ನಮ್ಮ ಕನಸುಗಳ  ನೋಡಿ ನಾವು ಮದುವೆಯಾಗಲು ನಿರ್ಧರಿಸಿದ್ದೇವೆ. ಜೀವನದಲ್ಲಿ ಯಾವಾಗಲೂ ಸಂಭವಿಸಿದಂತೆ, ಈ ಮದುವೆಯು ಇದ್ದಕ್ಕಿದ್ದಂತೆ ಮತ್ತು  ಯಾವುದೇ ಪ್ಲಾನ್‌ ಇಲ್ಲದೆ  ಸಂಭವಿಸಿತು. ಅಂತಿಮವಾಗಿ ಪ್ರೀತಿಯು ಮೇಲುಗೈ ಸಾಧಿಸುತ್ತದೆ' ಎಂದು ಹನ್ಸಲ್‌ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ

28

ಹಂಸಲ್ ಮೆಹ್ತಾ ಮತ್ತು ಸಫೀನಾ ಹುಸೇನ್ ಅವರ ಮದುವೆ ಫೋಟೋವನ್ನು ನೋಡಿದಾಗ, ದಂಪತಿ ಮದುವೆಯ ಡ್ರೆಸ್‌ ಧರಿಸಿರಲಿಲ್ಲ ಅಥವಾ ಯಾವುದೇ ರೀತಿಯ ಅಲಂಕಾರದಲ್ಲಿಯೂ ಕಾಣುವುದಿಲ್ಲ.

38

ಸಿಂಪಲ್ ಸೀ ವೆಡ್ಡಿಂಗ್ ಸಮಾರಂಭದ ಫೋಟೊಗಳಲ್ಲಿ ಹನ್ಸಲ್ ಕ್ಯಾಶುಯಲ್ ಟಿ-ಶರ್ಟ್ ಮತ್ತು ಡೆನಿಮ್‌ಗಳನ್ನು ಧರಿಸಿ ಕಾಣಿಸಿಕೊಂಡಿದ್ದರೆ, ಸಫೀನಾ ಗುಲಾಬಿ ಕುರ್ತಾ ಮತ್ತು ಸಲ್ವಾರ್‌ನಲ್ಲಿ ಕಾಣಬಹುದಾಗಿದೆ.

48

ಹನ್ಸಲ್ ಮೆಹ್ತಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ  ಚಿತ್ರರಂಗದಿಂದ ಸಾಕಷ್ಟು ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಪಡೆಯುತ್ತಿದ್ದಾರೆ. 'ಎಷ್ಟು ಸುಂದರವಾಗಿದೆ. ಅಭಿನಂದನೆಗಳು ಸ್ನೇಹಿತ. ಇಲ್ಲಿಯವರೆಗಿನ ಪ್ರಯಾಣದಂತೆಯೇ ಮುಂದೆಯೂ ಸುಂದರ ಪ್ರಯಾಣವನ್ನು ದೇವರು ನಿಮಗೆ ನೀಡಲಿ,' ಎಂದು ನಿರ್ದೇಶಕ ಸಂಜಯ್ ಗುಪ್ತಾ ಬರೆದುಕೊಂಡಿದ್ದಾರೆ.

58

'ನಿಮ್ಮಿಬ್ಬರಿಗೂ ಅನೇಕ ಶುಭಾಶಯಗಳು ಮತ್ತು ಅಭಿನಂದನೆಗಳು' ಎಂದು ನಟ ಮನೋಜ್ ಬಾಜಪೇಯಿ ಬರೆದಿದ್ದಾರೆ. 'ನನ್ನ ನೆಚ್ಚಿನ ಜೋಡಿಗೆ ಅಭಿನಂದನೆಗಳು. ನೀವು ಒಬ್ಬರನ್ನೊಬ್ಬರು ಪೂರ್ಣಗೊಳಿಸುತ್ತೀರಿ. ನಿಮ್ಮಿಬ್ಬರಿಗೂ ಬಹಳಷ್ಟು ಪ್ರೀತಿ' ಎಂದು ರಾಜ್‌ಕುಮಾರ್ ರಾವ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

68

ಸಫೀನಾ ಹುಸೇನ್  ಅವರು ಸಾಮಾಜಿಕ ಕಾರ್ಯಕರ್ತೆ ಮತ್ತು ಎಜುಕೇಟ್ ಗರ್ಲ್ಸ್ ಎಂಬ ಲಾಭರಹಿತ ಸಂಸ್ಥೆಯ ಸಂಸ್ಥಾಪಕಿ. ಅವರು 'ಧೂಮ್', 'ಓ ಮೈ ಗಾಡ್', 'ರಯೀಸ್' ಮತ್ತು 'ದಿಲ್ ಚಾಹ್ತಾ ಹೈ' (Dil Chahta Hai) ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ನಟ ಯೂಸುಫ್ ಹುಸೇನ್ ಅವರ ಪುತ್ರಿ.

78

ಯೂಸುಫ್ ಕೊರೋನಾ ಅವಧಿಯಲ್ಲಿ ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾದರು. ಸಫೀನಾ ಮತ್ತು ಹನ್ಸಲ್‌ಗೆ ಕಿಮಯಾ ಮತ್ತು ರಿಹಾನ್ನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

88
Image: Hansal Mehta/Instagram

ಹನ್ಸಲ್ ಮೆಹ್ತಾ ಅವರಿಗೆ ಇದು ಎರಡನೇ ಮದುವೆ. ಇದಕ್ಕೂ ಮುನ್ನ ಅವರು 1989 ರಲ್ಲಿ ಸುನೀತಾ ಅವರನ್ನು ವಿವಾಹವಾಗಿದ್ದರು. ಮತ್ತು ಇದು ಕೇವಲ 11 ವರ್ಷಗಳ ಕಾಲ ನಡೆಯಿತು. ಹಂಸಲ್‌ ಅವರಿಗೆ ಸುನೀತಾ ಅವರ ಜೈ ಮತ್ತು ಪಲ್ಲವ್‌ ಎಂಬ ಇಬ್ಬರು ಮಕ್ಕಳಿವೆ. ಜಯ್ ಮೆಹ್ತಾ ಒಬ್ಬ ಚಲನಚಿತ್ರ ನಿರ್ದೇಶಕ.

Read more Photos on
click me!

Recommended Stories