ಆಸ್ಕರ್‌ಗೂ ಮುನ್ನ ದೀಪಿಕಾ ಪಡುಕೋಣೆ ವರ್ಕೌಟ್‌; ಬದ್ಧತೆಗೆ ಭೇಷ್ ಎಂದ ಟ್ರೈನರ್‌

Published : Mar 13, 2023, 03:58 PM IST

ದೀಪಿಕಾ ಪಡುಕೋಣೆ  (Deepika Padukone) ಅವರ ಟ್ರೈನರ್‌ ಯಾಸ್ಮಿನ್ ಕರಾಚಿವಾಲಾ ಅವರು ದೀಪಿಕಾ ಪಡುಕೋಣೆ ಆಸ್ಕರ್ ಪ್ರಶಸ್ತಿಗಾಗಿ ಕಠಿಣ ತಯಾರಿ ನಡೆಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆಕೆಯ ಸೌಂದರ್ಯಕ್ಕಾಗಿ ನಟಿಯ ಸಮರ್ಪಣೆ ಮತ್ತು ಬದ್ಧತೆಯನ್ನು ಹೊಗಳಿದ್ದಾರೆ. ದೀಪಿಕಾರ ವರ್ಕೌಟ್‌ ವೀಡಿಯೋ ಸಖತ್‌ ವೈರಲ್‌ ಆಗಿದೆ.

PREV
17
ಆಸ್ಕರ್‌ಗೂ  ಮುನ್ನ ದೀಪಿಕಾ ಪಡುಕೋಣೆ ವರ್ಕೌಟ್‌; ಬದ್ಧತೆಗೆ ಭೇಷ್ ಎಂದ ಟ್ರೈನರ್‌

 ಸೋಮವಾರ ಬೆಳಗ್ಗೆ  (IST) 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡ  ದೀಪಿಕಾ ಪಡುಕೋಣೆ ಇಂಟರ್ನೆಟ್ ಸೆನ್ಷೇಷನ್‌ ಆಗಿದ್ದಾರೆ. ಆಸ್ಕರ್ ಪ್ರಶಸ್ತಿ ಸಮಾರಂಭಕ್ಕಾಗಿ ಅವರು ಧರಿಸಿದ ಉಡುಗೆ, ಮಾಡಿದ ನಿರೂಪಣೆಗೆ ಎಲ್ಲರೂ ಶಹಬ್ಬಾಸ್ ಎನ್ನುತ್ತಿದ್ದಾರೆ. 

 

27

ಒಂದು ಕಡೆ ದೀಪಿಕಾ ಆಸ್ಕರ್‌ ಇವೆಂಟ್‌ನಲ್ಲಿ ಭಾಗವಹಿಸಿದ ಫೋಟೋ ವೀಡೀಯೋಗಳು ಸದ್ದು ಮಾಡುತ್ತಿದರೆ, ಅದೇ ವೇಳೆಯಲ್ಲಿ ಅವರ ವರ್ಕೌಟ್‌ ವೀಡಿಯೋವೊಂದು ಸಖತ್‌ ವೈರಲ್‌ ಆಗಿದೆ. 

37

ದೀಪಿಕಾ ಅವರ ಟ್ರೈನರ್‌ ಯಾಸ್ಮಿನ್ ಕರಾಚಿವಾಲಾ ಅವರು ಆಸ್ಕರ್‌ಗೆ ತಯಾರಾಗುವ ಮೊದಲು ದೀಪಿಕಾ ಬೆಳಿಗ್ಗೆ 6:30 ಕ್ಕೆ ಹೇಗೆ ವರ್ಕ್ ಔಟ್ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿ, ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

47

ಬಿಳಿಯ ತೋಳುಗಳಿಲ್ಲದ ಟೀ ಶರ್ಟ್‌ ಜೊತೆಗೆ ಕಪ್ಪು ಲೆಗ್ಗಿಂಗ್ಸ್ ಧರಿಸಿರುವ ವರ್ಕೌಟ್‌ನಲ್ಲಿ ನಿರಂತರಾಗಿರುವುದು ವೀಡಿಯೋದಲ್ಲಿ ಕಾಣಬಹುದು ಮತ್ತು ವೀಡಿಯೊಗೆ ಹಿನ್ನೆಲೆ ಸಂಗೀತವಾಗಿ ನಾಟು ನಾಟು ಹಾಡನ್ನು ಬಳಸಿದ್ದಾರೆ.

57

ಸಮತೋಲಿತ ಜೀವನಶೈಲಿಯನ್ನು (Balanced Lifestyle) ಕಾಯ್ದುಕೊಳ್ಳುವುದು ಅವರ 'ಶಿಸ್ತು, ಸಮರ್ಪಣೆ ಮತ್ತು ಬದ್ಧತೆ' (Dedication and Committment) ಎಂದು ಕರಾಚಿವಾಲಾ ನಟಿಯನ 'ಸೌಂದರ್ಯ'ದ ರಹಸ್ಯ ಹಂಚಿಕೊಂಡಿದ್ದಾರೆ.

67

'ಆಸ್ಕರ್‌ಗಿಂತ ಮೊದಲು ವರ್ಕೌಟ್‌ ಅಂತೂ ಮಾಡಲೇ ಬೇಕು. ಆಸ್ಕರ್‌ಗೆ ತಯಾರಾಗುವ ಮೊದಲು @ದೀಪಿಕಾಪಡುಕೋಣೆ ಅವರ ಬೆಳಿಗ್ಗೆ 6:30 ರ ವರ್ಕೌಟ್‌ನ ಒಂದು ನೋಟ ಹಂಚಿಕೊಳ್ಳಲಾಗುತ್ತಿದೆ. ಅವರ ಜೀನ್‌ಗಳ ಜೊತೆಗೆ ಅವರ ಸೌಂದರ್ಯದ ರಹಸ್ಯವೆಂದರೆ ಅವರ ಶಿಸ್ತು, ಸಮರ್ಪಣೆ ಮತ್ತು ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಬದ್ಧತೆ. ಇದು #ಆಸ್ಕರ್ ಪ್ರಶಸ್ತಿಗಾಗಿ ಆಕೆಗೆ ತರಬೇತಿ ನೀಡುವ ಅದ್ಭುತ ಪ್ರಯಾಣವಾಗಿತ್ತು. ದೀಪಿಕಾ ವರ್ಕೌಟ್ (Workout) ಮಾಡುವ ಹೆಚ್ಚಿನ ವೀಡಿಯೊಗಳನ್ನು ನೀವು ನೋಡಲು ಬಯಸುವಿರಾ?' ಎಂದು ಯಾಸ್ಮಿನ್ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. 

77
deepika Oscar

 ನಡೆದ ಸಮಾರಂಭದಲ್ಲಿ ದೀಪಿಕಾ ನಾಟು ನಾಟು ಕಲಾವಿದರನ್ನು ವೇದಿಕೆಗೆ ಪರಿಚಯಿಸಿದರು. ಅವರು ಹಾಡನ್ನು ಬ್ಯಾಂಗರ್ ಎಂದು ಕರೆದರು. ಈ ಸಮಯದಲ್ಲಿ  ದೀಪಿಕಾ ಕಪ್ಪು ಲೂಯಿ ವಿಟಾನ್ ಆಫ್ ಶೋಲ್ಡರ್ ಗೌನ್‌ನಲ್ಲಿ ಸಖತ್‌ ಸ್ಟನ್ನಿಂಗ್‌ ಆಗಿ ಕಾಣಿಸಿಕೊಂಡರು.

Read more Photos on
click me!

Recommended Stories