ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಪ್ರತಿಷ್ಠಿತ ಆಸ್ಕರ್ ಗೆದ್ದು ಬೀಗಿದ್ದಾರೆ. ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ನಟನೆಯ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದೆ. ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿಶ್ವದ ಅನೇಕ ಸಿನಿ ಗಣ್ಯರು ಸಾಕ್ಷಿಯಾದರು.
ಆರ್ ಆರ್ ಆರ್ ತಂಡ ಆಸ್ಕರ್ ಸಮಾರಂಭಕ್ಕೂ ಅನೇಕ ದಿನಗಳ ಮುಂಚೆಯೇ ಅಮೆರಿಕಾಗೆ ತೆರಳಿತ್ತು. ರಾಜಮಳಿ, ರಾಮ್ ಚರಣ ದಂಪತಿ ಅಮೆರಿಕಾಗೆ ತೆರಳಿ ಅನೇಕ ದಿನಗಳಾಗಿದ್ದು ಅಲ್ಲಿನ ಮಾಧ್ಯಮಗಳಿಗೆ ಅನೇಕ ಸಂದರ್ಶನಗಳನ್ನು ನೀಡಿದ್ದಾರೆ.
ವಿಶೇಷ ಎಂದರೆ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಅಮೆರಿಕಾ ಮನೆಗೆ ಭೇಟಿ ನೀಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಮದುವೆ ಬಳಿಕ ಲಾಸ್ ಏಂಜಲೀಸ್ ನಲ್ಲಿ ನೆಲೆಸಿದ್ದಾರೆ.
ಆಸ್ಕರ್ ಸಮಾರಂಭಕ್ಕೂ ಮೊದಲು ರಾಮ್ ಚರಣ್ ದಂಪತಿ ಪ್ರಿಯಾಂಕಾ ಚೋಪ್ರಾ ಅವರ ಮನೆಗೆ ಭೇಟಿ ನೀಡಿದ್ದಾರೆ. ಟಾಲಿವುಡ್ ಸ್ಟಾರ್ ದಂಪತಿಗೆ ಪ್ರಿಯಾಂಕಾ ಭರ್ಜರಿ ಆತಿಥ್ಯ ನೀಡಿದ್ದಾರೆ. ಪ್ರಿಯಾಂಕಾ ಮನೆಗೆ ಭೇಟಿ ನೀಡಿರುವ ಫೋಟೋಗಳನ್ನು ರಾಮ್ ಚರಣ್ ಪತ್ನಿ ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಪ್ರಿಯಾಂಕಾ ಕುಟುಂಬ ಜೊತೆ ಕೆಲವು ಹೊತ್ತು ಸಮಯ ಕಳೆದಿರುವ ರಾಮ್ ಚರಣ್ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪ್ರಿಯಾಂಕಾ ಜೊತೆ ರಾಮ್ ಮತ್ತು ಉಪಾಸನಾ ದಂಪತಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಆರ್ ಆರ್ ಆರ್ ತಂಡ ಕೊನೆಗೂ ಕನಸಿನ ಆಸ್ಕರ್ ಗೆದ್ದು ಬೀಗಿದೆ. ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಎಂಎಂ ಕೀರವಾಣಿ ಮತ್ತು ಸಾಹಿತಿ ಚಂದ್ರಬೋಷ್ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು. ಇಡೀ ಆರ್ ಆರ್ ಆರ್ ತಂಡದ ಸಂಭ್ರಮ ಮುಗಿಲು ಮುಟ್ಟಿದ್ದು ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ಆಸ್ಕರ್ ಸಮಾರಂಭಕ್ಕೆ ಆರ್ ಆರ್ ಆರ್ ತಂಡ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ರಾಜಮಾಳಿ ಪತ್ನಿ ಮತ್ತು ರಾಮ್ ಚರಣ್ ಪತ್ನಿ ಸೀರಿಯಲ್ಲಿ ಕಂಗೊಳಿಸಿದ್ದರು. ರಾಜಮೌಳಿ ಶೇರ್ವಾನಿಯಲ್ಲಿ ಮಿಂಚಿದರು. ಆಸ್ಕರ್ ಸಮಾರಂಭದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.