ಲಗಾನ್‌ - ಆರ್‌ಆರ್‌ಆರ್‌ವರೆಗೆ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಭಾರತೀಯ ಚಲನಚಿತ್ರಗಳಿವು

First Published Mar 13, 2023, 3:52 PM IST

ಅಕಾಡೆಮಿ ಪ್ರಶಸ್ತಿಗಳು  ಅತ್ಯುತ್ತಮ ಸಿನಿಮಾ ಕೆಲಸಗಳಿಗೆ ಮನ್ನಣೆ ನೀಡುವ ದೊಡ್ಡ ವೇದಿಕೆಗಳಲ್ಲಿ ಒಂದಾಗಿದೆ. ಆಸ್ಕರ್‌ಗೆ (Oscar) ನಾಮನಿರ್ದೇಶನಗೊಂಡ ಭಾರತೀಯ ಚಲನಚಿತ್ರಗಳು ತುಂಬಾ ಕಡಿಮೆ. ವಾಸ್ತವವಾಗಿ, ಇಲ್ಲಿಯವರೆಗೆ ಅಕಾಡೆಮಿ ಪ್ರಶಸ್ತಿಗಳಿಗೆ ಕೇವಲ ಮೂರು ಭಾರತೀಯ ಚಲನಚಿತ್ರಗಳು ನಾಮನಿರ್ದೇಶನಗೊಂಡಿದ್ದವು. ಈ ವರ್ಷ ಆರ್‌ಆರ್‌ಆರ್‌ ಸಿನಿಮಾ ಈ ಪಟ್ಟಿಗೆ ಸೇರಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡ ಭಾರತೀಯ ಚಲನಚಿತ್ರಗಳ ಪಟ್ಟಿ ಇಲ್ಲಿದೆ

ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯು US ಮೂಲದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಅಂಡ್ ಸೈನ್ಸ್‌ನಿಂದ ಪ್ರತಿ ವರ್ಷ ನೀಡಲಾಗುವ ಪ್ರಶಸ್ತಿಗಳಲ್ಲಿ ಆಸ್ಕರ್ ಒಂದಾಗಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡ ಭಾರತೀಯ ಚಲನಚಿತ್ರಗಳ ಪಟ್ಟಿ ಇಲ್ಲಿದೆ.

ಮದರ್ ಇಂಡಿಯಾ (1957) -
ಮದರ್ ಇಂಡಿಯಾ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಕ್ಕಾಗಿ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಚಲನಚಿತ್ರ. ರಾಜ್ ಕುಮಾರ್, ನರ್ಗೀಸ್, ಸುನೀಲ್ ದತ್, ಮತ್ತು ರಾಜೇಂದ್ರ ಕುಮಾರ್ ತಾರಾಗಣ ಮತ್ತು ಮೆಹಬೂಬ್ ಖಾನ್ ನಿರ್ದೇಶಿಸಿದ ಮದರ್ ಇಂಡಿಯಾ, ಖಾನ್ ಅವರ ಹಿಂದಿನ ಚಿತ್ರ ಔರತ್ (1940) ನ ರಿಮೇಕ್ ಆಗಿತ್ತು.

Latest Videos


Salam Bombay

ಸಲಾಮ್ ಬಾಂಬೆ (1988) -
ಮೀರಾ ನಾಯರ್ ಅವರ 1988 ರ  ಚಲನಚಿತ್ರ ಸಲಾಮ್ ಬಾಂಬೆ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಎರಡನೇ ಭಾರತೀಯ ಚಲನಚಿತ್ರ. ಸಲಾಂ ಬಾಂಬೆ. ಮುಂಬೈನ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳ ದೈನಂದಿನ ಜೀವನವನ್ನು ಚಿತ್ರಿಸುತ್ತದೆ.ಈ  ಚಲನಚಿತ್ರವು 61ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು.

ಲಗಾನ್ (2001) - 
ಅಶುತೋಷ್ ಗೋವಾರಿಕರ್ ಬರೆದು ನಿರ್ದೇಶಿಸಿದ ಹಿಂದಿ ಸಿನಿಮಾ ಲಗಾನ್‌ನಲ್ಲಿ ಅಮೀರ್ ಖಾನ್ ಮತ್ತು ಗ್ರೇಸಿ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ  ಚಿತ್ರವು ಆಸ್ಕರ್ ಪ್ರಶಸ್ತಿಗೆ ಭಾರತದ ಮೂರನೇ ಎಂಟ್ರಿಯಾಗಿದೆ.

ಇನ್ನೂ ಈ ವರ್ಷ ನಾಮನಿರ್ದೇಶನಗೊಂಢ ತೆಲುಗು ಸಿನಿಮಾ ಆರ್‌ಆರ್‌ಆರ್‌ ಭಾರತಕ್ಕೆ ಕೊನೆಗೂ ಆಸ್ಕರ್‌ ಪ್ರಶಸ್ತಿ ಗೆಲ್ಲಿಸಿದೆ.SS ರಾಜಮೌಳಿಯವರ RRR ನ ನಾಟು ನಾಟು ಹಾಡು 2023 ರ ಅಕಾಡೆಮಿ ಪ್ರಶಸ್ತಿಯ ಅತ್ಯುತ್ತಮ ಮೂಲ ಹಾಡು ಪ್ರಶಸ್ತಿ ಗೆದ್ದಿದೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

click me!