ವಿಶ್ವಕಪ್ ಟೈಮಲ್ಲಿ ಭಾರತಕ್ಕೆ ಬಂದ ಫುಟ್‌ಬಾಲ್ ಲೆಜೆಂಡ್‌ ಡೇವಿಡ್ ಬೆಕ್‌ಹ್ಯಾಮ್‌ಗೆ ಬಾಲಿವುಡ್ ಆತಿಥ್ಯ

Published : Nov 17, 2023, 04:10 PM ISTUpdated : Nov 17, 2023, 04:16 PM IST

ಲೆಜೆಂಡರಿ ಫುಟ್ಬಾಲ್ ಆಟಗಾರ, ಡೇವಿಡ್ ಬೆಕ್‌ಹ್ಯಾಮ್ (David Beckham)  ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್ ವಿಶ್ವಕಪ್ 2023  (World Cup 2023) ಸೆಮಿಫೈನಲ್‌ನಲ್ಲಿ ಭಾಗವಹಿಸಿದ್ದು ಸಖತ್‌ ಸುದ್ದಿಯಾಗಿತ್ತು. ಅದರ ನಂತರ ಈಗ ಡೇವಿಡ್‌ ಬೆಕ್‌ಹ್ಯಾಮ್‌ ಮುಖೇಶ್‌ ಅಂಬಾನಿ, ಶಾರುಖ್‌ ಖಾನ್‌ ಹಾಗೂ ಸೋನಮ್‌ ಕಪೂರ್‌ ಮನೆಯ ಪಾರ್ಟಿಯಲ್ಲಿ ಭಾಗವಹಿಸಿರುವ ಫೋಟೋಗಳು ವೈರಲ್‌ ಆಗಿವೆ. 

PREV
19
ವಿಶ್ವಕಪ್ ಟೈಮಲ್ಲಿ ಭಾರತಕ್ಕೆ ಬಂದ ಫುಟ್‌ಬಾಲ್ ಲೆಜೆಂಡ್‌ ಡೇವಿಡ್ ಬೆಕ್‌ಹ್ಯಾಮ್‌ಗೆ ಬಾಲಿವುಡ್ ಆತಿಥ್ಯ

UNICHEFನ ಸದ್ಭಾವನಾ ರಾಯಭಾರಿಯಾಗಿ ಮೂರು ದಿನಗಳ ಭಾರತ ಪ್ರವಾಸದ ಸಮಯದಲ್ಲಿ  ಫುಟ್‌ಬಾಲ್ ಆಟಗಾರ ಬೆಕ್‌ಹ್ಯಾಮ್‌ ಮುಂಬೈನಲ್ಲಿ  ಬ್ಯಾಕ್-ಟು-ಬ್ಯಾಕ್ ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ.

29

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ವಿಶ್ವಕಪ್ 2023 ಸೆಮಿಫೈನಲ್‌ನಲ್ಲಿ  ಡೇವಿಡ್ ಬೆಕ್‌ಹ್ಯಾಮ್ ಜೊತೆಗೆ ಸಚಿನ್ ತೆಂಡೂಲ್ಕರ್, ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಅನಂತ್ ಅಂಬಾನಿ ಮತ್ತಿತರರು ಉಪಸ್ಥಿತರಿದ್ದರು.


 

39

ಗುರುವಾರ ಫುಟ್ಬಾಲ್‌ ಲೆಜೆಂಡ್‌ ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾಕ್ಕೆ  ಭೇಟಿ ನೀಡಿದ್ದಾರೆ. ಡೇವಿಡ್‌ ಬೆಕ್‌ಹ್ಯಾಮ್‌ ಅವರಿಗಾಗಿ ಅಂಬಾನಿಯೂ ಪಾರ್ಟಿ ಆಯೋಜಿಸಿದ್ದರು.


 

49

ಗುರುವಾರ ರಾತ್ರಿ ಶಾರುಖ್ ಖಾನ್ ಅವರ ಮುಂಬೈ ನಿವಾಸ ಮನ್ನತ್‌ನಲ್ಲಿ ಮಾಜಿ  ಫುಟ್‌ಬಾಲ್‌ ಸ್ಟಾರ್‌ ಅವರನ್ನು ಖಾಸಗಿ ಪಾರ್ಟಿಗೆ ಆಹ್ವಾನಿಸಲಾಯಿತು. ಡೇವಿಡ್ ಬೆಕ್‌ಹ್ಯಾಮ್ ಅವರ ಕಾರು ಮನ್ನತ್‌ಗೆ ಆಗಮಿಸುತ್ತಿರುವ ವೀಡಿಯೋ ಅನ್ನು ಶಾರುಖ್ ಖಾನ್ ಫ್ಯಾನ್‌ ಪೇಜ್‌ ಶೇರ್‌ ಮಾಡಿದೆ. 
 

59

ಇದಕ್ಕೂ ಮೊದಲು ನಟಿ ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ದಂಪತಿ ಬುಧವಾರ ತಮ್ಮ ಮುಂಬೈ ನಿವಾಸದಲ್ಲಿ ಬೇಕಮ್‌ ಅವರಿಗೆ ಪಾರ್ಟಿಯನ್ನು ಆಯೋಜಿಸಿದ್ದರು. 

69

ಪಾರ್ಟಿ ಸಮಯದ ಹಲವು ಫೋಟೋಗಳನ್ನು ಸೋನಮ್‌ ಕಪೂರ್‌ ಅವರ ಪತಿ ಅನಂದ್‌ ಅಹುಜಾ ಸೋಶಿಯಲ್‌ ಮೀಡಿಯಾದಲ್ಲಿ  ಹಂಚಿಕೊಂಡಿದ್ದಾರೆ.

79

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್‌ನಿಂದ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್, ಸಂಜಯ್ ಮತ್ತು ಮಹೀಪ್ ಕಪೂರ್ ಅವರಂತಹ ಅನೇಕ ಖ್ಯಾತನಾಮರು ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

89

ಡೇವಿಡ್ ಬೆಕ್‌ಹ್ಯಾಮ್ ರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದರು ಮತ್ತು 1996-2009 ರವರೆಗೆ 100 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.

99

ಮಿಡ್‌ಫೀಲ್ಡರ್ ಆಟಗಾರ ತನ್ನ ವೃತ್ತಿಜೀವನದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, AC ಮಿಲನ್, ಪ್ಯಾರಿಸ್ ಸೇಂಟ್ ಜರ್ಮೈನ್ ಮತ್ತು LA ಗ್ಯಾಲಕ್ಸಿಯಂತಹ ಐಕಾನಿಕ್ ಫುಟ್‌ಬಾಲ್ ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ.

Read more Photos on
click me!

Recommended Stories