ಪತ್ನಿ ಅನುಷ್ಕಾಳಂತೆ ಸಿನಿಮಾಗೆ ಎಂಟ್ರಿ ಕೊಟ್ರ ವಿರಾಟ್ ಕೊಹ್ಲಿ… ವೈರಲ್ ಆಗ್ತಿದೆ ಫೋಟೊ !
ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರಂತೆ ಸಿನಿಮಾದಲ್ಲಿ ನಟಿಸುತ್ತಿದ್ದಾರ? ಎಲ್ಲೆಡೆ ವೈರಲ್ ಆಗುತ್ತಿರುವ ಫೋಟೊ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರಂತೆ ಸಿನಿಮಾದಲ್ಲಿ ನಟಿಸುತ್ತಿದ್ದಾರ? ಎಲ್ಲೆಡೆ ವೈರಲ್ ಆಗುತ್ತಿರುವ ಫೋಟೊ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ನೀವು ಅನುಷ್ಕಾ ಶರ್ಮಾ (Anushka Sharma) ಅವರನ್ನೇ ಹೋಲುವ ಒಬ್ಬ ಮಹಿಳೆಯನ್ನು ಈ ಹಿಂದೆ ನೋಡಿರಬಹುದು ಅಲ್ವಾ?. ಕೆಲವು ವರ್ಷಗಳ ಹಿಂದೆ, ನಟಿ ತನ್ನ ತದ್ರೂಪಿಯೊಬ್ಬರ ಫೋಟೋವನ್ನು ಹಂಚಿಕೊಂಡಿದ್ದರು ಮತ್ತು ಆಕೆಯನ್ನು ನೋಡಿ ಸ್ವತಃ ತಮಗೆ ಆಶ್ಚರ್ಯವಾಯಿತು ಎಂದು ಹೇಳಿದ್ದರು. ಅನುಷ್ಕಾ ಶರ್ಮಾ ಅವರಂತೆಯೇ ಕಾಣುವ ನಟಿ ವಿದೇಶಿ ನಟಿಯಾಗಿದ್ದರು.
ಈವಾಗ ಯಾಕೆ ಆ ವಿಷ್ಯ ಅಂದ್ರೆ, ಅದಕ್ಕೂ ಕಾರಣ ಇದೆ. ಒಂದು ವೆಬ್ ಸೀರಿಸ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ಜನ ವಿರಾಟ್ ಕೊಹ್ಲಿ (Virat Kohli) ಕೂಡ ತಮ್ಮ, ಪತ್ನಿಯಂತೆ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಕೇಳುತ್ತಿದ್ದಾರೆ. ಆದರೆ ಅಲ್ಲಿ ವಿಷ್ಯ ಬೇರೆ ಇದೆ.
ವಿರಾಟ್ ಕೊಹ್ಲಿ ಅವರನ್ನೆ ಹೋಲುವ ವ್ಯಕ್ತಿಯೊಬ್ಬರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ, ವಿರಾಟ್ ಕೊಹ್ಲಿಯ ಹೋಲುವ ಫೋಟೋ ವೈರಲ್ ಆಗುತ್ತಿದೆ. ಈ ಫೋಟೊ ನೋಡಿ ಜನರು ಇದು ವಿರಾಟ್ ಕೊಹ್ಲಿ ಎಂದೇ ಕನ್ ಫ್ಯೂಸ್ ಆಗುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟರ್ಕಿಶ್ ವೆಬ್ ಸೀರಿಸ್ (Turkish web series) ಒಂದರಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯ ತದ್ರೂಪಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ತದ್ರೂಪಿ ನಟನ ಪಾತ್ರವು ಎರ್ಟುಗ್ರಲ್ ಎಂಬ ಸರಣಿಯಲ್ಲಿ ಕಂಡುಬರುತ್ತದೆ. ರೆಡ್ಡಿಟ್ ಬಳಕೆದಾರರು ಟರ್ಕಿಶ್ ಸೀರೀಸ್ ನಟನ ಫೋಟೋವನ್ನು ಹಂಚಿಕೊಂಡು 'ಅನುಷ್ಕಾ ಶರ್ಮಾ ಅವರ ಪತಿಯ ಟಿವಿಯ ಚೊಚ್ಚಲ ಎಂಟ್ರಿ’ ಎಂದು ಬರೆದು ಶೇರ್ ಮಾಡಿದ್ದು, ನಂತರ ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಪೋಸ್ಟ್‌ಗೆ ಅನೇಕ ಜನರು ಕಾಮೆಂಟ್ ಮಾಡಿದ್ದಾರೆ ಮತ್ತು ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ. ಒಬ್ಬರು, ' ಈ ಟರ್ಕಿಶ್ ವೆಬ್ ಸೀರಿಸ್ ಮೊದಲ ಬಾರಿಗೆ ನೋಡಿದಾಗ, ಅವನು ವಿರಾಟ್ ಕೊಹ್ಲಿ ಎಂದು ನಾನು ಭಾವಿಸಿದೆ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ನಾನು ಈ ನಟನನ್ನು ಮೊದಲ ಬಾರಿಗೆ ಎರ್ಟುಗ್ರಲ್‌ನಲ್ಲಿ ನೋಡಿದಾಗ, ವಿರಾಟ್ ಕೊಹ್ಲಿ ನಿಜವಾಗಿಯೂ ಟಿವಿಯಲ್ಲಿ ನಟಿಸುತ್ತಿದ್ದಾರೆ ಎಂದು ನಾನು ಭಾವಿಸಿದೆ' ಎಂದು ಬರೆದಿದ್ದಾರೆ. ನಿಮಗೂ ಈ ಫೋಟೊ ನೋಡಿ ಹಾಗೆ ಅನಿಸೋದಿಲ್ವಾ?
ಎರ್ಟುಗ್ರುಲ್ (Ertugrul) ಬಹಳ ಜನಪ್ರಿಯ ಟರ್ಕಿಶ್ ವೆಬ್ ಸೀರಿಸ್ ಆಗಿದ್ದು, 2014 ರಲ್ಲಿ ಪ್ರಾರಂಭವಾದ ಈ ವೆಬ್ ಸೀರೀಸ್ 2019 ರವರೆಗೆ ನಡೆಯಿತು. 5 ವರ್ಷಗಳಲ್ಲಿ, ಈ ವಿದೇಶಿ ವೆಬ್ ಸರಣಿಯು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಗಳಿಸಿತು.