ನಟ ರಾಮ್ ಚರಣ್ ಇವತ್ತು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಖುಷಿಯಲ್ಲಿ, ನ್ಯಾಷನಲ್ ಅವಾರ್ಡ್ ವಿನ್ನರ್ 'ಉಪ್ಪೆನ್ನಾ' ಸಿನಿಮಾದ ಡೈರೆಕ್ಟರ್ ಬುಚ್ಚಿಬಾಬು ಸನಾ ಡೈರೆಕ್ಷನ್‌ನಲ್ಲಿ ನಟಿಸ್ತಿರೋ 16ನೇ ಸಿನಿಮಾದ ಟೈಟಲ್ ಹಾಗು ಫಸ್ಟ್ ಲುಕ್ ರಿಲೀಸ್ ಆಗಿದೆ.
ರಗಡ್ ಲುಕ್ ನಲ್ಲಿ ರಾಮ್‌ಚರಣ್
ಪೆದ್ದಿ ಅಂತ ಹೆಸರಿಟ್ಟಿರೋ ಈ ಸಿನಿಮಾದಲ್ಲಿ ರಾಮ್ ಚರಣ್ ಸಖತ್ ಡಿಫರೆಂಟಾಗಿ ಕಾಣಿಸ್ತಿದ್ದಾರೆ. ಡೈರೆಕ್ಟರ್ ಬುಚ್ಚಿಬಾಬು ರಾಮ್ ಚರಣ್ ಕ್ಯಾರೆಕ್ಟರ್‌ನ ತುಂಬಾ ಕೇರ್ಫುಲ್ ಆಗಿ ಕ್ರಿಯೇಟ್ ಮಾಡಿದ್ದಾರೆ ಅಂತ ಫಸ್ಟ್ ಲುಕ್ ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತೆ. ರಾಮ್ ಚರಣ್ ಅವರ ಈ ಲುಕ್ ಸಿನಿಮಾದ ಬಗ್ಗೆ ಎಕ್ಸ್‌ಪೆಕ್ಟೇಷನ್ ಜಾಸ್ತಿ ಮಾಡಿದೆ.
ಒರಟುತನದ ಲುಕ್‌ನಲ್ಲಿ ರಾಮ್ ಚರಣ್:
ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಡೋ ತರ 'ಪೆದ್ದಿ' ಸಿನಿಮಾದಿಂದ ಎರಡು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಒಂದರಲ್ಲಿ ಸಖತ್ ರಗಡ್ ಆಗಿ ಕಾಣ್ತಿದಾರೆ, ಇನ್ನೊಂದರಲ್ಲಿ ಬೀಡಿ ಸೇದುತ್ತಾ ಮಾಸ್ ಲುಕ್ ಕೊಟ್ಟಿದ್ದಾರೆ. ಈ ಎರಡು ಪೋಸ್ಟರ್ ಸದ್ಯಕ್ಕೆ ವೈರಲ್ ಆಗ್ತಿದೆ.
ಗೇಮ್ ಚೇಂಜರ್ ಚಿತ್ರತಂಡ
ಒಟ್ಟಿನಲ್ಲಿ ಈ ಸಿನಿಮಾ ರಾಮ್ ಚರಣ್ ಅವರನ್ನ ಗೇಮ್ ಚೇಂಜರ್ ಸೋಲಿನಿಂದ ಮೇಲೆತ್ತೋ ಸಿನಿಮಾ ಆಗುತ್ತೆ ಅಂತ ಎಕ್ಸ್ಪೆಕ್ಟ್ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಜಾಹ್ನವಿ ಕಪೂರ್ ನಟಿಸ್ತಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ ಮಾಡ್ತಿದ್ದಾರೆ. ಆರ್.ರತ್ನವೇಲು ಕ್ಯಾಮೆರಾ ವರ್ಕ್ ಮಾಡ್ತಿದ್ದಾರೆ. ನ್ಯಾಷನಲ್ ಅವಾರ್ಡ್ ವಿನ್ನರ್ ನವೀನ್ ನೂಲಿ ಎಡಿಟಿಂಗ್ ಮಾಡ್ತಿದ್ದಾರೆ. ಅವಿನಾಶ್ ಕೊಲ್ಲಾ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡ್ತಿದ್ದಾರೆ.