ನಟನೆಯಲ್ಲಿ ಸೂಪರ್‌ ಫ್ಲಾಪ್‌ ಆದ ಈ ಸ್ಟಾರ್‌ ಕಿಡ್ಸ್‌ ಈಗ ಉಶಸ್ವಿ ಉದ್ಯಮಿಗಳು!

First Published Nov 14, 2022, 5:01 PM IST

ನವೆಂಬರ್ 14 ರಂದು (Childens day 2022) ದೇಶಾದ್ಯಂತ ಮಕ್ಕಳ ದಿನ 2022 ಎಂದು ಆಚರಿಸಲಾಗುತ್ತಿದೆ. ಜನಸಾಮಾನ್ಯರಿಂದ ಹಿಡಿದು ಬಾಲಿವುಡ್ ತಾರೆಯರವರೆಗೂ ಈ ದಿನವನ್ನು ಆಚರಿಸಲು ಮರೆಯುವುದಿಲ್ಲ. ಬೆಳ್ಳಿ ತೆರೆ ಮೇಲೆ ತಮ್ಮ ಸಾಮರ್ಥ್ಯ ತೋರಿಸಲು ಸಾಧ್ಯವಾಗದೇ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಫ್ಲಾಪ್ ಎಂದು ಸಾಬೀತಾಗಿರುವ ಸ್ಟಾರ್‌ ಕಿಡ್ಸ್‌ ಇದ್ದಾರೆ. ಆದರೆ ಸಿನಿಮಾದಲ್ಲಿ ಫ್ಲಾಪ್ ಆದ ಈ ಸ್ಟಾರ್ ಮಕ್ಕಳು ಬೇರೆ ಬೇರೆ ಬ್ಯುಸಿನೆಸ್ ಮಾಡಿ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ನಟನೆಯಲ್ಲಿ ಫೇಲ್ ಆದರೂ ಬಿಜಿನೆಸ್ ನಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿರುವ  ಆ ಸ್ಟಾರ್ ಕಿಡ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬಾಲಿವುಡ್ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಪುತ್ರಿ ಟ್ವಿಂಕಲ್ ಖನ್ನಾ ಅವರು ಚಲನಚಿತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ.1995 ರಲ್ಲಿ, ಟ್ವಿಂಕಲ್ ಬರ್ಸಾತ್ ಚಲನಚಿತ್ರದಲ್ಲಿ ಬಾಬಿ ಡಿಯೋಲ್ ಎದುರು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು, ಆದರೆ ಅವರು ತಮ್ಮ ಚಿತ್ರದ ಯಶಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸತತ ಫ್ಲಾಪ್ ಚಿತ್ರಗಳನ್ನು ನೋಡಿದ ಅವರು ನಟನಾ ಕ್ಷೇತ್ರವನ್ನು ತೊರೆದು ಬರಹಗಾರರಾದರು. ಅವರು ಈಗ ಯಶಸ್ವಿ ಬರಹಗಾರ್ತಿ, ಅಂಕಣಕಾರರು, ಇಂಟೀರಿಯರ್ ಡಿಸೈನರ್ (interior Designer) ಮತ್ತು ನಿರ್ಮಾಪಕ. ಸಿನಿಮಾ ನಿರ್ಮಾಪಕಿಯಾಗಿ ಕೋಟ್ಯಂತರ ರೂ ಸಂಪಾದನೆ ಮಾಡುತ್ತಿದ್ದಾರೆ.

ಬಾಲಿವುಡ್‌ನ ಟಾಪ್‌ ನಟರಲ್ಲಿ ಒಬ್ಬರಾಗಿದ್ದ ಜಿತೇಂದ್ರ ಅವರ ಪುತ್ರ ತುಷಾರ್ ಕಪೂರ್ ಕೂಡ ನಟನಾಗಿ ಯಶಸ್ವಿಯಾಗಲಿಲ್ಲ. ಅವರು 2001 ರ ಚಲನಚಿತ್ರ ಮುಜೆ ಕುಚ್ ಕೆಹನಾ ಹೈ ನಲ್ಲಿ ತಮ್ಮ ಚೊಚ್ಚಲ ಚಿತ್ರದಲ್ಲಿ ನಟಿಸಿದರು. ಚಿತ್ರ ಹಿಟ್ ಆದರೂ ತುಷಾರ್‌ಗೆ ಅದರಿಂದ ಯಾವುದೇ ಲಾಭವಾಗಲಿಲ್ಲ. ಇದರ ನಂತರ ಬಂದ ಅವರ ಬಹುತೇಕ ಚಿತ್ರಗಳು ಫ್ಲಾಪ್ ಆದವು. ಅವರು ರೋಹಿತ್ ಶೆಟ್ಟಿ ಅವರ ಗೋಲ್ಮಾಲ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ  ತುಷಾರ್ ಎಂಟರ್ಟೈನ್ಮೆಂಟ್ ಹೌಸ್ ಮೂಲಕ ಚಲನಚಿತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ.ಅವರು ಅಕ್ಷಯ್ ಕುಮಾರ್ ಅವರ ಲಕ್ಷ್ಮಿ ಚಿತ್ರವನ್ನು ನಿರ್ಮಿಸಿದರು.

2000 ರಲ್ಲಿ ಬ್ಲಾಕ್‌ಬಸ್ಟರ್ ಚಿತ್ರ ಮೊಹಬ್ಬತೇನ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಉದಯ್ ಚೋಪ್ರಾ, ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಫ್ಲಾಪ್ ಎಂದು ಸಾಬೀತಾಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸ್ವಂತವಾಗಿ ಒಂದೇ ಒಂದು ಹಿಟ್ ಚಿತ್ರವನ್ನು ಕೊಡಲು ಸಾಧ್ಯವಾಗಲಿಲ್ಲ. ಸತತ ಸೋಲುಗಳ ನಂತರ, ಅವರು ನಟನೆಯನ್ನು ತೊರೆದು ನಿರ್ಮಾಪಕರ ಜವಾಬ್ದಾರಿಯನ್ನು ವಹಿಸಿಕೊಂಡರು. ಉದಯ್ ಅವರು ಲಾಸ್ ಏಂಜಲೀಸ್‌ನಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ತಮ್ಮ ಕೈಯನ್ನು ಪ್ರಯತ್ನಿಸಿದರು ಮತ್ತು ಇಂದು ಅವರು ಸೆಕ್ಸಿಯೆಸ್ಟ್ ನಿರ್ಮಾಪಕರಲ್ಲಿ ಒಬ್ಬರೆಂದು ಸಾಬೀತಾಗಿದ್ದಾರೆ. ಅವರು ಹಾಲಿವುಡ್ ಚಿತ್ರಗಳಾದ ಗ್ರೇಸ್ ಆಫ್ ಮೊನಾಕೊ ಮತ್ತು ದಿ ಲಾಂಗೆಸ್ಟ್ ವೀಕ್ ಅನ್ನು ನಿರ್ಮಿಸಿ ಕೋಟಿಗಟ್ಟಲೆ ಲಾಭ ಪಡೆದರು.

ಬಾಲಿವುಡ್‌ನಲ್ಲಿ ಜುಬಿಲಿ ಸ್ಟಾರ್ ಎಂದೇ ಖ್ಯಾತರಾಗಿರುವ ರಾಜೇಂದ್ರ ಕುಮಾರ್ ಅವರ ಪುತ್ರ ಮತ್ತು ಸಂಜಯ್ ದತ್ ಅವರ ಸಹೋದರಿ ನಮ್ರತಾ ದತ್ ಅವರ ಪತಿ ಕುಮಾರ್ ಗೌರವ್ ಅವರು ಚಲನಚಿತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಅವರು 1981 ರಲ್ಲಿ ಬ್ಲಾಕ್ನ ಬಸ್ಟರ್ ಚಿತ್ರ ಲವ್ ಸ್ಟೋರಿಯೊಂದಿಗೆ ತಮ್ಮ ಚೊಚ್ಚಲ ಸಿನಿಮಾದಲ್ಲಿ ನಟಿಸಿದರು. ಆದರೆ ಅವರ ಯಶಸ್ಸಿಂದ ಹೆಚ್ಚು ಕಾಲ ಲಾಭ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವರು ಚಲನಚಿತ್ರ ತೊರೆದು ವ್ಯಾಪಾರ ಪ್ರಾರಂಭಿಸಿದರು. ಮಾಲ್ಡೀವ್ಸ್‌ನಲ್ಲಿ ಟ್ರಾವೆಲ್ ವ್ಯವಹಾರ ಜೊತೆಗೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಇವರು ಇದರಿಂದ  ಕೋಟಿಗಟ್ಟಲೆ  ಲಾಭದ ವ್ಯಾಪಾರದಲ್ಲಿದ್ದಾರೆ

ಹ್ಯಾರಿ ಬವೇಜಾ ಅವರ ಪುತ್ರ ಹರ್ಮನ್ ಬವೇಜಾ 2008ರ ಚಲನಚಿತ್ರ ಲವ್ ಸ್ಟೋರಿ 2050 ರಲ್ಲಿ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರವೇ ಫ್ಲಾಪ್ ಎಂದು ಸಾಬೀತಾಯಿತು. ಇದರ ನಂತರ ಅವರು ಇನ್ನೂ 4-5 ಚಿತ್ರಗಳಲ್ಲಿ ಕೆಲಸ ಮಾಡಿದರು ಆದರೆ ಯಶಸ್ಸು ಅವರ ಕೈ ಹಿಡಿಯಲಿಲ್ಲ. ಹರ್ಮನ್ ಈಗ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಫಿಟ್‌ನೆಸ್ ಪೂರಕ  ವ್ಯವಹಾರದಿಂದ ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.

ನಿರ್ಮಾಪಕ ವಾಸು ಭಗ್ನಾನಿಯವರ ಪುತ್ರ ಜಾಕಿ ಭಗ್ನಾನಿ 2009 ರಲ್ಲಿ ಕಲ್ ಕಿಸ್ನೆ ದೇಖಾ ಎಂಬ ಫ್ಲಾಪ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ ಅವರು ನಟನಾಗಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ನಂತರ ಅವರು  ಚಿತ್ರಗಳನ್ನು ನಿರ್ಮಿಸಲು ಪ್ರಯತ್ನಿಸಿದರು. ಅವುಗಳೆಂದರೆ ಸಬರ್ಜೀತ್, ದಿಲ್ ಜಂಗ್ಲೀ, ಕೂಲಿ ನಂ. ಒನ್, ಬೆಲ್ ಬಾಟಮ್, ಕಟ್ಪುಟ್ಲಿ ಮುಂತಾದ ಚಿತ್ರಗಳನ್ನು ನಿರ್ಮಿಸಿ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ.

click me!