ಮಲೈಕಾ ಅರೋರಾರ ಪತಿ ಎಂಬ ಟ್ಯಾಗ್‌ ನಂಗಿಷ್ಟವಲ್ಲ: ಅರ್ಬಾಜ್ ಖಾನ್

First Published Nov 14, 2022, 4:16 PM IST

ಅರ್ಬಾಜ್ ಖಾನ್  (Arbaaz khan) ಈ ದಿನಗಳಲ್ಲಿ ತಮ್ಮ ಹೊಸ ವೆಬ್ ಸೀರೀಸ್ 'ತನವ್' (Tanaav) ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಸಲ್ಮಾನ್ ಖಾನ್  (Salman Khan) ಅವರ ಸಹೋದರ ಅಥವಾ ಸಲೀಂ ಖಾನ್ (Salim Khan) ಅವರ ಮಗ ಎಂಬ ಕಾರಣಕ್ಕಾಗಿ ತನಗೆ ನಷ್ಟ ತಂದಿದೆ ಎಂದಿದ್ದಾರೆ. ತಮ್ಮ ತಂದೆ ಮತ್ತು ಸಹೋದರರ ಕೆಲಸದ ಉತ್ತರಾಧಿಕಾರದ ಒತ್ತಡವನ್ನು ಅನುಭವಿಸಲಿಲ್ಲ ಎಂದೂ ಹೇಳಿದ್ದಾರೆ. ಹಿಂದೊಮ್ಮೆ ಮಲೈಕಾರ (Malaika Arora) ಪತಿ ಎಂದು ಗುರುತಿಸುವಾಗ ಅಸಮಾಧಾನಗೊಳ್ಳುತ್ತಿದೆ ಎಂದಿದ್ದಾರೆ.

ಅರ್ಬಾಜ್ ಖಾನ್ ಪ್ರಕಾರ, ಮಲೈಕಾ ಅರೋರಾ ಅವರ ಪತಿ ಎಂದು ಅವರನ್ನು ಕರೆಯುವಾಗ ಅವರು ಅಸಮಾಧಾನಗೊಳ್ಳುತಿದ್ದರಂತೆ. ಅರ್ಬಾಜ್ ಖಾನ್ 1998 ರಲ್ಲಿ ಮಲೈಕಾ ಅರೋರಾ ಅವರನ್ನು ವಿವಾಹವಾದರು, ಮತ್ತು  2016 ರಲ್ಲಿ ಬೇರ್ಪಟ್ಟರು.

ಇಂಗ್ಲಿಷ್ ಮನರಂಜನಾ ಸುದ್ದಿ ವೆಬ್‌ಸೈಟ್‌ನೊಂದಿಗಿನ ಸಂಭಾಷಣೆಯಲ್ಲಿ ಅರ್ಬಾಜ್ ಖಾನ್, ಸಲ್ಮಾನ್ ಖಾನ್, ಸಲೀಂ ಖಾನ್ ಮತ್ತು ಮಲೈಕಾ ಅರೋರಾ ಕಾರಣದಿಂದ ಪಡೆದ ಟ್ಯಾಗ್‌ಗಳಿಂದ ಹಿಂದೆ ತುಂಬಾ ಅಸಮಾಧಾನಗೊಂಡಿದ್ದಾಗಿ ಅರ್ಬಾಜ್ ಖಾನ್ ಬಹಿರಂಗಪಡಿಸಿದ್ದಾರೆ.

ಒಂದು ಕಾಲದಲ್ಲಿ ಈ ಕಾರಣದಿಂದ ಸ್ವಲ್ಪ ಚಿಂತೆ ಇತ್ತು. ಈಗ ಹಿಂದಿರುಗಿ ನೋಡಿದಾಗ ಯಾವುದೇ ಕಾರಣ ಕಾಣುತ್ತಿಲ್ಲ ಮತ್ತು ಇದಕ್ಕೆ ಅರ್ಥವಿಲ್ಲ ಎಂದು ಅನಿಸುತ್ತದೆ. ಸಲೀಂ ಖಾನ್. ಮಗ, ಸಲ್ಮಾನ್ ಖಾನ್ ಅವರ ಸಹೋದರ ಅಥವಾ ಬಹುಶಃ ಮಲೈಕಾ ಅರೋರಾ ಅವರ ಪತಿ ಎಂದು ಹೇಳಿದಾಗ ಆಗ ನನಗೆ ತೊಂದರೆಯಾಗುತ್ತಿತ್ತು' ಎಂದು ಬಹಿರಂಗ ಪಡಿಸಿದ್ದಾರೆ ಅರ್ಬಾಜ್‌ ಖಾನ್‌.

ಅವರು ಈಗ ಈ ಎಲ್ಲದರ ಬಗ್ಗೆ ಯೋಚಿಸುವುದಿಲ್ಲ ಮತ್ತು ಉತ್ತಮ ಸ್ಥಳದಲ್ಲಿ ತಮ್ಮನ್ನು ಕಂಡುಕೊಳ್ಳುತ್ತೇನೆ ಎಂದು  ಅರ್ಬಾಜ್ ಖಾನ್ ಹೇಳಿದರು. 

'ನೀವು ಬದಲಾಯಿಸಲಾಗದ ಕೆಲವು ವಿಷಯಗಳಿವೆ. ಜನರ ಮನಸ್ಥಿತಿಯನ್ನು ಬದಲಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ.ನೀವು ನೀವೇ ಆಗಿರಬೇಕು. ನಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ನಾನು ಅರಿತುಕೊಂಡೆ. ಜನರಿಗೆ ವಿಷಯಗಳನ್ನು ಸಾಬೀತುಪಡಿಸುವ ಕೆಲಸ ನಿಷ್ಪ್ರಯೋಜಕ,' ಎಂದು ಅರ್ಬಾಜ್‌ ಖಾನ್‌ ಹೇಳಿದ್ದಾರೆ.

ಅರ್ಬಾಜ್ ಖಾನ್ 1996 ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ರಿಷಿ ಕಪೂರ್ ಮತ್ತು ಜೂಹಿ ಚಾವ್ಲಾ ಅಭಿನಯದ 'ದಾರಾರ್' ಚಿತ್ರದೊಂದಿಗೆ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸಹ ಪಡೆದರು. 

ಇದರ ನಂತರ ಅರ್ಬಾಜ್ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ', 'ಕಯಾಮತ್: ಸಿಟಿ ಅಂಡರ್ ಥ್ರೆಟ್', 'ಭಾಗಮ್ ಭಾಗ್', 'ಫ್ಯಾಶನ್', 'ದಬಾಂಗ್', 'ದಬಾಂಗ್ 2' ಮತ್ತು 'ದಬಾಂಗ್ 3' ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು 'ದಬಾಂಗ್' ಫ್ರಾಂಚೈಸ್ ಮತ್ತು 'ಡಾಲಿ ಕಿ ಡೋಲಿ' ನಿರ್ಮಾಪಕರು ಮತ್ತು 'ದಬಾಂಗ್ 2' ನಿರ್ದೇಶಕರೂ ಆಗಿದ್ದಾರೆ.

ಈ ದಿನಗಳಲ್ಲಿ ಅರ್ಬಾಜ್ ಖಾನ್ ಕಾಶ್ಮೀರದ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯ ಮೇಲೆ ಕೇಂದ್ರೀಕರಿಸಿದ 'ತನವ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟ್ರೀಮಿಂಗ್ ಇತ್ತೀಚೆಗೆ 'ಸೋನಿ ಲೈವ್' ನಲ್ಲಿ ಪ್ರಾರಂಭವಾಯಿತು.

click me!