Rakul Preet singh: ಸೌತ್ ನಟಿ ಇನ್ನು Condom ಟೆಸ್ಟರ್

Published : Nov 14, 2021, 12:00 PM ISTUpdated : Nov 14, 2021, 12:24 PM IST

Chhatriwali First Look: ನಟಿ ರಾಕುಲ್ ಪ್ರೀತ್ ಸಿಂಗ್ ಹೊಸ ಅವತಾರವಿದು ? Rakul Preet Singh ಕೈಯಲ್ಲಿ ದೊಡ್ಡ ಕಾಂಡೋಮ್ ಪ್ಯಾಕೆಟ್, ಏನಿದು ?

PREV
17
Rakul Preet singh: ಸೌತ್ ನಟಿ ಇನ್ನು Condom ಟೆಸ್ಟರ್

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮ ಮುಂಬರುವ ಚಿತ್ರ 'ಛತ್ರಿವಾಲಿ' ಸಿನಿಮಾದ ಫಸ್ಟ್ ಲುಕ್ ಮೂಲಕ ಸಿನಿಪ್ರಿಯರಿಗೆ ಸರ್ಪೈಸ್ ಕೊಟ್ಟಿದ್ದಾರೆ. ದೊಡ್ಡ ಕಾಂಡೋಮ್ ಪ್ಯಾಕೆಟ್ ಈ ಫಸ್ಟ್ ಲುಕ್ ವಿಶೇಷ.

27

ತೇಜಸ್ ಪ್ರಭಾ ವಿಜಯ್ ದಿಯೋಸ್ಕರ್ ನಿರ್ದೇಶಿಸುತ್ತಿರುವ ಮತ್ತು ರೋನಿ ಸ್ಕ್ರೂವಾಲಾ ಅವರ ಆರ್‌ಎಸ್‌ವಿಪಿ ನಿರ್ಮಿಸುತ್ತಿರುವ ಚಿತ್ರದ ಮೊದಲ ನೋಟವನ್ನು ರಾಕುಲ್ ಇನ್‌ಸ್ಟಾಗ್ರಾಮ್‌ನಲ್ಲಿ ಅನಾವರಣಗೊಳಿಸಿದ್ದಾರೆ.

37

ಮುಂಬರುವ ಸಿನಿಮಾದಲ್ಲಿ ನಟಿ ಕಾಂಡೋಮ್ ಪರೀಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಲಕ್ನೋದಲ್ಲಿ ಸಿನಿಮಾ ಆರಂಭ ನಡೆಸಲಾಗಿತ್ತು.

47

ಸಿನಿಮಾ ಮಹಿಳಾ ನಿರುದ್ಯೋಗಿ ಕೆಮೆಸ್ಟ್ರಿ ಪದವೀಧರರ ಮೇಲೆ ಕೇಂದ್ರೀಕರಿಸುತ್ತದೆ. ಅವರು ಸಣ್ಣ ಪಟ್ಟಣದಲ್ಲಿ ಉದ್ಯೋಗಕ್ಕಾಗಿ ಹತಾಶರಾಗಿದ್ದಾರೆ. ಕಾಂಡೋಮ್ ಪರೀಕ್ಷಕರಾಗಿ ಕೆಲಸಕ್ಕೆ ಸೇರುತ್ತಾರೆ. ಆದರೆ ಇದು ಆಕೆ ತನ್ನ ಸುತ್ತಲಿರುವ ಪ್ರತಿಯೊಬ್ಬರಿಂದ ಮರೆಮಾಡಬೇಕಾದ ರಹಸ್ಯವಾಗಿರುತ್ತದೆ.

57

ಮುಂಬರುವ ಚಿತ್ರದ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡ ರಾಕುಲ್, ಇದು ಸಾಕಷ್ಟು ಆಸಕ್ತಿದಾಯಕ ವಿಷಯವಾಗಿದೆ. ನನ್ನ ಪಾತ್ರದ ಪ್ರಯಾಣವನ್ನು ಪ್ರಾರಂಭಿಸುವ ಬಗ್ಗೆ ನಾನು ತುಂಬಾ ಥ್ರಿಲ್ ಆಗಿದ್ದೇನೆ. ಕೆಲವು ಸಮಸ್ಯೆಗಳನ್ನು ಲಘುವಾಗಿ ಹೈಲೈಟ್ ಮಾಡುವುದು ಮುಖ್ಯವಾಗಿದೆ. ಅದು ನನಗೆ ಸುಂದರವಾಗಿದೆ. ಉತ್ಸುಕನಾಗಿದ್ದೇನೆ ಎಂದಿದ್ದಾರೆ.

67
Raku

ನಿರ್ಮಾಪಕ ತೇಜಸ್ ದಿಯೋಸ್ಕರ್ ಅವರು ಸಿನಿಮಾದ ಕುರಿತು ಮಾತನಾಡಿ, ನಮ್ಮ ಸಿನಿಮಾ ಸಾಮಾಜಿಕ ಕೌಟುಂಬಿಕ ಮನರಂಜನೆಯಾಗಿದೆ. ಇದು ಕಾಂಡೋಮ್ ಬಳಕೆಯನ್ನು ಅದರ ಕಳಂಕವನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

77

ರಾಕುಲ್ ಅವರು ಚಿತ್ರಿಸುವ ಪ್ರತಿಯೊಂದು ಪಾತ್ರಕ್ಕೂ ತಾಜಾತನವನ್ನು ತರುತ್ತಾರೆ. ಈ ರೀತಿಯ ಸೂಕ್ಷ್ಮವಾದ, ವಿಚಾರ-ಪ್ರಚೋದಕ ವಿಷಯದೊಂದಿಗೆ, ಪ್ರೇಕ್ಷಕರು ಖಂಡಿತವಾಗಿಯೂ ಹಾಸ್ಯದ ಸಿನಿ ಪ್ರಯಾಣ ಆನಂದಿಸುತ್ತಾರೆ ಎಂದು ತೇಜಸ್ ಡಿಯೋಸ್ಕರ್ ಹೇಳಿದ್ದಾರೆ. ಏತನ್ಮಧ್ಯೆ, ರಾಕುಲ್ 'ಛತ್ರಿವಾಲಿ' ಜೊತೆಗೆ 'ಮೇಡೇ', 'ಡಾಕ್ಟರ್ ಜಿ' ಮತ್ತು 'ಥ್ಯಾಂಕ್ ಗಾಡ್' ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories