ಇದಕ್ಕಾಗಿಯೇ ಹೇಳೋದು ಹೆಣ್ಣು ಮಗುವಿನ ಅಪ್ಪ ಆಗೋದು The Best Feeling ಅಂತ!

Published : Mar 24, 2025, 01:08 PM ISTUpdated : Mar 24, 2025, 01:35 PM IST

ಹೆಣ್ಣು ಮಗುವಿನ ಅಪ್ಪನಾಗಿರುವುದು ಖಂಡಿತವಾಗಿಯೂ ಒಂದು ವಿಶಿಷ್ಟ ಅನುಭವ, ಈ ಸೆಲೆಬ್ರಿಟಿ ಅಪ್ಪಂದಿರು ನೋಡಿದ್ರೆ,  ಈ ಮಾತು ನಿಜ ಅನ್ನೋದು ನಿಮಗೆ ಗೊತ್ತಾಗುತ್ತೆ.    

PREV
111
ಇದಕ್ಕಾಗಿಯೇ ಹೇಳೋದು ಹೆಣ್ಣು ಮಗುವಿನ ಅಪ್ಪ ಆಗೋದು The Best Feeling ಅಂತ!

ಈವಾಗ ಕಾಲ ಬದಲಾಗಿದೆ. ಮೊದಲೆಲ್ಲಾ ಹೆಣ್ಣು ಮಗು ಬೇಡ ಅಂತಿದ್ದವರು, ಈವಾಗ ಹೆಣ್ಣು ಮಗು ಮಾತ್ರ ಸಾಕು ಎನ್ನುವಂತಾಗಿದೆ. ಅದರಲ್ಲೂ ಹೆಣ್ಣು ಮಕ್ಕಳ ಅಪ್ಪನಾಗಿರೋದು ಒಂದು ಸುಂದರ, ವಿಶಿಷ್ಟ ಅನುಭವಕ್ಕಿಂತ ಬೇರೆ ಅಲ್ಲ. ಇಲ್ಲಿದೆ ನೋಡಿ ಮುದ್ದು ಮಗಳ ಜೊತೆಗೆ ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳ ಕ್ಯೂಟ್ ಕ್ಷಣಗಳು. 
 

211

ಶಾರುಖ್ ಖಾನ್
ಶಾರುಖ್ ಖಾನ್ (Shah Rukh Khan) ಸಿನಿಮಾ ಇಂಡಷ್ಟ್ರಿಗೆ ಸೂಪರ್ ಸ್ಟಾರ್ ಇರಬಹುದು ಆದರೆ ಮಗಳಿಗೆ ಯಾವಾಗಲೂ ಸೂಪರ್ ಡ್ಯಾಡ್ ಅಷ್ಟೇ. ಅಪ್ಪನ ಕೂದಲಿನ ಜೊತೆ ಆಡುತ್ತಿರುವ ಪುಟ್ಟ ಸುಹಾನ ಖಾನ್ ನೋಡಿ. 
 

311

ರಣಬೀರ್ ಕಪೂರ್
ಮದುವೆಯಾಗಿ ಮಗಳು ಹುಟ್ಟಿದ ಬಳಿಕ ರಣಬೀರ್ ಕಪೂರ್ ನಲ್ಲಿ ಹಲವು ಬದಲಾವಣೆ ಕಂಡಿದೆ. ಮಗಳನ್ನು ಯಾವಾಗಲೂ ಕೈಯಲ್ಲಿ ಹಿಡಿದುಕೊಂಡೆ ತಿರುಗಾಡುತ್ತಾರೆ ಈ ನಟ. ಮಗಳು ರಾಹ ಅಪ್ಪನ ಟೋಪಿ ಮೇಲೆ ಏನ್ ಮಾಡಿದ್ದಾರೆ ನೋಡಿ. 
 

411

ನಿಕ್ ಜೋನಸ್
ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಹೇಗೆ ಕಾಣಿಸ್ತಿದ್ದಾರೆ ನೋಡಿದ್ರ? ಮಗಳು ಮಾಲ್ತಿ ಅಪ್ಪನಿಗೆ ಹೇರ್ ಸ್ಟೈಲ್ ಮಾಡಿದ್ರೆ, ಅಪ್ಪ ಕ್ಯೂಟ್ ಆಗಿಯೇ ಕಾಣಿಸ್ತಾರೆ ಅಲ್ವಾ? 

511

ಕುನಾಲ್ ಖೇಮು
ನಟ ಕುನಾಲ್ ಖೇಮು ತಮ್ಮ ಮುದ್ದಿನ ಮಗಳು ಇನಾಯಗೆ ತಲೆ ಬಾಚಿ ಪಾನಿ ಟೇಲ್ ಕಟ್ಟುತ್ತಿರುವ ಫೋಟೊ ನೋಡಿ, ಹೆಣ್ಣು ಮಗುವಿನ ತಂದೆ ತನ್ನ ಮಗಳಿಗಾಗಿ ಏನ್ ಬೇಕಾದ್ರೂ ಮಾಡ್ತಾರೆ. 

611

ಶಾಹಿದ್ ಕಪೂರ್
ನಟ ಶಾಹಿದ್ ಕಪೂರ್ (Shahid Kapoor) ತನ್ನ ಮುದ್ದಿನ ಮಗಳು ಮಿಶಾ ಜೊತೆ ಮುದ್ದಾಗಿ ಆಟ ಆಡ್ತಿರೋದು ನೋಡಿದ್ರೆ ಎಷ್ಟು ಕ್ಯೂಟ್ ಆಗಿದೆ ಅಲ್ವ?

711

ಕರಣ್ ಸಿಂಗ್ ಗ್ರೋವರ್
ಹೆಣ್ಣು ಮಕ್ಕಳಿಗೆ ಮೇಕಪ್ ಅಂದ್ರೆ ತುಂಬಾನೆ ಇಷ್ಟ, ಅದರಲ್ಲೂ ಅಪ್ಪನಿಗೆ ಮೇಕಪ್ ಮಾಡೋದನ್ನು ಬಿಟ್ಟು ಬಿಡ್ತಾರಾ? ಇಲ್ಲಿದೆ ನೋಡಿ ನಟ ಕರಣ್ ಸಿಂಗ್ ಗ್ರೋವರ್ ಮುದ್ದು ಮಗಳು ದೇವಿ ಅಪ್ಪನಿಗೆ ಮೇಕಪ್ ಬ್ರಶ್ ನಿಂದ ಮೇಕಪ್ ಮಾಡ್ತಿರೋದು. 

811

ಡ್ವಾನೆ ಜಾನ್ಸನ್
ಪ್ರಖ್ಯಾತ ರೆಸ್ಲರ್ ರಾಕ್ ಎಂದೇ ಕರೆಯಲ್ಪಡುವ ಡ್ವಾನೆ ಜಾನ್ಸನ್ (Dwayne Johnson)  ತನ್ನ ಮಗಳ ಮೇಕಪ್ ನಿಂದ ಹೇಗೆ ರೆಡಿಯಾದ್ರೂ ನೋಡಿ, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ ಅಲ್ವಾ? ದಿ ರಾಕ್!

911

ಸೈಫ್ ಆಲಿ ಖಾನ್
ಸಾರಾ ಆಲಿ ಖಾನ್ ಪುಟ್ಟ ಮಗುವಾಗಿರೋವಾಗ ಅಪ್ಪ ಸೈಫ್ ಆಲಿ ಖಾನ್ ಅವರಿಗೆ ಶೇವ್ ಮಾಡೊದಕ್ಕೆ ಹೇಗೆ ಸಹಾಯ ಮಾಡ್ತಿದ್ದಾರೆ ನೋಡಿ.

1011

ರೋಹಿತ್ ಶರ್ಮಾ
ತನ್ನ ಮುದ್ದು ಮಗಳು ಸಮೈರಾ ಮಡಿಲಲ್ಲಿ ಮಗುವಾಗಿ ಮಲಗಿದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma). 

1111

ಅನಿಲ್ ಕಪೂರ್
ಅನಿಲ್ ಕಪೂರ್ (Anil Kapoor) ತಮ್ಮ ಇಬ್ಬರು ಮಕ್ಕಳಾದ ಸೋನಂ ಕಪೂರ್ ಮತ್ತು ರಿಯಾ ಕಪೂರ್ ಜೊತೆ ಕ್ವಾಲಿಟಿ ಸಮಯ ಕಳೆಯುತ್ತಿರುವ ಮುದ್ದಾದ ಹಳೆಯ ಫೋಟೊ ವೈರಲ್ ಆಗುತ್ತಿದೆ. 
 

Read more Photos on
click me!

Recommended Stories