ಎಂತೆಂಥವರ ಮಧ್ಯೆ 'ಕ್ಯಾಬರೆ ಡಾನ್ಸರ್' ಕೂಡ ನೆಟ್ಟಗೆ ಸಂಸಾರ ಮಾಡಬಹುದು ಎಂದು ಹೇಳಿಕೊಟ್ಟ ಈ ನಟಿ ನೆನಪಿದೆಯಾ?

Published : Jan 14, 2026, 10:58 AM IST

ನಟಿ ಜಯಮಾಲಿನಿ ಅವರನ್ನು ನಿಜವಾಗಿಯೂ ಗ್ರೇಟ್ ಎನ್ನಲೇಬೇಕು. ಸಿನೆಮಾದಲ್ಲಿ 'ಗುಡ್ ಗರ್ಲ್‌' ಎನ್ನಿಸಿಕೊಂಡವರು, ಹೀರೋಯಿನ್ ಆಗಿ ಮಿಂಚಿರುವವರು ಇಂಥವರದ್ದೇ ಏನಾದರೊಂದು ಗಾಸಿಪ್ ಇರುವಾಗ, ಯಾವ ಗಾಸಿಪ್, ವಿವಾದವೂ ಇಲ್ಲದೆ ಜಯಮಾಲಿನಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಕುಣಿದಿದ್ದು ಸಣ್ಣ ಸಂಗತಿಯೇನಲ್ಲ! 

PREV
113

ನಟಿ ಜಯಮಾಲಿನಿ (Jayamalini) ಗೊತ್ತಿಲ್ಲ ಅನ್ನೋರು ಕಡಿಮೆ.. ಈಗ ಮಧ್ಯವಯಸ್ಸು ತಲುಪಿರುವವರು, ಅದಕ್ಕೂ ಹಿಂದಿನವರು ಹಾಗೂ ಇದೀಗ ಮಧ್ಯವಯಸ್ಸಿಗೆ ಹತ್ತಿರವಿರುವವರು ಎಲ್ಲರಿಗೂ ನಟಿ ಜಯಮಾಲಿನಿ ಚಿರಪರಿಚರು.

213

ಬರೋಬ್ಬರಿ 20 ವರ್ಷಗಳಿಗೂ ಹೆಚ್ಚು ಕಾಲ ಕ್ಯಾಬರೆ ನಟಿಯಾಗಿ, 'ಬ್ಯಾಡ್ ಗರ್ಲ್' ಆಗಿ 500 ನಟಿಸಿರುವ ಜಯಮಾಲಾ ಅವರು ನಟಿ ಜ್ಯೋತಿಲಕ್ಷ್ಮಿಯ ತಂಗಿ. ಅಕ್ಕನ ತರಹವೇ ತಮ್ಮ ಕುಟುಂಬದ ನಿರ್ವಹಣೆಗೆಂದು 13-14ರ ವಯಸ್ಸಿನಲ್ಲಿಯೇ ಕ್ಯಾಬರೆ ಡ್ಯಾನ್ಸರ್ ಆಗಿ ಸಿನಿಮಾರಂಗಕ್ಕೆ ಬಂದವರು.

313

ನಟಿ ಜಯಮಾಲಿನಿ ಅವರನ್ನು ನಿಜವಾಗಿಯೂ ಗ್ರೇಟ್ ಎನ್ನಲೇಬೇಕು. ಸಿನೆಮಾದಲ್ಲಿ 'ಗುಡ್ ಗರ್ಲ್‌' ಎನ್ನಿಸಿಕೊಂಡವರು, ಹೀರೋಯಿನ್ ಆಗಿ ಮಿಂಚಿರುವವರು ಇಂಥವರದ್ದೇ ಏನಾದರೊಂದು ಗಾಸಿಪ್ ಇರುವಾಗ, ಯಾವ ಗಾಸಿಪ್, ವಿವಾದವೂ ಇಲ್ಲದೆ ಜಯಮಾಲಿನಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಕುಣಿದಿದ್ದು ಸಣ್ಣ ಸಂಗತಿಯೇನಲ್ಲ!

413

ಜಯಮಾಲಿನಿ ಅವರು ಚಿತ್ರರಂಗಕ್ಕೆ ಬಂದಿದ್ದು 70ರ ದಶಕದಲ್ಲಿ. ಅವರು ಚಿತ್ರರಂಗದಲ್ಲಿ ಮೆರೆದಿದ್ದು 70-80ರ ದಶಕದಲ್ಲಿ. ಸಮಾಜದಲ್ಲಿ ಸಂಪ್ರದಾಯಗಳು ಬಹಳ ಎನ್ನುವಷ್ಟು ಬೇರೂರಿದ್ದ ಕಾಲದಲ್ಲಿ ನಟಿ ಜಯಮಾಲಿನಿ ಅವರು ಆ ಕಾಲದಲ್ಲಿ ಅಷ್ಟು ಮಾದಕವಾಗಿ, ಅಷ್ಟು ನಶೆ ಏರಿಸುವಂತೆ ಕುಣಿದು ಹೆಸರು ಮಾಡಿದ್ದು, ಅವಕಾಶ ಸದುಪಯೋಗ ಪಡಿಸಿಕೊಂಡಿದ್ದು ಸಣ್ಣ ಮಾತೇನಲ್ಲ.

513

ಆ ಬಳಿಕ ಅವರ ಜೀವನದಲ್ಲಿ ಏನಾಯ್ತು?

ಸಿನಿಮಾ ನಟನೆಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದ ನಟಿ ಜಯಮಾಲಿನಿ ಸಾರ್ವಜನಿಕ ಹಾಗೂ ವೈಯಕ್ತಿಕ ಜೀವನದಲ್ಲಿ ತದ್ವಿರುದ್ಧ ಎನ್ನುವಂತೆ ಬದುಕುತ್ತಿದ್ದ ಕಾಲವದು. ಆ ನಟಿಗೊಬ್ಬರು ದೊಡ್ಡ ಅಭಿಮಾನಿ ಇದ್ದರು. ಅವರು ಚೆನ್ನೈನ ಪೋಲೀಸ್ ಇನ್ಸಪೆಕ್ಟರ್ ಪಾರ್ಥೀಬನ್. ನಟಿ ಜಯಮಾಲಿಲಿ ಅವರನ್ನು ತುಂಬಾ ಇಷ್ಟಪಟ್ಟು ಅವರಿಗೆ ಪ್ರೊಪೋಸ್ ಮಾಡಿದರು.

613

ಬಳಿಕ ಈ ಇಬ್ಬರೂ ಮದುವೆಯಾಗಿ ಸುಖ-ಸಂಸಾರ ಶುರುಮಾಡಿಕೊಂಡರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಮಗನಿಗೆ ಮದುವೆಯಾಗಿದೆ. ಹೆಣ್ಣುಮಕ್ಕಳನ್ನು ಮೀಡಿಯಾದಿಂದಲೂ ಸಿನೆಮಾದಿಂದಲೂ ದೂರವಿಟ್ಟಿದ್ದಾರೆ ಈ ದಂಪತಿ. ಚೆನ್ನೈನಲ್ಲಿ ಸುಖವಾಗಿ ಸಂಸಾರ ಮಾಡಿಕೊಂಡು ಮಾದರಿಯಾಗಿ ಬದುಕುತ್ತಿದ್ದಾರೆ ಒಂದು ಕಾಲದ ಮಾದಕ ನಟಿ ಜಯಮಾಲಿನಿ.

713

ನಟಿ ಜಯಮಾಲಿನಿಗೆ ತಮ್ಮ ಇಮೇಜ್ ಬಗ್ಗೆಯಾಗಲೀ ಅಥವಾ ಹಳೆಯ ನೆನಪುಗಳ ಬಗ್ಗೆಯಾಗಲೀ ಹೆಮ್ಮೆಯಾಗಲೀ ಅಪರಾಧಿಪ್ರಜ್ಞೆಯಾಗಲೀ ಎರಡೂ ಇಲ್ಲವಂತೆ. ಅಂದು ನನ್ನ ಬದುಕಿಗೆ, ಕುಟುಂಬ ನಿರ್ವಹಣೆಗೆ ಅದೇನು ಬೇಕೋ ಅದನ್ನು ಮಾಡಿದ್ದೇನೆ. ಈಗ ನನ್ನ ಸಂಸಾರಕ್ಕೆ ಏನು ಅಗತ್ಯವೋ ಅದನ್ನು ಮಾಡುತ್ತಿದ್ದೇನೆ' ಎಂದಿದ್ದಾರೆ ಜಲಮಾಲಿನಿ.

813

ನಟಿ ಜಯಮಾಲಿನಿ ಈಗಲೂ ಗ್ಲಾಮರಸ್ ಆಗಿಯೇ ಇದ್ದಾರೆ. ಆರೋಗ್ಯ ಕಾಪಾಡಿಕೊಂಡು, ಪತಿ, ಮಕ್ಕಳೊಂದಿಗೆ ಅನ್ಯೋನ್ಯ ಸಂಬಂಧ ಕಾಪಾಡಿಕೊಂಡು ಹೇಗೆ ಚೆನ್ನಾಗಿ ಇರಬಹುದೋ ಹಾಗೆ ಇದ್ದಾರೆ ಜಯಮಾಲಿನಿ. ಗಾರ್ಜಿಯಸ್, ಎಲಿಗೆಂಟ್ ಎನ್ನಬಹುದು.

913

ಹಲವು ನಟಿಯರು ಸಿನಿಮಾದಲ್ಲಿ ಹೀರೋಯಿನ್‌ಗಳಾಗಿ, ಒಳ್ಳೆಯ ಪಾತ್ರಗಳಲ್ಲಿ ಮಿಂಚಿದ್ದರೂ ನಿಜ ಬದುಕಲ್ಲಿ ದುರಂತಮಯ ಬದುಕನ್ನು ಎದುರಿಸಿದ್ದಾರೆ. 

1013

ಆದರೆ ನಟಿ ಜಯಮಾಲಿನಿ ಮಾತ್ರ ಅದಕ್ಕೆ ವಿರುದ್ಧವಾಗಿ ಉತ್ತಮ ಗೃಹಿಣಿಯಾಗಿ ಬಾಳಿ ಬದುಕಿ ಸಮಾಜಕ್ಕೆ ಮಾದರಿ ಆಗಿದ್ದಾರೆ.

1113

ಆ ಕಾಲದ, ಅಂದರೆ 70-80ರ ದಶಕದ ಸಿನಿಮಾ ಪ್ರೇಕ್ಷಕರಂತೂ ಅವರನ್ನು, ಅವರ ಮಾದಕ ನೃತ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಈಗಿನವರೂ ಕೂಡ ಅವರ ಬಗ್ಗೆ ತಿಳಿದುಕೊಂಡರೆ ಒಳ್ಳೆಯದೇ ಎನ್ನಬಹುದು.

1213

ಕಾರಣ, ಮಾಡುವ ಕೆಲಸ ಯಾವುದೇ ಆದರೂ ಕೆಲದಿಂದ ಹೊರತಾದ ಉತ್ತಮ ಬದುಕನ್ನು ಬಾಳಿ ಬದುಕಲು ಸಾಧ್ಯ ಎನ್ನುವುದನ್ನು ಜನಮಾಲಿನಿ ಪ್ರೂವ್ ಮಾಡಿದ್ದಾರೆ ಎನ್ನಬಹುದು.

1313

ನಟಿ ಜಯಮಾಲಿನಿ ಅವರನ್ನು ಹಲವರು ಮರೆತಿರಬಹುದು. ಆದರೆ, ಒಮ್ಮೆ ನೆನಪು ಮಾಡಿದರೆ ಮತ್ತೆ ನೆನಪಾಗುವುದಂತೂ ಖಂಡಿತ ಎಂದು ಖಡಾಖಮಡಿತವಾಗಿ ಹೇಳಬಹುದು. ಏನಂತೀರಾ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories