ವಿಕ್ರಮ್ ಚತ್ವಾಲ್ ಜೊತೆ ಹಿಂದಿನ ವೈವಾಹಿಕ ಜೀವನ
ಸಂಜಯ್ ಅವರನ್ನು ಭೇಟಿಯಾಗುವ ಮೊದಲು, ಪ್ರಿಯಾ ಅಮೆರಿಕದ ಹೋಟೆಲ್ ಉದ್ಯಮಿ ಮತ್ತು ನಟ ವಿಕ್ರಮ್ ಚತ್ವಾಲ್ ಅವರನ್ನು ವಿವಾಹವಾಗಿದ್ದರು. ಈ ವಿವಾಹ 2006ರಲ್ಲಿ ನಡೆದಿತ್ತು ಮತ್ತು ಅವರಿಗೆ ಸಫಿರಾ ಚತ್ವಾಲ್ ಎಂಬ ಮಗಳು ಇದ್ದಾಳೆ. ಆದರೆ ಈ ದಾಂಪತ್ಯ 2011ರಲ್ಲಿ ವಿಚ್ಛೇದನದೊಂದಿಗೆ ಕೊನೆಗೊಂಡಿತು. ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ ವಿಭಜನೆಗೊಂಡಿದ್ದರೂ, ಪ್ರಿಯಾ ಸಚ್‌ದೇವ್ ಎಂದಿಗೂ ಗೌರವಯುತ ಅಂತರ ಕಾಯ್ದುಕೊಂಡು, ಸಂಜಯ್‌ನ ಮೂರನೇ ಪತ್ನಿಯಾಗಿ ಹಳೆಯ ಕುಟುಂಬದೊಂದಿಗೆ ಸ್ನೇಹಭರಿತ ಸಂಬಂಧ ಕಾಯ್ದುಕೊಂಡಿದ್ದರು. ಅವರು ತಮ್ಮ ಮಗ ಅಜಾರಿಯಾಸ್ ಮತ್ತು ಸಂಜಯ್ ಹಿಂದಿನ ಮದುವೆಯ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಅವರೊಂದಿಗಿನ ಆತ್ಮೀಯ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದರು. ವಿಶೇಷವಾಗಿ, 2023ರ ಮಾರ್ಚ್ 11 ರಂದು ಸಮೈರಾ ಅವರ 18ನೇ ಹುಟ್ಟುಹಬ್ಬದ ವೇಳೆ, ಸಂಜಯ್ ಮತ್ತು ಕರಿಷ್ಮಾ ಸಮ್ಮುಖದಲ್ಲಿ ಆ ಮಹತ್ವದ ಕ್ಷಣವನ್ನು ಒಟ್ಟಿಗೆ ಆಚರಿಸಿದರು. ಅಂದು ಸಂಜಯ್ ಕೇವಲ ತಂದೆಯಾಗಿ ಅಲ್ಲ, ಪ್ರಿಯಾ ಮತ್ತು ತಮ್ಮ ಪುತ್ರ ಅಜಾರಿಯಾಸ್‌ನೊಂದಿಗೆ ಕುಟುಂಬ ಸಮೇತರಾಗಿ ಹಾಜರಾಗಿದ್ದ ದೃಶ್ಯ, ಎಲ್ಲರ ಮನಸನ್ನು ಗೆದ್ದಿತ್ತು.