ಮಕ್ಕಳು ದೊಡ್ಡವರಾದ ಮೇಲೆ ಪೋಷಕರು ಆಸ್ತಿ ಹಂಚುವುದು ಸಾಮಾನ್ಯ. ಆದರೆ ಇಲ್ಲಿ ತನ್ನ ಎರಡು ವರ್ಷದ ಮಗಳಿಗೆ 250 ಕೋಟಿ ಆಸ್ತಿ ಬರೆದಿದ್ದಾರೆ ಒಬ್ಬ ಸ್ಟಾರ್ ನಟ. ಯಾರು ಆ ನಟ? ಯಾಕೆ ಹೀಗೆ ಮಾಡಿದ್ರು?
ತಂದೆ-ತಾಯಿಯ ಆಸ್ತಿ ಮಕ್ಕಳಿಗೆ ಸಿಗುವುದು ಸಹಜ. ಮಕ್ಕಳು ಕೇಳುವ ಮುನ್ನವೇ ಆಸ್ತಿ ಬರೆದುಕೊಡುವ ಪೇರೆಂಟ್ಸ್ ಕೂಡ ಇದ್ದಾರೆ. ಆದರೆ ಇದೆಲ್ಲಾ ಅವರು ದೊಡ್ಡವರಾದ ಮೇಲೆ. ಆದರೆ ಈ ಸ್ಟಾರ್ ನಟ ತನ್ನ ಎರಡು ವರ್ಷದ ಮಗಳಿಗೆ 250 ಕೋಟಿ ಆಸ್ತಿ ಬರೆದಿದ್ದಾರೆ. ಅವರು ಯಾಕೆ ಹೀಗೆ ಮಾಡಿದ್ರು? ಅವರು ಬೇರೆ ಯಾರೂ ಅಲ್ಲ, ರಣಬೀರ್ ಕಪೂರ್.
25
ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮಗಳು ರಾಹಾ ಕಪೂರ್ ಬಗ್ಗೆ ತೆಗೆದುಕೊಂಡ ನಿರ್ಧಾರ ಈಗ ಸುದ್ದಿಯಲ್ಲಿದೆ. 2022ರ ನವೆಂಬರ್‌ನಲ್ಲಿ ಹುಟ್ಟಿದ ರಾಹಾ ಈಗ ಕೇವಲ ಎರಡು ವರ್ಷದವಳಿದ್ದು, 250 ಕೋಟಿ ಆಸ್ತಿಗೆ ಉತ್ತರಾಧಿಕಾರಿಯಾಗಿದ್ದಾಳೆ.
35
ಮುಂಬೈನ ದುಬಾರಿ ಪ್ರದೇಶ ಬಾಂದ್ರಾದಲ್ಲಿ ಅವರಿಗೆ ಒಂದು ಮನೆ ಇದೆ. ಆ ಮನೆಯ ಬೆಲೆ 250 ಕೋಟಿ. ಈ ಆಸ್ತಿ ಮೊದಲು ರಾಜ್ ಕಪೂರ್‌ರಿಂದ ರಿಷಿ ಕಪೂರ್‌ಗೆ, ನಂತರ ರಣಬೀರ್ ಕಪೂರ್‌ಗೆ ಬಂದಿದೆ. ಕಳೆದ ವರ್ಷ ಈ ಕಟ್ಟಡವನ್ನು ರಣಬೀರ್ ಪೂರ್ತಿಯಾಗಿ ನವೀಕರಿಸಿದ್ದಾರೆ. ಇದು ಆರು ಅಂತಸ್ತಿನ ಐಷಾರಾಮಿ ಕಟ್ಟಡವಾಗಿದೆ.
ರಣಬೀರ್-ಆಲಿಯಾ ಜೋಡಿ ಈ ಮನೆಯನ್ನು ತಮ್ಮ ಮಗಳು ರಾಹಾ ಕಪೂರ್ ಹೆಸರಿನಲ್ಲಿ ನೋಂದಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಇತ್ತೀಚೆಗೆ ಪೂರ್ಣಗೊಂಡಿವೆ.
55
ರಾಹಾ ಕಪೂರ್ ಹೆಸರಿನಲ್ಲಿ ಇಷ್ಟು ದೊಡ್ಡ ಆಸ್ತಿ ಬರೆದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಶೀಘ್ರದಲ್ಲೇ ಈ ಮನೆಗೆ ರಣಬೀರ್ ಕುಟುಂಬ ಶಿಫ್ಟ್ ಆಗಲಿದೆ ಎನ್ನಲಾಗಿದೆ.