2016ರಲ್ಲಿ ಹಿಂದಿ ಕಿರುತೆರೆಗೆ ಕಾಲಿಟ್ಟ ನಟಿ ಉರ್ಫಿ ಬಿಗ್‌ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡ ನಂತರ ಸೆನ್ಸೇಷನ್ ಕ್ರಿಯೇಟ್ ಮಾಡುವ ಹಾಟ್ ನಟಿಯಾಗಿಬಿಟ್ಟರು.
ದಿನಕ್ಕೊಂದು ವಿಭಿನ್ನ ಡ್ರೆಸ್ ಧರಿಸಿ, ಕ್ಯಾಮೆರಾ ಎದುರು ಕಾಣಿಸಿಕೊಳ್ಳುವ ಉರ್ಫಿ ಏನ್ ಕೆಲಸ ಮಾಡ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ಅದರೆ ಈ ರೀತಿ ಅಲಂಕರಿಸಿಕೊಂಡು ಎಲ್ಲಿ ಹೋಗ್ತಾರೋ ಎಂಬುವುದೂ ಒಂದು ನಿಗೂಢ ರಹಸ್ಯ.
ಇಂದು ನೀಲಿ ಬಣ್ಣದ ಮೈ ಕಾಣುವಂಥ ಉಡುಪು ಧರಿಸಿರುವ ಉರ್ಫಿ ಮುಂಬೈನ ಬಸ್ಟಿಯಾನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಉದ್ಯಮಕ್ಕೆ ಸಂಬಂಧಿಸಿದ ಸಂಸ್ಥೆಯಾಗಿದ್ದು, ಅಲ್ಲಿ ಉರ್ಫಿಗೇನು ಕೆಲಸ ಎಂದು ಕೂಡ ಮಂದಿ ಕೇಳಿದ್ದಾರೆ.
ಉರ್ಫಿ ಧರಿಸುವ ಬಟ್ಟೆಗಳನ್ನು ವಿನ್ಯಾಸ ಮಾಡಲಾಗುತ್ತದೆ. ಪ್ಯಾಪರಾಜಿಗಳ ಎದುರು ಬರುವ ತನ ಆಕೆಗೆ ಅಸಿಸ್ಟೆಂಟ್ಸ್ ಇರುತ್ತಾರೆ. ಉರ್ಫಿ ಬಟ್ಟೆ ರೆಡಿ ಮಾಡುವ ವ್ಯಕ್ತಿ ಯಾರೆಂದು ಕೂಡ ನೆಟ್ಟಿಗರು ಹುಡುಕಿದ್ದಾರೆ.
ಇಂದು ಪ್ಯಾಪರಾಜಿಗಳ ಎದುರು ಉರ್ಫಿ ಫೋಸ್ ಕೊಡುವಾಗ ಹಿಂದಿನಿಂದ ಅಸಿಸ್ಟೆಂಟ್ ಬಂದು ಬಟ್ಟೆ ಸರಿ ಮಾಡುತ್ತಾರೆ, ಯಾರೋ ಅಪರಿಚಿತರು ಮುಟ್ಟಿದ್ದರು, ಎಂದು ಉರ್ಫಿ ಗಾಬರಿಗೊಳ್ಳುತ್ತಾರೆ.
ಪದೇ ಪದೇ ಮೈ ಕಾಣುವ ಬಟ್ಟೆ, ಹರಿದ ಬಟ್ಟೆ ಧರಿಸುತ್ತಿರುವ ಕಾರಣ ಉರ್ಫಿಗೆ ಅಭಿಮಾನಿಗಳೇ ಬಟ್ಟೆ ಕೊಡಿಸಲು ಮುಂದಾಗಿದ್ದಾರೆ. ಮೈ ತುಂಬಾ ಬಟ್ಟೆ ಹಾಕಿದರೆ ಹೇಗೆ ಕಾಣಿಸುತ್ತಾರೆ ಎಂದು ಒಮ್ಮೆ ನೋಡಬೇಕು ಅಂದಿದ್ದಾರೆ.