ಪ್ರೀತಿ ಜಿಂಟಾ:
ಪ್ರೀತಿ ಜಿಂಟಾ ಹಿಂದೆ ನೆಸ್ ವಾಡಿಯಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಇಬ್ಬರೂ ಬೇರ್ಪಟ್ಟರು. ಇದಾದ ನಂತರ ಪ್ರೀತಿ ಅಮೆರಿಕದ ಉದ್ಯಮಿ ಜೀನ್ ಗುಡೆನಾಫ್ ಅವರನ್ನು 2016 ರಲ್ಲಿ ರಹಸ್ಯವಾಗಿ ವಿವಾಹವಾದರು. ಮದುವೆಯಾದ 6 ತಿಂಗಳ ನಂತರ ಅವರು ಇದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಪ್ರೀತಿ-ಜೀನ್ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಪೋಷಕರಾಗಿದ್ದಾರೆ.