ರೆಹಾ ಕಪೂರ್:
ಅನಿಲ್ ಕಪೂರ್ ಅವರ ಕಿರಿಯ ಮಗಳು ರೇಹಾ ಅತ್ಯಂತ ಯಶಸ್ವಿ ಚಲನಚಿತ್ರ ನಿರ್ಮಾಪಕಿ ಮತ್ತು ದೇಶದ ಪ್ರಮುಖ ಫ್ಯಾಷನ್ ಸ್ಟೈಲಿಸ್ಟ್ ಕೂಡ ಹೌದು.
ಶ್ವೇತಾ ಬಚ್ಚನ್:
ಜಯಾ ಮತ್ತು ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರು ಚಲನಚಿತ್ರಗಳಿಂದ ದೂರ ಉಳಿದವರು. ಅದರ ಹೊರಗೆ ವೃತ್ತಿಜೀವನವನ್ನು (Career) ಮಾಡಲು ನಿರ್ಧರಿಸಿದರು. ಅಂಕಣಕಾರ್ತಿ, ಲೇಖಕಿ ಆಗಗಿರುವ ಶ್ವೇತಾ ಹೆಚ್ಚು ಮಾರಾಟವಾದ ಕಾದಂಬರಿ ಪ್ಯಾರಡೈಸ್ ಟವರ್ಸ್‌ಗೆ ಹೆಸರುವಾಸಿ. ಅವರು ತನ್ನದೇ ಆದ ಫ್ಯಾಷನ್ ಲೇಬಲ್ 'MXS' ಅನ್ನು ಸಹ ಪ್ರಾರಂಭಿಸಿದರು.
ರಿದಿಮಾ ಕಪೂರ್:
ರಿಷಿ ಕಪೂರ್ ಮತ್ತು ನೀತು ಕಪೂರ್ ಅವರ ಪುತ್ರಿ, ರಿದಿಮಾ ಕಪೂರ್ ಸಾಹ್ನಿ ಆಭರಣ ಬ್ರಾಂಡ್‌ಗೆ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು ಮತ್ತು ನಂತರ ಫ್ಯಾಷನ್ (Fashion) ಮತ್ತು ಆಭರಣ ವಿನ್ಯಾಸಕರಾಗಿ (Jewellery Designer) ಫ್ಯಾಷನ್ ಜಗತ್ತಿಗೆ ಕಾಲಿಟ್ಟರು.
ಕೃಷ್ಣಾ ಶ್ರಾಫ್:
ಸಹೋದರ ಟೈಗರ್ ಶ್ರಾಫ್ ಅವರಂತೆಯೇ, ಜಾಕಿ ಶ್ರಾಫ್ ಅವರ ಮಗಳು ಕೃಷ್ಣ ಶ್ರಾಫ್ ಆರೋಗ್ಯ (Health and Fitness Freak) ಮತ್ತು ಫಿಟ್ನೆಸ್ ಫ್ರೀಕ್, ಅವರು ಮ್ಯಾಟ್ರಿಕ್ಸ್ ಹೆಸರಿನ ಮಿಶ್ರ ಮಾರ್ಷಲ್ ಆರ್ಟ್ಸ್ ಫಿಟ್ನೆಸ್ ಸೆಂಟರ್ ಅನ್ನು ಸಹ ಸ್ಥಾಪಿಸಿದ್ದಾರೆ. ಇದಲ್ಲದೇ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ.
ಇರಾ ಖಾನ್:
ಸೂಪರ್ ಸ್ಟಾರ್ ಆಮೀರ್ ಖಾನ್ ಅವರ ಮಗಳು ಇರಾ ವೃತ್ತಿಯಲ್ಲಿ ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕಿ ಮತ್ತು ಸಾಮಾನ್ಯವಾಗಿ ಇವರು ಪ್ರಚಾರದಿಂದ ದೂರವಿರುತ್ತಾರೆ.
ಜಾನ್ವಿ ಮೆಹ್ತಾ:
ನಟಿ ಜೂಹಿ ಚಾವ್ಲಾ ಅವರ ಮಗಳು ಜಾನ್ವಿ ಕೊಲಂಬಿಯಾ ವಿಶ್ವವಿದ್ಯಾನಿಲಯದ ಪದವೀಧರರು ಮತ್ತು IPL ಸಮಯದಲ್ಲಿ KKR ತಂಡದ ಬಿಡ್ಡಿಂಗ್‌ನಲ್ಲಿ ಇವರು ಸಕ್ರಿಯವಾಗಿದ್ದರು.