ಈ ವಸ್ತುಗಳಿಲ್ಲದೆ ತಾನಿರಲಾರೆ ಅನ್ನುತ್ತಾಳೆ ಅಲಿಯಾ ಭಟ್.. ನಟಿಯ ಬ್ಯಾಗಲ್ಲಿ ಸದಾ ಇರೋದೇನು?

First Published | Jun 5, 2024, 3:53 PM IST

ಆಲಿಯಾ ಭಟ್ ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿ. ಶೂಟಿಂಗ್ ಹಾಗೂ ಪ್ರವಾಸಕ್ಕಾಗಿ ಸದಾ ತಿರುಗಾಟದಲ್ಲೇ ಇರುವ ನಟಿ ತನ್ನೊಂದಿಗೆ ಯಾವಾಗಲೂ ಜೊತೆಗಿರುವ ಅತಿ ಅಗತ್ಯವಾಗಿರುವ ವಸ್ತುಗಳು ಯಾವುವು ಎಂದು ತಿಳಿಸಿದ್ದಾಳೆ. 

ಆಲಿಯಾ ಭಟ್ ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿ. ಶೂಟಿಂಗ್ ಹಾಗೂ ಪ್ರವಾಸಕ್ಕಾಗಿ ಸದಾ ತಿರುಗಾಟದಲ್ಲೇ ಇರುವ ನಟಿ ತನ್ನೊಂದಿಗೆ ಯಾವಾಗಲೂ ಜೊತೆಗಿರುವ ಅತಿ ಅಗತ್ಯವಾಗಿರುವ ವಸ್ತುಗಳು ಯಾವುವು ಎಂದು ತಿಳಿಸಿದ್ದಾಳೆ. 

ಸ್ಪೀಕರ್ 
ಆಲಿಯಾ ಶೂಟಿಂಗ್‌ ಹೋಗಲಿ, ಮನೆಯಲ್ಲಿರಲಿ ಅಥವಾ ಟ್ರಿಪ್ ಹೋಗಲಿ- ಜೊತೆಯಲ್ಲಿ ಸ್ಪೀಕರ್ ಇದ್ದೇ ಇರುತ್ತದೆ. ಅದರಲ್ಲೂ ಪಂಜಾಬಿ ಸಂಗೀತ ಅಂದ್ರೆ ಆಕೆಗೆ ಪ್ರಾಣ. ಹೋದಲ್ಲೆಲ್ಲ ಜನರಿಗೆ ಮ್ಯೂಸಿಕ್ ಕೇಳುವಂತೆ ಮಾಡೋದು ನನ್ನ ದೊಡ್ಡತನ ಎಂದು ತಮಾಷೆ ಮಾಡುತ್ತಾಳೆ ನಟಿ.

Tap to resize

ಪರ್ಫ್ಯೂಮ್
ಕೆಲಸ ಶುರು ಮಾಡಿದ ಆರಂಭದಲ್ಲಿ ಆಲಿಯಾಗೆ ಮೇಕಪ್ ಮ್ಯಾನ್ ಹೇಳಿದ ಸಲಹೆ ಎಂದರೆ, ವ್ಯಾನ್‌ನಿಂದ ಕಾಲು ಕೆಳಗಿಡುವಾಗ ಮೊದಲು ಶೂ ಹಾಕಿರಬೇಕು ಹಾಗೂ ಎರಡನೆಯದಾಗಿ ಪರ್ಫ್ಯೂಮ್ ಹಾಕಿರಬೇಕು ಎಂದು. ಅದನ್ನು ನಟಿ ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದು ಎಲ್ಲೇ ಹೋದರೂ ಪರ್ಫ್ಯೂಮ್ ಜೊತೆಯಲ್ಲಿ ಇರುತ್ತದೆ. 

ನೀರಿನ ಬಾಟಲ್
ಎಲ್ಲೇ ಹೋದರೂ ನೀರಿನ ಬಾಟಲಿ ಇಲ್ಲದೆ ಇರೋಲ್ಲ. ಇದು ನನಗೆ ನೀರು ಕುಡಿಯಲು ನೆನಪಿಸುತ್ತದೆ ಮತ್ತು ತ್ವಚೆಯ ಕಾಂತಿ ಹೆಚ್ಚಿಸುತ್ತದೆ ಎನ್ನುತ್ತಾಳೆ ನಟಿ.

ಬಾಚಣಿಗೆ
ಬಾಚಣಿಗೆ ಇಲ್ಲದೆ ಇರುವುದಿಲ್ಲ ಎನ್ನುವ ಆಲಿಯಾ, ಕೂದಲು ಸರಿಯಾಗಿದ್ದಾಗಲೂ ಬಾಚಣಿಗೆ ತೆಗೆದು ಕೂದಲ ಮೇಲೆ ಆಡಿಸುತ್ತಿರುವ ಅಭ್ಯಾಸವಿದೆ ಎಂದಿದ್ದಾಳೆ.
 

ಲಿಪ್ ಬಾಮ್
ನನ್ನ ತುಟಿಗಳು ಯಾವಾಗಲೂ ಹೈಡ್ರೇಟ್ ಆಗಿರಬೇಕೆಂದು ನಾನು ಬಯಸುತ್ತೇನೆ. ದಿನಕ್ಕೆ ಹಲವು ಬಾರಿ ಲಿಪ್ ಬಾಮ್ ಹಚ್ಚಿಕೊಳ್ಳುತ್ತೇನೆ ಎನ್ನುತ್ತಾಳೆ ಅಲಿಯಾ.

ಪೋರ್ಟಬಲ್ ಚಾರ್ಜರ್
ಎಲ್ಲೇ ಹೋದರೂ ಅತಿ ಅಗತ್ಯವಾಗಿ ಬೇಕಾಗಿರುವುದು ಫೋನ್ ಚಾರ್ಜರ್. ಹಾಗಾಗಿ, ಪೋರ್ಟಬಲ್ ಚಾರ್ಜರ್ ತನ್ನೊಂದಿಗೆ ಸದಾ ಇರುತ್ತದೆ ಎಂದು ನಟಿ ತಿಳಿಸಿದ್ದಾಳೆ. 

ಸನ್‌ಗ್ಲಾಸಸ್
ಇದು ಪ್ರತಿಯೊಬ್ಬರಿಗೂ ಹೊರ ಹೋಗುವಾಗ ಅವಶ್ಯಕತೆಯಾಗಿದ್ದು, ತಾನು ಗುಚ್ಚಿ ಸನ್‌ಗ್ಲಾಸನ್ನು ಎಲ್ಲೇ ಹೋದರೂ ತೆಗೆದುಕೊಂಡು ಹೋಗುತ್ತೇನೆ. ಇದು ಲುಕ್ ಚೆನ್ನಾಗಿ ಕಾಣುವಂತೆ ಮಾಡುತ್ತದೆ ಎನ್ನುತ್ತಾಳೆ ಅಲಿಯಾ. 

ಸ್ಕ್ರಂಚೀಸ್
ಯಾವಾಗಲೂ ಕೂದಲು ಕಟ್ಟುವುದು, ಬಿಚ್ಚುವುದು- ಇದೊಂತರಾ ಚಟವಾಗಿದೆ. ಹಾಗಾಗಿ, ಹೋದಲ್ಲೆಲ್ಲ ಸ್ಕ್ರಂಚೀಸ್ ಇಟ್ಟುಕೊಳ್ಳುತ್ತೇನೆ ಎಂದು ನಟಿ ತಿಳಿಸಿದ್ದಾರೆ. 

ಮಿಂಟ್
ಕಾರಲ್ಲಿ, ಬ್ಯಾಗಲ್ಲಿ, ಡೈನಿಂಗ್ ಟೇಬಲ್ ಮೇಲೆ- ಹೀಗೆ ತಾನಿರುವಲ್ಲೆಲ್ಲ ಮಿಂಟ್ ಇರುತ್ತದೆ. ಆಗಾಗ ಎರಡು ಮಿಂಟನ್ನು ಬಾಯಿಗೆ ಹಾಕಿಕೊಳ್ಳುತ್ತಲೇ ಇರುತ್ತೇನೆ ಎಂದಿದ್ದಾಳೆ ಅಲಿಯಾ.

Latest Videos

click me!