ಡರ್ಟಿ ಪಿಕ್ಚರ್ ನಟಿ ವಿದ್ಯಾಬಾಲನ್ ಸಮಾಜಶಾಸ್ತ್ರದಲ್ಲಿ ಪದವಿ ಮಾಡಿದ್ದಾರೆ. ಇವರು ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.
ಅಯೋಧ್ಯೆಯಲ್ಲಿ ಜನಿಸಿದ ನಟಿ ಅನುಷ್ಕಾ ಶರ್ಮಾ ಬೆಂಗಳೂರಿನಲ್ಲಿ ಆರ್ಮಿ ಸ್ಕೂಲ್‌ಗೆ ಹೋಗಿ ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.
ಪರಿಣಿತಿ ಚೋಪ್ರಾ ಅವರು ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್‌ನಿಂದ ವ್ಯಾಪಾರ, ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ಟ್ರಿಪಲ್ ಗೌರವ ಪದವಿಯನ್ನು ಪಡೆದರು ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅರ್ಥಶಾಸ್ತ್ರದಲ್ಲಿ ದೇಶಕ್ಕೆ-ಟಾಪರ್ ಆಗಿದ್ದರು. ಸದ್ಯ ಅತ್ಯಂತ ಹೆಚ್ಚು ಕಲಿತಿರುವ ಬಾಲಿವುಡ್ ನಟಿ.
ಪ್ರೀತಿ ಜಿಂಟಾ ಶಿಮ್ಲಾದಲ್ಲಿ ಶಾಲಾ ಶಿಕ್ಷಣ ಮತ್ತು ಶಿಮ್ಲಾದ ಸೇಂಟ್ ಬೆಡೆಸ್ ಕಾಲೇಜಿ ನಲ್ಲಿ ಆಂಗ್ಲ ಭಾಷೆಯಲ್ಲಿ ಪದವಿ ಪಡೆದರು ಬಳಿಕ ಮನೋವಿಜ್ಞಾನ (ಸೈಕಾಲಜಿ) ಪದವಿ ಮತ್ತು ಕ್ರಿಮಿನಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.
ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಯಲ್ಲಿ ಅಮಿಷಾ ಪಟೇಲ್ ಓದಿದರು. ನಂತರ ಬಯೋಜೆನೆಟಿಕ್ ಎಂಜಿನಿಯರಿಂಗ್ ಮಾಡಿದ್ದು ಮತ್ತು ವಾಣಿಜ್ಯ ಕೂಡ ಓದಿದ್ದಾರೆ.
ನಟಿ ಸೋಹಾ ಅಲಿ ಖಾನ್ ದೆಹಲಿಯ ಬ್ರಿಟಿಷ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ನಂತರ ಆಕ್ಸ್‌ಫರ್ಡ್‌ನಲ್ಲಿ ಆಧುನಿಕ ಇತಿಹಾಸವನ್ನು ಅಧ್ಯಯನ ಮಾಡಿದ್ದಾರೆ. ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.
ನಟಿ ತಾಪ್ಸಿ ಪನ್ನು ಅವರು ಗುರು ತೇಜ್ ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪದವಿ ಪಡೆದಿದ್ದಾರೆ.
ನಟಿ ದಿಶಾ ಪಟಾಣಿ ವಾಯುಪಡೆಯ ಪೈಲಟ್ ಆಗಬೇಕೆಂದು ಆಕಾಂಕ್ಷೆ ಹೊಂದಿದ್ದರು ಮತ್ತು ಲಕ್ನೋದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.
ನಟಿ ರೀಚಾ ಚಡ್ಡಾ ನವದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ನಂತರ ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಸಾಮಾಜಿಕ ಸಂವಹನ ಮಾಧ್ಯಮದಲ್ಲಿ ಡಿಪ್ಲೊಮಾ ಮಾಡಿದರು.
ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಕುಟುಂಬದಿಂದ ಬಂದ ಸಾರಾ ಅಲಿ ಖಾನ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ 2016 ರಲ್ಲಿ ಇತಿಹಾಸ ಮತ್ತು ರಾಜಕೀಯ ವಿಜ್ಞಾನದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.