ಅಂಬಾನಿ ಗಣೇಶ ಪಾರ್ಟಿ, ಬಣ್ಣ ಬಣ್ಣದ ಉಡುಗೆಯಲ್ಲಿ ಮಿಂಚಿದ ಬಾಲಿವುಡ್ ತಾರೆಯರು!

Published : Sep 20, 2023, 10:51 AM ISTUpdated : Sep 20, 2023, 10:59 AM IST

ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬದ ಸೆಲೆಬ್ರೇಷನ್ ಸದಾ ಜೋರಾಗಿರುತ್ತದೆ. ಅದರಲ್ಲಿಯೂ ಬಾಲಿವುಡ್ ತಾರೆಯರು ಜೋರಾಗಿಯೇ ಹಬ್ಬ ಆಚರಿಸುತ್ತಾರೆ. ಸಲ್ಮಾನ್ ಖಾನ್ ಸಹ ತಮ್ಮ ಮನೆಯಲ್ಲಿಯೇ ಗಣಪತಿಯನ್ನೂ ಪೂಜಿಸುತ್ತಾರೆ. ಅಲ್ಲದೇ ರಿಲಯನ್ಸ್‌ನ ಮುಖೇಶ್ ಅಂಬಾನಿ ಬಾಲಿವುಡ್ ತಾರೆಯರಿಗೆ ವಿಶೇಷ ಹಬ್ಬದ ಊಟ ಹಾಕಿಸಿ, ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ತಾರೆಯರು ಧರಿಸುವ ಬಟ್ಟೆ ಟಾಕ್ ಆಫ್ ದ ಟೌನ್ ಆಗುತ್ತೆ. ಈ ಪಾರ್ಟಿಗೆ ಯಾವ ತಾರೆಯರು ಹೇಗೆ ಬಂದಿದ್ದರು? 

PREV
18
ಅಂಬಾನಿ ಗಣೇಶ ಪಾರ್ಟಿ, ಬಣ್ಣ ಬಣ್ಣದ ಉಡುಗೆಯಲ್ಲಿ ಮಿಂಚಿದ ಬಾಲಿವುಡ್ ತಾರೆಯರು!

ಮುಂಬೈನಲ್ಲಿ ಗಣೇಶ ಹಬ್ಬದ ಸಂಭ್ರಮ ಪ್ರತಿ ವರ್ಷವೂ ಜೋರಾಗುತ್ತಿರುತ್ತದೆ. ಈ ವರ್ಷವೂ ಮುಖೇಶ್ ಅಂಬಾನಿ ಪಾರ್ಟಿಯನ್ನು ಏರ್ಪಡಿಸಿದ್ದು, ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದರು. ಜಾಕಿ ಶ್ರಾಫ್ ತಮ್ಮ ಸಾಂಪ್ರಾದಾಯಿಕಿ ಉಡುಗೆಯಲ್ಲಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದು ಹೀಗೆ. 

28

ಅಯ್ಯೋ ಇದಾರಪ್ಪೆ ಅಂತ ಯೋಚಿಸ್ತಾ ಇದೀರಾ? ನಮ್ಮ ಪ್ರೇಮಲೋಕದ ನಿಂಬೆ ಹಣ್ಣಿನ ಹುಡುಗಿ ಜೂಹಿ ಜಾವ್ಲಾ ಪತಿಯೊಟ್ಟಿಗೆ ಪಾರ್ಟಿಗೆ ಬಂದಿದ್ದು ಹೀಗೆ. 

38

ಕರಣ್ ಜೋಹರ್‌ಗೂ ಅಂಬಾನಿ ಕುಟುಂಬಕ್ಕೂ ವಿಶೇಷ ನಂಟು. ತಮ್ಮ ವಿಶೇಷ ಉಡುಗೆಯಲ್ಲಿ ಫ್ಯಾಷನ್ ಪ್ರದರ್ಶನ ತೋರಿದ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಡ್ರೆಸ್ ಹೀಗಿತ್ತು. 

48

ಇದ್ಯಾರಪ್ಪಾ ಅಂತ ನೀವೇ ಹೇಳಿ ನೋಡೋಣ? ಸೆಮಿ ಟ್ರೆಡಿಷನಲ್ ಡ್ರೆಸ್‌ನಲ್ಲಿ ಮಾಡರ್ನ್ ಆಗಿ ಕಾಣಿಸುತ್ತಿರುವ ಈ ನಟಿ ಯಾರು, ಡ್ರೆಸ್ ಹೇಗಿದೆ ಅಂತ ನೀವೇ ಕಮೆಂಟ್ ಮಾಡಿ. 

58

ಇತ್ತೀಚೆಗೆ ಸಪ್ತಪದಿ ತುಳಿದು, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕಿಯಾರಾ ಹಾಗೂ ಮಲ್ಹೋತ್ರಾ ಜೋಡಿ ಪಾರ್ಟಿಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು ಸುಳ್ಳಲ್ಲ. 

68

ತಮ್ಮ ಮಗಳನ್ನು ಇನ್ನೂ ಪುಟ್ಟು ಮಗುವಿನಂತೆಯೇ ಟ್ರೀಟ್ ಮಾಡು ಐಶ್ವರ್ಯಾ ರೈ, ಮಗಳು ಆರಾಧ್ಯಳೊಂದಿಗೆ ಸಲ್ವಾರ್ ಕಮೀಜ್‌ನಲ್ಲಿ ಆಗಮಿಸಿದ್ದರು. ಅಮಿತಾಭ್ ಬಚ್ಚನ್, ಅಭಿಷೇಕ್ ಹಾಗೂ ಜಯಾ ಬಚ್ಚನ್ನು ಪಾರ್ಟಿಯನ್ನು ಮಿಸ್ ಮಾಡಿದರು. 

78

ಬಾಲಿವುಡ್‌ನ ಎವರ್‌ಗ್ರೀನ್ ನಟಿ, ಉತ್ತರ ಪ್ರದೇಶದ ಮಥುರಾ ಎಂಪಿ ಹೇಮಾ ಮಾಲಿನಿ ರೇಶ್ಮೆ ಸೀರಿಯಲ್ಲಿ ಪಾರ್ಟಿಯ ಲುಕ್ ಹೆಚ್ಚಿಸಿದ್ದು ಹೀಗೆ. 

88

ಕೇವಲ ಬಾಲಿವುಡ್ ತಾರೆಯರು ಮಾತ್ರವಲ್ಲ. ರಾಜಕಾರಣಿಗಳು ಜೊತೆಯೂ ಅಂಬಾನಿ ಕುಟುಂಬಕ್ಕೆ ವಿಶೇಷ ಬಾಂಡಿಂಗ್ ಇದೆ. ಠಾಕ್ರೆ ತಮ್ಮ ಪತ್ನಿಯೊಂದಿಗೆ ಬಂದಿದ್ದು ಹೀಗೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories