17ನೇ ವಯಸ್ಸಿಗೆ ಸೂಪರ್‌ಸ್ಟಾರ್‌ ನಟಿ, ಕುಟುಂಬಕ್ಕೆ ವಿರುದ್ಧವಾಗಿ ಪ್ರೇಮಿಯ ಕೈಹಿಡಿದು 21 ವರ್ಷಕ್ಕೆ ನಟನೆಗೆ ಗುಡ್‌ಬೈ

First Published Sep 19, 2023, 2:23 PM IST

ಇಂದಿಗೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವ ಬಾಲಿವುಡ್‌ನ ಪ್ರಸಿದ್ಧ ಸೂಪರ್‌ ಸ್ಟಾರ್ ನಟಿ,  80 ರ ದಶಕದ ಅತ್ಯಂತ ಜನಪ್ರಿಯ ನಾಯಕಿಯರಲ್ಲಿ  ಒಬ್ಬರಾಗಿರುವ ಈಕೆ ತನ್ನ 7 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ  ಮಾಡಿ,  17 ನೇ ವಯಸ್ಸಿನಲ್ಲಿ ಸೂಪರ್‌ ಹಿಟ್ ನಟಿಯಾದರು. ಆದರೆ  ತಮ್ಮ 21 ನೇ ವಯಸ್ಸಿನಲ್ಲಿ ಕುಟುಂಬದ ಇಚ್ಚೆಗೆ ವಿರುದ್ಧವಾಗಿ ವಿವಾಹವಾದರು. ಈಕೆ ಪ್ರಸಿದ್ಧ ಹಾಡುಗಾರ್ತಿ ಕುಟುಂಬದಿಂದ ಬಂದ ನಟಿ ಜೊತೆಗೆ ಸ್ವತಃ ಹಾಡುಗಾರ್ತಿಯಾಗಿದ್ದಾರೆ.

ನವೆಂಬರ್ 1, 1965 ರಂದು ಜನಿಸಿದ ಪದ್ಮಿನಿ ಕೊಲ್ಹಾಪುರೆ 80 ರ ದಶಕದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿರುವ ಇವರು ನೋಡಲು ಸೌಂದರ್ಯವತಿ. ತಮ್ಮ ನಾಲ್ಕು ದಶಕಗಳ ಕಾಲದ ವೃತ್ತಿಜೀವನದಲ್ಲಿ ಪದ್ಮಿನಿ ಕೊಲ್ಹಾಪುರೆ ಅವರು 75 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. 

ಪದ್ಮಿನಿ ಕೊಲ್ಹಾಪುರೆ 80 ರ ದಶಕದ ಅತ್ಯಂತ ಜನಪ್ರಿಯ ನಾಯಕಿಯರಲ್ಲಿ ಒಬ್ಬರಾಗಿದ್ದರು . ಇನ್ಸಾಫ್ ಕಾ ತರಾಜು,  ಆಹಿಸ್ತಾ-ಆಹಿಸ್ತಾ,  ಪ್ಯಾರ್ ಜುಕ್ತಾ ನಹಿ,  ಪ್ರೇಮ್ ರೋಗ್  ಮತ್ತು  ತುಮ್ಸೆ ಮಿಲಾರ್ ನ ಜಾನೆ , ಕ್ಯುನ್  ಮತ್ತು  ಯೇ ಗಲ್ಲಿಯಾನ್ ಯೇ ಚೌಬಾರಾ ನಂತಹ ಹಲವು ಹಿಟ್‌ ಹಾಡುಗಳಿಗೆ ಇವರ ಚಿತ್ರಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

Latest Videos


ಪದ್ಮಿನಿ ಕೊಲ್ಹಾಪುರೆ ಅವರು ಕೇವಲ 12 ವರ್ಷದವರಾಗಿದ್ದಾಗ ಸೂಪರ್‌ಹಿಟ್ ಚಿತ್ರ 'ಸತ್ಯಂ ಶಿವಂ ಸುಂದರಂ' ನಲ್ಲಿ ಕೆಲಸ ಮಾಡಿದರು.  ಪದ್ಮಿನಿ ಕೊಲ್ಹಾಪುರೆ ಮುಂಬೈನ ಮರಾಠಿ ಕುಟುಂಬದಲ್ಲಿ ಜನಿಸಿದರು. 7 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 17 ನೇ ವಯಸ್ಸಿನಲ್ಲಿ ರಿಷಿ ಕಪೂರ್ ಜೊತೆಗಿನ ಅವರ 'ಪ್ರೇಮ್ ರೋಗ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿದು ಸೂಪರ್‌ಹಿಟ್  ಚಿತ್ರ ಎನಿಸಿಕೊಂಡಿತು. ಈ ಚಿತ್ರ ನಟಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು.
 

ಈ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಪದ್ಮಿನಿ ಕೊಲ್ಹಾಪುರೆ  ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದರು. ಪದ್ಮಿನಿ ಕೊಲ್ಹಾಪುರೆಯವರ ತಂದೆ ಪಂಢರಿನಾಥ್ ಅವರು ಪ್ರಸಿದ್ಧ ಶಾಸ್ತ್ರೀಯ ಗಾಯಕರಾಗಿದ್ದರು ಮತ್ತು ವೀಣಾವಾದಕಿ ಮತ್ತು ಪ್ರಸಿದ್ಧ ಗಾಯಕಿಯರಾದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಇವರ ಚಿಕ್ಕಮ್ಮ. 
 

ಪದ್ಮಿನಿ ಕೊಲ್ಹಾಪುರೆ ಅವರು ಬಾಲ್ಯದಿಂದಲೂ ಸಂಗೀತದ ಬಗ್ಗೆ ತುಂಬಾ ಒಲವು ಹೊಂದಿದ್ದರು ಮತ್ತು ತಮ್ಮ ಚಿಕ್ಕಮ್ಮ ಲತಾ ಮಂಗೇಶ್ಕರ್ ಮತ್ತು ಆಶಾ ಬೋಸ್ಲೆ ಅವರಂತೆ ಗಾಯಕಿಯಾಗಲು ಬಯಸಿದ್ದರು. 1973 ರಲ್ಲಿ, ಅವರು 'ಯಾದೋನ್ ಕಿ ಬಾರಾತ್' ಚಿತ್ರದಲ್ಲಿ ಅವರ ಸಹೋದರಿ ಶಿವಾಂಗಿಯೊಂದಿಗೆ ಕೋರಸ್‌ನಲ್ಲಿ ಹಾಡಿದರು.   'ಕಿತಾಬ್', 'ದುಷ್ಮನ್ ದೋಸ್ತ್', 'ವಿಧಾತಾ', 'ಸಾತ್ ಸಹೇಲಿಯಾನ್' ಮತ್ತು 'ಹಮ್ ಇಂತೇಜಾರ್ ಕರೆಂಗೆ' ಮುಂತಾದ ಚಿತ್ರಗಳಲ್ಲಿ ಪದ್ಮಿನಿ ಹಾಡಿದ್ದಾರೆ. 

ಪದ್ಮಿನಿ ಕೊಲ್ಹಾಪುರೆ ಅವರು ತಮ್ಮ 21 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದ ಅಪೇಕ್ಷೆಗೆ ವಿರುದ್ಧವಾಗಿ ಚಲನಚಿತ್ರ ನಿರ್ಮಾಪಕ ಪ್ರದೀಪ್ ಶರ್ಮಾ ಅವರನ್ನು ವಿವಾಹವಾದರು. ಆ ಸಮಯದಲ್ಲಿ ಪದ್ಮಿನಿ ತನ್ನ ವೃತ್ತಿಜೀವನದ ಅತ್ಯಂತ ಉತ್ತುಂಗದಲ್ಲಿದ್ದರು. ಇವರ ಮದುವೆ ನಿರ್ಧಾರವು ಚಿತ್ರರಂಗದಲ್ಲಿ ದೊಡ್ಡ ಶಾಕ್‌, ಮತ್ತು ದೊಡ್ಡ ಸುದ್ದಿಯಾಯ್ತು.

ಐಸಾ ಪ್ಯಾರ್ ಕಹಾನ್ (1986) ಚಿತ್ರಕ್ಕಾಗಿ ಕೆಲಸ ಮಾಡುವಾಗ ಪದ್ಮಿನಿ ಕೊಲ್ಹಾಪುರೆ ಪ್ರದೀಪ್ ಶರ್ಮಾ ಅಲಿಯಾಸ್ ಟುಟು ಶರ್ಮಾ ಅವರನ್ನು ಭೇಟಿಯಾದರು. ಪದ್ಮಿನಿ ಕೊಲ್ಹಾಪುರೆ ಮತ್ತು ಪ್ರದೀಪ್ ಶರ್ಮಾ ಕೆಲವು ತಿಂಗಳುಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 1986 ರಲ್ಲಿ ವಿವಾಹವಾದರು. ಅವರಿಗೆ ಪ್ರಿಯಾಂಕ್ ಶರ್ಮಾ ಎಂಬ ಮಗನಿದ್ದಾನೆ. 

click me!