ಬಾಲಿವುಡ್ ಗಾಯಕ ಜುಬೀನ್ ಗರ್ಗ್ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಸಾವು, ಕಾನ್ಸರ್ಟ್‌ಗಾಗಿ ಸಿಂಗಾಪುರ ತೆರಳಿದ್ದ ಜುಬೀನ್ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಈ ವೇಳೆ ಸಂಭವಿಸಿದ ಅಪಘಾತದಲ್ಲಿ ಜುಬೀನ್ ಮೃತಪಟ್ಟಿದ್ದಾರೆ.
ಯಾ ಆಲಿ, ರಹಮ್ ಆಲಿ ಹಾಡು ಯಾರಿಗೆ ಗೊತ್ತಿಲ್ಲ. ಬಾಲಿವುಡ್ ಗ್ಯಾಂಗ್‌ಸ್ಟರ್ ಸಿನಿಮಾ ಈ ಹಾಡು ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಹಾಡನ್ನು ಹಾಡಿದ್ದು ಬಾಲಿವುಡ್ ಗಾಯಕ, ಅಸ್ಸಾಂ ಮೂಲದ ಜುಬೀನ್ ಗರ್ಗ್. ಅಸ್ಸಾಂ ಹಾಗೂ ಬಾಲಿವುಡ್‌ನಲ್ಲಿ ಜನಪ್ರಿಯ ಗಾಯಕನಾಗಿರುವ ಜುಬೀನ್ ಗರ್ಗ್ ಸಿಂಗಾಪುರದಲ್ಲಿ ನಡೆದ ಸ್ಕೂಬಾ ಡೈವಿಂಗ್ ಅಪಾತದಲ್ಲಿ ಸಾವು ಕಂಡಿದ್ದಾರೆ.
27
ಮ್ಯೂಸಿಕ್ ಕಾರ್ಯಕ್ರಮಕ್ಕೆ ತೆರಳಿದ್ದ ಜುಬೀನ್
ಮ್ಯೂಸಿಕ್ ಕಾರ್ಯಕ್ರಮಕ್ಕೆ ತೆರಳಿದ್ದ ಜುಬೀನ್
ಸಿಂಗಾಪುರದಲ್ಲಿ ಆಯೋಜಿಸಿದ್ದ ಮ್ಯೂಸಿಕ್ ಕಾನ್ಸರ್ಟ್‌ಗಾಗಿ ತೆರಳಿದ್ದ ಜುಬೀನ್ ಗರ್ಗ್, ಕಾನ್ಸರ್ಟ್‌ಗೂ ಮೊದಲಿನ ಬಿಡುವಿನ ವೇಳೆಯಲ್ಲಿ ಸಿಂಗಾಪೂರದ ಪ್ರಸಿದ್ದ ಪ್ರವಾಸಿ ಆಕರ್ಷಕಣ ಕೇಂದ್ರವಾಗಿರುವ ಸ್ಕೂಬಾ ಡೈವಿಂಗ್‌ಗೆ ತೆರಳಿದ್ದಾರೆ. ಸಮುದ್ರದ ಆಳದಲ್ಲಿ ವಿಹರಿಸಿ ಜಲಚರಗಳು, ಸೌಂದರ್ಯ ವೀಕ್ಷಿಸುವ ಅಪೂರ್ವ ಸ್ಕೂಬಾ ಡೈವಿಂಗ್ ಗಾಯಕ ಜುಬೀನ್‌ಗೆ ಮುಳುವಾಗಿದೆ.
37
ಅಪಘಾತದಲ್ಲಿ ಸಿಂಗರ್ ಸಾವು
ಅಪಘಾತದಲ್ಲಿ ಸಿಂಗರ್ ಸಾವು
ಜುಬೀನ್ ಗರ್ಗ್ ಸ್ಕೂಬಾ ಡೈವಿಂಗ್ ವೇಳೆ ಅವಘಡ ಸಂಭವಿಸಿದೆ. ತಕ್ಷಣವೇ ಸಿಂಗಾಪೂರ ಪೊಲೀಸರು ರಕ್ಷಣಾ ಕಾರ್ಯಾಚರಣೆ ಮೂಲಕ ಜುಬೀನ್ ಗರ್ಗ್ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಆಸ್ಪತ್ರೆಯ ಐಸಿಯು ಘಟಕದಲ್ಲಿ ಜುಬೀನ್‌ಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗಿಲ್ಲ. ಜುಬೀನ್ ಮೃತಪಟ್ಟಿರುವುದಾಗಿ ಸಿಂಗಾಪುರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಿಂಗಾಪುರದ ನಾರ್ತ್ ಈಸ್ಟ್ ಫೆಸ್ಟಿವಲ್‌ನಲ್ಲಿ ಮ್ಯೂಸಿಕ್ ಕಾನ್ಸರ್ಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜುಬೀನ್ ಗರ್ಗ್ ಮ್ಯೂಸಿಕ್ ಪರ್ಫಾಮೆನ್ಸ್ ನೀಡಲು ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮಕ್ಕೂ ಮೊದಲಿನ ಬಿಡುವಿನ ಸಮಯದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಗರ್ಗ್ ಮುಂದಾಗಿದ್ದಾರೆ. ಆದರೆ ಅವಘಡ ಸಂಬವಿಸಿದೆ.
57
ಅಪಘಾತದ ಮಾಹಿತಿ ಬಗಿರಂಗವಾಗಿಲ್ಲ
ಅಪಘಾತದ ಮಾಹಿತಿ ಬಗಿರಂಗವಾಗಿಲ್ಲ
ಸ್ಕೂಬಾ ಡೈವಿಂಗ್ ವೇಳೆ ಅಪಘಾತದ ಹೇಗೆ ಸಂಭವಿಸಿತು ಅನ್ನೋ ಕುರಿತು ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ. ಕಾರ್ಯಕ್ರಮ ದಿನವೇ ಅವಘಡ ಸಂಭವಿಸಿ ಜುಬೀನ್ ಮೃತಪಟ್ಟಿದ್ದಾರೆ. ಇದೀಗ ಜುಬೀನ್ ಮ್ಯೂಸಿಕ್ ಕಾನ್ಸರ್ಟ್ ರದ್ದು ಮಾಡಲಾಗಿದೆ. ಇತ್ತ ಜುಬೀನ್ ಕುಟುಂಬಸ್ಥರು ಭಾರತೀಯರ ರಾಯಭಾರ ಕಚೇರಿ ಸಂಪರ್ಕಿಸಿದ್ದಾರೆ.
67
ಅಸ್ಸಾಂನ ಸೆಲೆಬ್ರೆಟಿ ಜುಬೀನ್
ಅಸ್ಸಾಂನ ಸೆಲೆಬ್ರೆಟಿ ಜುಬೀನ್
ಬಾಲಿವುಡ್‌ನಲ್ಲಿ ಜನಪ್ರಿಯನಾಗಿರುವ ಜುಬೀನ ಗರ್ಗ್, ಅಸ್ಸಾಂನ ಸೆಲೆಬ್ರೆಟಿ. ಅಸ್ಸಾಂ ಹಾಡುಗಳ ಮೂಲಕ ಜುಬೀನ್ ಅಪಾರ ಅಭಿಮಾನಿಗಳ ಸಂಪಾದಿಸಿದ್ದಾರೆ. ಆಲ್ಬಂ ಹಾಡು, ಹಿಂದಿ ಹಾಡುಗಳ ಮೂಲಕ ಜುಬೀನ್ ಅಸ್ಸಾಂನಲ್ಲಿ ಬಿಡುವಿಲ್ಲದೇ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.
77
ಅಸ್ಸಾಂ ಮುಖ್ಯಮಂತ್ರಿ ಸಂತಾಪ
ಅಸ್ಸಾಂ ಮುಖ್ಯಮಂತ್ರಿ ಸಂತಾಪ
ಜಬೀನ್ ಸಾವಿಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘಟನೆ ತೀವ್ರ ನೋವು ತಂದಿರುವುದಾಗಿ ಹೇಳಿದ್ದಾರೆ. ಅಸ್ಸಾಂಗೆ ಇಂದು ಅತ್ಯಂತ ದುಖದ ದಿನವಾಗಿದೆ. ಅಸ್ಸಾಂ ಪುತ್ರ, ತಮ್ಮ ಸಮುಧುರ ಕಂಠದಿಂದ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದ ಜುಬೀನ್ ನಮ್ಮನ್ನು ಅಗಲಿದ್ದಾರೆ ಅನ್ನೋ ನೋವು ತೀವ್ರವಾಗಿ ಕಾಡುತ್ತಿದೆ ಎಂದು ಹಿಮಂತ ಹೇಳಿದ್ದಾರೆ.