ಸ್ಪಿರಿಟ್‌ ಬೆನ್ನಲ್ಲೇ 'ಕಲ್ಕಿ' ಸೀಕ್ವೆಲ್‌ನಿಂದಲೂ ದೀಪಿಕಾ ಪಡುಕೋಣೆ ಔಟ್: ಇಲ್ಲಿದೆ ಕಾರಣ!

Published : Sep 19, 2025, 01:34 PM IST

ನಾಗ್‌ ಅಶ್ವಿನ್‌ ನಿರ್ದೇಶನದ ‘ಕಲ್ಕಿ 2898’ ಸಿನಿಮಾದ ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಎರಡನೇ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು.

PREV
15
ಪ್ರಭಾಸ್‌ ನಟನೆಯ ‘ಕಲ್ಕಿ 2898’

ಈ ಹಿಂದೆ ಪ್ರಭಾಸ್‌ ನಟನೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್‌’ ಸಿನಿಮಾದಿಂದ ಹೊರ ಬಿದ್ದಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇದೀಗ ಪ್ರಭಾಸ್‌ ನಟನೆಯ ‘ಕಲ್ಕಿ 2898’ ಸಿನಿಮಾದಿಂದಲೂ ಔಟ್‌ ಆಗಿದ್ದಾರೆ.

25
ವೈಜಯಂತಿ ಮೂವೀಸ್‌ ಅಧಿಕೃತವಾಗಿ ಪ್ರಕಟ

ನಾಗ್‌ ಅಶ್ವಿನ್‌ ನಿರ್ದೇಶನದ ‘ಕಲ್ಕಿ 2898’ ಸಿನಿಮಾದ ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಎರಡನೇ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಆದರೆ ಈ ಪಾತ್ರದಿಂದ ಅವರನ್ನು ತೆಗೆದುಹಾಕಲಾಗಿದೆ ಎಂದು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್‌ ಅಧಿಕೃತವಾಗಿ ಪ್ರಕಟಿಸಿದೆ.

35
ಸೀಕ್ವೆಲ್‌ನಲ್ಲಿ ದೀಪಿಕಾ ಪಡುಕೋಣೆ ಮುಂದುವರಿಯುತ್ತಿಲ್ಲ

ದೀಪಿಕಾ ಪಡುಕೋಣೆ ಕಲ್ಕಿ2898 ಎಡಿ ಸಿನಿಮಾದ ಸೀಕ್ವೆಲ್‌ನಲ್ಲಿ ಮುಂದುವರಿಯುತ್ತಿಲ್ಲ. ಎಚ್ಚರಿಕೆಯಿಂದ ಎಲ್ಲಾ ವಿಷಯಗಳನ್ನು ಪರಿಗಣಿಸಿದ ನಂತರ, ನಾವು ಬೇರೆಯಾಗುವ ತೀರ್ಮಾನಕ್ಕೆ ಬಂದಿದ್ದೇವೆ. ‘ಕಲ್ಕಿ 2898 ಎಡಿ3’ ಸಿನಿಮಾ ಹೆಚ್ಚಿನ ಶ್ರಮ, ಶ್ರದ್ಧೆ ಬೇಡುತ್ತದೆ. ದೀಪಿಕಾ ಅವರ ಭವಿಷ್ಯದ ಸಿನಿಮಾಗಳಿಗೆ ಶುಭ ಕೋರುತ್ತೇವೆ’ ಎಂದು ಟ್ವೀಟ್‌ ಮಾಡಿದೆ.

45
ಕತೆಯನ್ನು ಬದಲಿಸಿದ್ದಾರೆಯೇ?

ಈಗ ದೀಪಿಕಾ ಪಡುಕೋಣೆ ಸಿನಿಮಾದಿಂದ ಹೊರ ಹೋದ ಬಳಿಕ ಸಿನಿಮಾದ ಸೀಕ್ವೆಲ್ ಹೇಗೆ ಸಾಧ್ಯವಾಗಲಿದೆ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ ಸಿನಿಮಾದ ಕತೆಯನ್ನು ನಿರ್ದೇಶಕ ನಾಗ್ ಅಶ್ವಿನ್ ಬದಲಿಸಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

55
ಡಿಸ್ಟೋಪಿಯನ್ ಭವಿಷ್ಯದಲ್ಲಿ ಹೆಣೆಯಲಾದ ಚಿತ್ರ

ಕ್ರಿಶ 2898ರಲ್ಲಿ ಡಿಸ್ಟೋಪಿಯನ್ ಭವಿಷ್ಯದಲ್ಲಿ ಹೆಣೆಯಲಾದ 'ಕಲ್ಕಿ' ಚಿತ್ರವು ಪ್ರಯೋಗಾಲಯದ ವಿಷಯವಾದ SUM-80ಯ ಕಲ್ಕಿ ಎಂದು ನಂಬಲಾದ ಹುಟ್ಟಲಿರುವ ಮಗುವನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿರುವ ಗುಂಪಿನ ಕಥೆಯನ್ನು ಅನುಸರಿಸಿತು. ಈ ಚಿತ್ರವು 2024ರ ಜೂನ್‌ನಲ್ಲಿ ಬಿಡುಗಡೆಯಾಯಿತು.

Read more Photos on
click me!

Recommended Stories