ಅಂಕಲ್‌ನಿಂದಲೇ ಲೈಂಗಿಕ ಕಿರುಕುಳ, ನೋವು ಶೇರ್ ಮಾಡ್ಕೊಂಡ ನಟಿ!

Published : Jun 07, 2022, 12:46 PM IST

17 ವರ್ಷವಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ಬಾಲಿವುಡ್ ನಟಿ ಕುಬ್ರಾ ಸೇಟ್. ಪುಸ್ತಕದಲ್ಲಿ ಬಹಿರಂಗವಾಯ್ತು ಕರಾಳ ಸತ್ಯಗಳು

PREV
110
ಅಂಕಲ್‌ನಿಂದಲೇ ಲೈಂಗಿಕ ಕಿರುಕುಳ, ನೋವು ಶೇರ್ ಮಾಡ್ಕೊಂಡ ನಟಿ!

ಬಾಲಿವುಡ್‌ ಚಿತ್ರರಂಗದಲ್ಲಿ ಸಖತ್ ಸಿಂಪಲ್ ಮತ್ತು ಬ್ಯೂಟಿಫುಲ್ ಆಗಿರುವ ನಟಿ ಕುಬ್ರಾ ಸೇಟ್ ಆತ್ಮಚರಿತ್ರೆ ಬರೆಯುತ್ತಿದ್ದಾರೆ. 'Open book: Not quite a memoir' ಎಂದು ಹೆಸರಿಟ್ಟಿದ್ದಾರೆ.

210

ಈ ಪುಸ್ತಕದಲ್ಲಿ ಕುಬ್ರಾ 17 ವರ್ಷವಿದ್ದಾಗ ಅಂಕಲ್‌ನಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ಬಗ್ಗೆ ಬರೆದುಕೊಂಡಿದ್ದಾರೆ. ಇಡೀ ಕುಟುಂಬ ಅವರನ್ನು ಏಂಜಲ್‌ ಎಂದು ನಂಬಿದ್ದರು ಆದರೆ ಅವರ ಅಸಲಿ ಮುಖ ಬೇರೆ ಇತ್ತು ಎಂದಿದ್ದಾರೆ.

310

ತಾಯಿ ಮತ್ತು ಸಹೋದರನ ಜೊತೆ ಕುಬ್ರಾ ಬೆಂಗಳೂರಿನ ಹೋಟೆಲ್‌ವೊಂದಕ್ಕೆ ಆಗಾಗ ಭೇಟಿ ನೀಡುತ್ತಿದ್ದರಂತೆ. ದಿನ ಕಳೆಯುತ್ತಿದ್ದಂತೆ ಹೋಟೆಲ್ ಮಾಲೀಕ ಇವರ ಕುಟುಂಬಕ್ಕೆ ಹತ್ತಿರವಾಗಿದ್ದಾರೆ.

410

ಕುಬ್ರಾ ಕುಟುಂಬದ ಅನೇಕ ಆರ್ಥಿಕ ಸಮಸ್ಯೆಗಳಿಗೆ ಆ ಹೋಟೆಲ್ ಮಾಲೀಕರು ಸಹಾಯ ಮಾಡುತ್ತಿದ್ದರಂತೆ. ಸಹಾಯ ಮಾಡಲು ಶುರು ಮಾಡುತ್ತಿದ್ದಂತೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದರು ಅಲ್ಲದೆ ಅಂಕಲ್ ಎಂದು ಕರೆಯಬೇಡ ಎನ್ನುತ್ತಿದ್ದರು.

510

 'ನಾವು ಪಡೆದುಕೊಂಡ ಹಣವನ್ನು ಹಿಂತಿರುಗಿಸಿದಾಗ ಅವರ ವರ್ತನೆ ಬದಲಾಗಿತ್ತು. ಕಾರಿನಲ್ಲಿ ಮುಂದೆ ಕುಳಿತುಕೊಂಡು ಹಿಂದಕ್ಕೆ ಕೈ ಹಾಕಿ ನನ್ನ ಕಾಲುಗಳನ್ನು ಮುಟ್ಟಲು ಶುರು ಮಾಡಿದ್ದರು'

610

'ಸಮಯ ಕಳೆಯುತ್ತಿದ್ದಂತೆ ನನ್ನ ತೊಡೆ ಸವರುವುದಕ್ಕೆ ಶುರು ಮಾಡಿದ್ದರು. ಪದೇ ಪದೇ ಮನೆಗೆ ಬರಲು ಶುರು ಮಾಡಿದ್ದರು. ಅಮ್ಮ ಆಡುಗೆ ಮಾಡಿ ಅವರ ಮಾತುಗಳಿಗೆ ನಗುತ್ತಿದ್ದರು. ತಾಯಿ ಮುಂದೆನೇ ನನಗೆ ಮುತ್ತು ಕೊಟ್ಟು 'ಪುಟ್ಟ ಹುಡುಗಿ ಕುಬ್ರಾ ನೀನೆಂದರೆ ನನಗೆ ತುಂಬಾ ಇಷ್ಟ' ಎನ್ನುತ್ತಿದ್ದರು.

710

'ಹೋಟೆಲ್‌ ರೂಮಿಗೆ ಕರೆದುಕೊಂಡು ಹೋಗಿ ನನಗೆ ಮುತ್ತು ಕೊಟ್ಟರು. ನಾನು ಶಾಕ್‌ನಲ್ಲಿದ್ದ ಕಾರಣ ಹೇಗೆ ವರ್ತಿಸಬೇಕು ಎಂದು ತಿಳಿಯಲಿಲ್ಲ. ಹೀಗೆಲ್ಲಾ ಆಗಬಾರದಿತ್ತು ಆದರೂ ಆಗುತ್ತಿತ್ತು.  ಸಹಾಯ ಮಾಡಿ ಎಂದು ಕೂಗಬೇಕಿತ್ತು ಆದರೂ ನನಗೆ ಆ ಶಕ್ತಿ ಇರಲಿಲ್ಲ'

810

'ನನಗೂ ಇದೇ ಬೇಕು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು. ಕೆಲವು ನಿಮಿಷಗಳ ನಂತರ ಅವರ ಪ್ಯಾಂಟ್‌ ಜಿಪ್‌ ಓಪನ್ ಮಾಡಿದ್ದರು. ಮುಂದೇನಾಗುತ್ತದೆ ಗೊತ್ತಾಗುತ್ತಿರಲಿಲ್ಲ ಅದರೆ ನನ್ನ ಕನ್ಯತ್ವವನ್ನು ಕಳೆದುಕೊಳ್ಳುವೆ ಎಂದು ಗೊತ್ತಾಗಿತ್ತು. ಹೇಳಿಕೊಳ್ಳಲು ಆಗಲಿಲ್ಲ ಆದರೆ ಜೀವನದ ಕರಾಳ ಸತ್ಯ'

910

 ಆ ವ್ಯಕ್ತಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ನಮ್ಮ ಮನೆಗೆ ಬರುವುದು ನಿಲ್ಲಿಸಲಿಲ್ಲ. ನಾನು ಮಾತನಾಡುವುದನ್ನು ನಿಲ್ಲಿಸಿದ್ದರೆ ನನ್ನ ತಾಯಿ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ನಮ್ಮ ಜೊತೆ ಅವರು ಮಾತನಾಡುತ್ತಿರಲಿಲ್ಲ ಅಂದ್ರೆ ನಾನು ಕಾರಣ ಅಂದುಕೊಳ್ಳುತ್ತಿದ್ದರು. 

1010

Sharjah ಸಿನಿಮಾಗೆ ಅವಕಾಶ ಸಿಕ್ಕಿದಾಗ ನಾನು ಪ್ರಯಾಣ ಮಾಡಲು ಶುರು ಮಾಡಿದೆ. ಈ ಕೆಟ್ಟ ಜನರಿಂದ ದೂರ ಉಳಿಯಬೇಕು ಎಂದು ನಾನು ಬೇರೆ ರಾಜ್ಯಕ್ಕೆ ಹಾರಿದೆ ಎಂದು ಬರೆದುಕೊಂಡಿದ್ದಾರೆ. 

Read more Photos on
click me!

Recommended Stories