Neha Kakkar Birthday -ಪತಿಯ ಜೊತೆ ಗಾಯಕಿಯ ಹಾಲಿಡೇ ಫೋಟೋಗಳು!

Published : Jun 06, 2022, 07:06 PM IST

ಬಾಲಿವುಡ್‌ನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರಾದ ನೇಹಾ ಕಕ್ಕರ್ (Neha Kakkar) ಅವರಿಗೆ 34 ವರ್ಷ ತುಂಬಿದೆ. ಜೂನ್ 6,1988 ರಂದು ಉತ್ತರಾಖಂಡದ ಋಷಿಕೇಶದಲ್ಲಿ ಜನಿಸಿದ ನೇಹಾ ಕಕ್ಕರ್ ಈ ಹಂತ ಇಲ್ಲಿಗೆ ತಲುಪಲು ಅವರು ಸಾಕಷ್ಟು ಕಷ್ಟಪಡಬೇಕಾಯಿತು. ಅವರು ಆಗಾಗ್ಗೆ ಹಾಲಿಡೇಗಾಗಿ  ವಿವಿಧ ಸ್ಥಳಗಳನ್ನು ಭೇಟಿ ನೀಡುತ್ತಲೇ ಇರುತ್ತಾರೆ. ನೇಹಾ ತನ್ನ ಪತಿ ರೋಹನ್‌ಪ್ರೀತ್ ಸಿಂಗ್ ಅವರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದೇ ಸಮಯದಲ್ಲಿ, ಮದುವೆಯ ನಂತರ, ಇಬ್ಬರೂ ಟಿವಿ ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.   

PREV
16
Neha Kakkar Birthday -ಪತಿಯ ಜೊತೆ ಗಾಯಕಿಯ ಹಾಲಿಡೇ ಫೋಟೋಗಳು!

ನೇಹಾ ಕಕ್ಕರ್ ತನ್ನ ಪತಿ ರೋಹನ್‌ಪ್ರೀತ್ ಸಿಂಗ್ ಜೊತೆ ಮದುವೆಯಾದ ನಂತರ ತುಂಬಾ ಸಂತೋಷವಾಗಿದ್ದಾರೆ. ಅವರು ವಿದೇಶದಲ್ಲಿ ಸಮುದ್ರತೀರದಲ್ಲಿ ರೊಮ್ಯಾನ್ಸ್ ಮಾಡುವುದನ್ನು ಹೆಚ್ಚಾಗಿ ಕಾಣಬಹುದು.

26

ನೇಹಾ ವಿಮಾನ ನಿಲ್ದಾಣದ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋ  ನೋಡಿ ಜನರು ನೇಹಾ  ಅವರು ತಾಯಿಯಾಗಲಿದ್ದಾರೆ ಎಂದು ಊಹಿಸಲು ಪ್ರಾರಂಭಿಸಿದ್ದರು. 
 

36

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೊಗಳಲ್ಲಿ ನೇಹಾ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಮನೆಯ ಮೂಲೆ ಮೂಲೆಯಿಂದಲೂ ಸೆಲ್ಫಿಗಳನ್ನು ಹಂಚಿಕೊಳ್ಳುತ್ತಾರೆ. ಅಡುಗೆ ಮನೆಯಲ್ಲಿದ್ದರೂ ಸೆಲ್ಫಿ ತೆಗೆದುಕೊಳ್ಳುವುದನ್ನು ತಪ್ಪಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.


 
 

46

ವಿವಾಹದ ಫೋಟೋಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ರು ನಟಿ

ಲಾಕ್‌ಡೌನ್ ಸಮಯದಲ್ಲಿ ನೇಹಾ ಕಕ್ಕರ್ ರೋಹನ್‌ಪ್ರೀತ್ ಅವರನ್ನು ಭೇಟಿಯಾದರು. ಹಾಡಿನ ವಿಡಿಯೋ ಚಿತ್ರೀಕರಣದ ವೇಳೆ ರೋಹನ್‌ಪ್ರೀತ್ ಅವರನ್ನು ಭೇಟಿಯಾಗಿದ್ದಾಗಿ ಅವರು  ತಿಳಿಸಿದ್ದಾರೆ.


 
 

56

ನೇಹಾ ಕಕ್ಕರ್ ತನ್ನ ಗೆಳೆಯ ರೋಹನ್‌ಪ್ರೀತ್ ಸಿಂಗ್ ಅವರನ್ನು ಅಕ್ಟೋಬರ್ 2020 ರಲ್ಲಿ ವಿವಾಹವಾದರು. ದೆಹಲಿಯ ಗುರುದ್ವಾರದಲ್ಲಿ ದಂಪತಿ ವಿವಾಹವಾಗಿದ್ದು, ಚಂಡೀಗಢದಲ್ಲಿ ಆರತಕ್ಷತೆ  ಏರ್ಪಡಿಸಲಾಗಿತ್ತು.

66

ನೇಹಾ ಕಕ್ಕರ್ ಮತ್ತು  ಪತಿ ರೋಹನ್‌ಪ್ರೀತ್‌ ದಂಪತಿಗಳು ಹನಿಮೂನ್ ಸಮಯದಲ್ಲಿ  ಪ್ಯಾರಿಸ್ ತಲುಪಿದ್ದರು. ಐಫೆಲ್ ಟವರ್ ಮುಂದೆ ಚುಂಬಿಸಿತ್ತಿರುವ ಫೋಟೋ ಹಂಚಿಕೊಂಡು  ನೀನಿಲ್ಲದೆ ಪ್ಯಾರಿಸ್ ಸುಂದರವಾಗಿಲ್ಲ ಎಂದು ನೇಹಾ ಹೇಳಿದ್ದಾರೆ.

Read more Photos on
click me!

Recommended Stories