Anushka Rajan Aditya seal wedding: ಮಿಂಚಿದ ಆಲಿಯಾ, ಅಥಿಯಾ
First Published | Nov 23, 2021, 5:38 PM ISTನಟ ಆದಿತ್ಯ ಸೀಲ್ (Aditya seal) ತಮ್ಮ ಬಹುಕಾಲದ ಗೆಳತಿ (Girlfriend) ಅನುಷ್ಕಾ ರಂಜನ್ (Anushka Rajan) ಅವರನ್ನು ವಿವಾಹವಾಗಿದ್ದಾರೆ. ಭಾನುವಾರ ಈ ಜೋಡಿ ಸಪ್ತಪದಿ ತುಳಿಯಿತು. ಏಳು ಹೆಜ್ಜೆಗಳನ್ನು ಜೊತೆಯಾಗಿಟ್ಟ ನಂತರ, ಆದಿತ್ಯ ಅವರು ಖುಷಿಯಲ್ಲಿ ಎಲ್ಲರ ಸಮ್ಮುಖದಲ್ಲಿ ಪತ್ನಿ ಅನುಷ್ಕಾರನ್ನು ತಮ್ಮ ತೋಳುಗಳಲ್ಲಿ ಎತ್ತುಕೊಂಡರು. ಮದುವೆಗಾಗಿ ಕೆಂಪು ಬಣ್ಣದ ಬದಲಾಗಿ ಲ್ಯಾವೆಂಡರ್ ಬಣ್ಣದ ಲೆಹೆಂಗಾವನ್ನು ಆಯ್ಕೆ ಮಾಡಿಕೊಂಡ ಅನುಷ್ಕಾ, ತುಂಬಾ ಸುಂದರವಾಗಿ ಕಂಗೊಳಿಸುತ್ತಿದ್ದರು. ಇದರೊಂದಿಗೆ, ಅವರು ಹೊಂದಿಕೆಯಾಗುವ ಆಭರಣಗಳನ್ನು ಪೇರ್ ಮಾಡಿಕೊಂಡಿದ್ದರು. ಈ ಜೋಡಿಯ ಮದುವೆಯಲ್ಲಿ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.