ಬಾಲಿವುಡ್ ನಟಿ ಕತ್ರಿನಾ ಕೈಫ್ 2021ರಲ್ಲಿ ವಿಕ್ಕಿ ಕೌಶಲ್‌ರನ್ನ ಮದುವೆಯಾದ್ರು. ವಿಕ್ಕಿಗಿಂತ ಕತ್ರಿನಾ ಸುಮಾರು 5 ವರ್ಷ ದೊಡ್ಡವರು.
ಬಿ ಟೌನ್ ನಟ ಸೈಫ್ ಅಲಿ ಖಾನ್ ತಮಗಿಂತ 12 ವರ್ಷ ದೊಡ್ಡವರಾದ ಅಮೃತಾ ಸಿಂಗ್‌ರನ್ನ ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಾಸ್‌ಗಿಂತ 10 ವರ್ಷ ದೊಡ್ಡವರು. ಇದಕ್ಕಾಗಿ ಅವರು ಸಾಕಷ್ಟು ಟೀಕೆಗಳನ್ನ ಎದುರಿಸಬೇಕಾಯಿತು.
ಉರ್ಮಿಳಾ ಮಾತೊಂಡ್ಕರ್ ಕಾಶ್ಮೀರ ಮೂಲದ ಮೊಹಸಿನ್ ಅಕ್ತರ್ ಮೀರ್‌ರನ್ನ ಮದುವೆಯಾದರು. ಅವರಿಬ್ಬರ ನಡುವೆ 10 ವರ್ಷಗಳ ಅಂತರವಿದೆ.
ಐಶ್ವರ್ಯ ರೈ ಬಚ್ಚನ್ ಅಭಿಷೇಕ್‌ಗಿಂತ 2 ವರ್ಷ ದೊಡ್ಡವರು. ಅವರ ವಿಚ್ಛೇದನದ ಬಗ್ಗೆ ಈಗ ಬಾಲಿವುಡ್‌ನಲ್ಲಿ ಚರ್ಚೆಗಳು ನಡೆಯುತ್ತಿವೆ.
ಸೋಹಾ ಅಲಿ ಖಾನ್ ಕುನಾಲ್ ಖೇಮುರನ್ನ ಮದುವೆಯಾದರು. ಅವರಿಗೆ ಒಬ್ಬ ಮಗಳು ಇದ್ದಾಳೆ. ಸೋಹಾ ಕುನಾಲ್‌ಗಿಂತ 5 ವರ್ಷ ದೊಡ್ಡವರು.
ಬಾಲಿವುಡ್ ನಟಿ ನೇಹಾ ಧೂಪಿಯಾ 2018ರಲ್ಲಿ ಅಂಗದ್ ಬೇಡಿಯನ್ನ ಮದುವೆಯಾದರು. ನೇಹಾ ಅವರು, ಅಂಗದ್‌ಗಿಂತ 2 ವರ್ಷ ದೊಡ್ಡವರು.
ನಟಿ ಅರ್ಚನಾ ಪೂರಣ್ ಸಿಂಗ್, ಪರ್ಮೀತ್ ಸೇಥಿ ಅವರನ್ನ ಮದುವೆಯಾದರು. ಅವರಿಬ್ಬರ ನಡುವೆ 7 ವರ್ಷಗಳ ಅಂತರವಿದೆ. ಅವರಿಗೆ ಇಬ್ಬರು ಪುತ್ರರು, ಆರ್ಯಮನ್ ಮತ್ತು ಆಯುಷ್ಮಾನ್.
ಬಾಲಿವುಡ್ ನಟು ಅಮೀಷಾ ಪಟೇಲ್ ತಮಗಿಂತ 19 ವರ್ಷ ಕಿರಿಯ ವ್ಯಕ್ತಿಯ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಿಪಾಶಾ ಬಸು 2006ರಲ್ಲಿ ಕರಣ್ ಸಿಂಗ್ ಗ್ರೋವರ್‌ರನ್ನ ಮದುವೆಯಾದರು. ಬಿಪಾಶಾ ಕರಣ್‌ಗಿಂತ 3 ವರ್ಷ ದೊಡ್ಡವರು. ಈ ದಂಪತಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ.
Govindaraj S