ಪ್ರೀತಿಗೆ ಜಾತಿ, ಧರ್ಮ ಯಾಕೆ ಎಂದು… ಬೇರೆ ಧರ್ಮದವರನ್ನ ಮದುವೆಯಾದ ಬಾಲಿವುಡ್ ನಟಿಯರು…

First Published | Dec 16, 2024, 4:40 PM IST

ಮದುವೆ ತಮ್ಮ ಧರ್ಮದಲ್ಲಿ ಜಾತಿಯಲ್ಲೇ ಆಗಬೇಕು ಎಂದು ಯೋಚನೆ ಮಾಡುವ ಜನರ ಮಧ್ಯೆ ಈ ಬಾಲಿವುಡ್ ನಟಿಯರು, ಅನ್ಯ ಧರ್ಮೀಯರಲ್ಲಿ ಪ್ರೀತಿಯನ್ನು ಕಂಡು, ಮದುವೆಯಾಗಿ, ಇದೀಗ ಅದ್ಭುತವಾದ ಜೀವನ ನಡೆಸುತ್ತಿದ್ದಾರೆ. 
 

ಮದುವೆ ಅನ್ನೋದು ಎರಡು ಜೀವಗಳ ಜನ್ಮಾಂತರದ ಬೆಸುಗೆ. ಇದಕ್ಕಾಗಿ ಇಬ್ಬರು ವ್ಯಕ್ತಿಗಳ ನಡುವೆ ಅನೇಕ ಗುಣಗಳ ಹೋಲಿಕೆಗಳನ್ನು ಹೊಂದಿರುವುದು ಅವಶ್ಯಕ ಎಂದು ಜನ ನಂಬುತ್ತಾರೆ. ಅದರಲ್ಲೂ ಒಂದೇ ಧರ್ಮದವರೇ ಮದುವೆಯಾಗಬೇಕು ಎಂದು ನಂಬುವ ಜನರೇ ಹೆಚ್ಚು. ಆದರೆ ಬಿ-ಟೌನ್ ನ ಅನೇಕ ನಟಿಯರು (bollywood actresses) ಇತರ ಧರ್ಮದ ವ್ಯಕ್ತಿಯಲ್ಲಿ ಪ್ರೀತಿಯನ್ನು ಕಂಡು, ಅವರೊಂದಿಗೆ ಸಂತೋಷವಾದ ಜೀವನ ನಡೆಸುತ್ತಿದ್ದಾರೆ. ಅಂತಹ ನಟಿಯರು ಯಾರ್ಯಾರು ನೋಡೋಣ. 
 

ಕರೀನಾ-ಸೈಫ್ 
ಹಿಂದೂ ಆಗಿರುವ ಕರೀನಾ ಇಂದು ತಮ್ಮ ಮುಸ್ಲಿಂ ಪತಿ ಸೈಫ್ ಆಲಿ ಖಾನ್ (Saif Ali Khan) ಜೊತೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಆರಂಭದಲ್ಲಿ ಇವರಿಗೂ ಅಡೆ ತಡೆ, ಒತ್ತಡಗಳು ಬಂದಿದ್ದವು. ಆದರೆ ಈ ದಂಪತಿಗಳು ಎಂದಿಗೂ ಇತರರಿಂದ ಒತ್ತಡಕ್ಕೆ ಒಳಗಾಗದೇ ತಮ್ಮದ್ದೇ ಆದ ಅದ್ಭುತ ಜೀವನ ನಡೆಸುತ್ತಿದ್ದಾರೆ. 
 

Tap to resize

ರತ್ನ-ನಾಸಿರುದ್ದೀನ್
ದಶಕಗಳ ನಂತರವೂ, ಈ ಮುಸ್ಲಿಂ ಮತ್ತು ಹಿಂದೂ ದಂಪತಿಗಳು ತಮ್ಮ ಸ್ನೇಹವನ್ನು ಪ್ರೀತಿಯನ್ನು, ಭಾಂದವ್ಯವನ್ನು ಉಳಿಸಿಕೊಂಡಿದ್ದಾರೆ. ದಂಪತಿಗಳ ನಡುವೆ ಬಲವಾದ ಸ್ನೇಹವಿದ್ದಾಗ, ಎರಡು ವಿಭಿನ್ನ ಧರ್ಮಗಳಿಂದ ಉದ್ಭವಿಸಬಹುದಾದ ಬಿರುಕು ಸಹ ಸುಲಭವಾಗಿ ಪರಿಹರಿಸಲ್ಪಡುತ್ತದೆ ಅನ್ನೋದಕ್ಕೆ ಈ ಜೋಡಿ ಸಾಕ್ಷಿ.

ಜೆನಿಲಿಯಾ-ರಿತೇಶ್
ಕ್ರಿಶ್ಚಿಯನ್ ಆಗಿರುವ ಜೆನಿಲಿಯಾ ಡಿಸೋಜಾ (Genelia D'souza) ಮಹಾರಾಷ್ಟ್ರದ ಹಿಂದೂ ರಿತೇಶ್ ದೇಶ ಮುಖ್ ಅವರನ್ನು ಮದುವೆಯಾದಾಗ, ಆಕೆ ಹಿಂದೂ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡರು. ಒಬ್ಬರು ಮುಕ್ತ ಮನಸ್ಸಿನಿಂದ ಒಬ್ಬರನ್ನೊಬ್ಬರು ಸ್ವೀಕರಿಸಿದಾಗ, ಧರ್ಮವು ಅಡ್ಡಿಯಾಗುವುದಿಲ್ಲ. 

ಸೋಹಾ-ಕುನಾಲ್
ಸೋಹಾ (Soha Ali Khan) ಮುಸ್ಲಿಂ ಮತ್ತು ಪಟೌಡಿ ಕುಟುಂಬದ ಮಗಳು, ಕುನಾಲ್ ಹಿಂದೂ ಹಾಗೂ ಒಂದು ಸಾಮಾನ್ಯ ಕುಟುಂಬದ ಯುವಕ. ಆದರೆ ಇಬ್ಬರ ನಡುವಿನ ಬಲವಾದ ಪ್ರೀತಿ, ನಂಬಿಕೆ, ಈ ಎಲ್ಲಾ ಅಂತರವನ್ನು ಬಿಟ್ಟು, ಸುಂದರ ಸಂಸಾರ ಮಾಡಲು ಸಹಾಯ ಮಾಡಿತು. 
 

ಶಿಬಾನಿ-ಫರ್ಹಾನ್
ಪ್ರೀತಿ ನಿಜವಾದಾಗ, ಜಗತ್ತು ಏನು ಹೇಳುತ್ತದೆ ಎಂಬ ಚಿಂತೆ ಕೊನೆಗೊಳ್ಳುತ್ತದೆ ಎಂಬುದಕ್ಕೆ ಶಿಬಾನಿ ದಾಂಡೇಕರ್ ಮತ್ತು ಫರ್ಹಾನ್ ಅಖ್ತರ್ (Farhan Akhtar)ಸಾಕ್ಷಿ. ಈ ಜೋಡಿಯನ್ನು ನೋಡಿದ್ರೆ ಪ್ರೀತಿಯಂದ್ರೆ ಹೀಗೆ ಇರಬೇಕು, ಅಲ್ಲಿ ಧರ್ಮದ ಅಂತರವೇ ಬರಬಾರದು ಎಂದು ಅನಿಸುತ್ತೆ. 

ಸೋನಾಕ್ಷಿ-ಜಹೀರ್
ಸೋನಾಕ್ಷಿ ಸಿನ್ಹಾ (Sonakshi Sinha) ಹಾಗೂ ಜಹೀರ್ ಅವರ ಹಿಂದೂ -ಮುಸ್ಲಿಂ ಮದುವೆಯ ಕುರಿತು ಜನ ಬೇರೆ ಬೇರೆ ರೀತಿಯಲ್ಲಿ ಮಾತನಾಡಿದರು. ಆದರೆ ಈ ಜೋಡಿ ಮಾತ್ರ ಮದುವೆಯಾಗುವ ಮೂಲಕ ಸುಂದರವಾಗಿ ಸಂಸಾರ ನಡೆಸುತ್ತಿದ್ದಾರೆ. ತಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪರಸ್ಪರ ಒತ್ತಡ ಹೇರದೆ ಸಂತೋಷವಾಗಿರೋದು ಹೇಗೆ ಅನ್ನೋದನ್ನು ಇವರನ್ನ ನೋಡಿಯೇ ಕಲಿಯಬೇಕು. 

ಪ್ರಿಯಾಂಕಾ-ನಿಕ್
ಕ್ರಿಶ್ಚಿಯನ್ ಆಗಿರುವ ನಿಕ್ ಮತ್ತು ಪಂಜಾಬಿ ಹಿಂದೂ ಆಗಿರುವ ಪ್ರಿಯಾಂಕಾ, ಇಬ್ಬರ ನಡುವೆ ಯಾವುದೇ ಸಾಮ್ಯತೆ ಇಲ್ಲ. ಆದರೆ ಕುಟುಂಬದ ಮೌಲ್ಯಗಳು ಮತ್ತು ಪ್ರೀತಿಯ ಮಾರ್ಗವು ಒಂದೇ ಆಗಿದೆ. ಇಬ್ಬರ ನಡುವೆ ಪ್ರೀತಿ,  ನಂಬಿಕೆ ಇದ್ದರೆ, ಅಲ್ಲಿ ಯಾವ ಧರ್ಮದ ಅಂತರವೂ, ವಯಸ್ಸಿನ ಅಂತರವೂ ಬರೋದಿಲ್ಲ ಎಂದು ತೋರಿಸಿದ ಜೋಡಿ ಇವರು. 

ಕತ್ರಿನಾ-ವಿಕಿ ಕೌಶಲ್
ಕತ್ರಿನಾ (Katrina Kaif) ಮತ್ತು ವಿಕ್ಕಿ ಕೌಶಲ್ ಎರಡು ವಿಭಿನ್ನ ಧರ್ಮಗಳ ಜನರು ಪರಸ್ಪರರ ಸಂಸ್ಕೃತಿಗಳನ್ನು ಜೊತೆ ಸೇರಿಸುವ ಮೂಲಕ ಹೇಗೆ ಸಂತೋಷದಿಂದ ಬದುಕಬಹುದು ಎಂಬುದನ್ನು ಈ ಜೋಡಿ ತೋರಿಸುತ್ತೆ. ಅವರ ಕುಟುಂಬವು ಜೊತೆಯಾಗಿ ಲೋಹ್ರಿ, ಹೋಲಿಯನ್ನು ಆಚರಿಸುತ್ತೆ, ಜೊತೆಗೆ ಕ್ರಿಸ್ಮಸ್ ಅನ್ನು ಅಷ್ಟೇ ಆಡಂಬರದಿಂದ ಆಚರಿಸುತ್ತಾರೆ. 

ಸ್ವರಾ-ಫಹಾದ್
ಸ್ವರಾ ಭಾಸ್ಕರ್ ಮತ್ತು ಫಹಾದ್ ಅವರ ಜೋಡಿ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವ ಜೋಡಿ. ಇಬ್ಬರೂ ಬುದ್ದಿವಂತರು, ಬೌದ್ಧಿಕ ಆಕರ್ಷಣೆ ಇದ್ದಾಗ, ಹೃದಯಗಳು ಸಹ ಭೇಟಿಯಾಗುತ್ತವೆ ಎಂಬುದಕ್ಕೆ ಈ ಜೋಡಿಗಳು ಸಾಕ್ಷಿ. ಇವರಿಬ್ಬರು ಹಿಂದೂ - ಮುಸ್ಲಿಂ ಆಗಿದ್ದರೂ ಕೂಡ ಇಬ್ಬರ ಸಂಬಂಧ ಆರೋಗ್ಯಕರವೂ, ಸಂತೋಷಕರವೂ ಆಗಿದೆ. 

Latest Videos

click me!