ಮೃತ ಮಹಿಳೆಯನ್ನು ರೇವತಿ ಎಂದು ಗುರುತಿಸಲಾಗಿದೆ. ರೇವತಿ ಕುಟುಂಬಕ್ಕೆ ಅಲ್ಲು ಅರ್ಜುನ್ ವೈಯಕ್ತಕವಾಗಿ 25 ಲಕ್ಷ ರೂಪಾಯಿ ಧನ ಸಹಾಯ ಸಹ ಮಾಡಿದ್ದಾರೆ.
ಅಲ್ಲು ಅರ್ಜುನ್
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಒಂದು ದಿನ ಜೈಲುಪಾಲಾಗಿದ್ದರು. ಇದೀಗ ಜಾಮೀನಿನ ಮೇಲೆ ಅಲ್ಲು ಅರ್ಜುನ್ ಹೊರ ಬಂದಿದ್ದಾರೆ.
ನಟ ಸುಮನ್
ಅಲ್ಲು ಅರ್ಜುನ್ ಬಂಧನ ರಾಜಕೀಯ ಪ್ರೇರಿತ ಎಂಬ ಮಾತುಗಳು ಕೇಳಿ ಬಂದಿವೆ. ಸಿನಿಮಾ ಕಲಾವಿದರು ಸಹ ಅಲ್ಲು ಅರ್ಜುನ್ ಬಂಧನವನ್ನು ಖಂಡಿಸಿದ್ದಾರೆ.
ಇದೀಗ ನಟ ಸುಮನ್ ಸಹ ಅಲ್ಲು ಅರ್ಜುನ್ ಬಂಧನದ ಕುರಿತು ಪ್ರತಿಕ್ರಿಯಿಸಿದ್ದಾರೆ. ಥಿಯೇಟರ್ ಘಟನೆಯಲ್ಲಿ ಅಲ್ಲು ಅರ್ಜುನ್ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಥಿಯೇಟರ್ ಮಾಲೀಕರೇ ಹೊಣೆ ಹೊರಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ಎಂದು ತೆಗೆದುಕೊಳ್ಳಬೇಕು ಎಂದು ನಟ ಸುಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಎಲ್ಲಾ ಹೊಣೆಗಾರಿಕೆಯನ್ನು ಚಿತ್ರಮಂದಿರದ ಮೇಲೆ ಹಾಕಿದ್ದಾರೆ.