ಶ್ರದ್ಧಾ ಕಪೂರ್ ಜೀವನದಲ್ಲಿ ವಿಶೇಷ ವ್ಯಕ್ತಿ ಪ್ರವೇಶ, ತಮ್ಮದೇ ಚಿತ್ರದ ಬರಹಗಾರನೊಂದಿಗೆ ನಟಿ ಡೇಟಿಂಗ್?

Published : Jul 05, 2023, 05:41 PM IST

ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ವಾಸ್ತವವಾಗಿ ಶ್ರದ್ಧಾ ಇತ್ತೀಚೆಗೆ ಥಿಯೇಟರ್ ಹೊರಗೆ ಕಾಣಿಸಿಕೊಂಡಿದ್ದು, ಜೊತೆಗೆ ಯಾರೋ ಕಾಣಿಸಿಕೊಂಡರು, ಅದನ್ನು ನೋಡಿದ ಜನರು ಶ್ರದ್ಧಾ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಊಹಿಸುತ್ತಿದ್ದಾರೆ. ಅಷ್ಷಕ್ಕೂ ಆ ವ್ಯಕ್ತಿ ಯಾರು?

PREV
17
ಶ್ರದ್ಧಾ ಕಪೂರ್ ಜೀವನದಲ್ಲಿ ವಿಶೇಷ ವ್ಯಕ್ತಿ ಪ್ರವೇಶ, ತಮ್ಮದೇ ಚಿತ್ರದ ಬರಹಗಾರನೊಂದಿಗೆ ನಟಿ ಡೇಟಿಂಗ್?

ಶ್ರದ್ಧಾ ಕಪೂರ್ ಅವರ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಅವರು ಥಿಯೇಟರ್‌ನಿಂದ ಹೊರ ಬಂದ ನಂತರ ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದಾರೆ.

27

ಈ ಸಮಯದಲ್ಲಿ, ಅವರು ತುಂಬಾ ಶ್ರದ್ಧಾ ಕಪೂರ್  ಸಿಂಪಲ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಅವರು ಗುಲಾಬಿ ಮತ್ತು ಬೂದು ಬಣ್ಣದ ಮುದ್ರಿತ ಸಲ್ವಾರ್ ಸೂಟ್ ಧರಸಿದ್ದು, ತೆರೆದ ಕೂದಲಿನೊಂದಿಗೆ ಮತ್ತು ಮೇಕ್ಅಪ್ ಇಲ್ಲದೆ ಕಾಣಿಸಿಕೊಂಡರು.

37

ವಿಶೇಷವೆಂದರೆ ಅವರು ಒಬ್ಬರೇ ಅಲ್ಲ. ಅವರ 'ತು ಜೂಥಿ ಮೈನ್ ಮಕ್ಕರ್' ಚಿತ್ರದ ಬರಹಗಾರ ರಾಹುಲ್ ಮೋದಿ ಅವರೊಂದಿಗೆ ಚಲನಚಿತ್ರವನ್ನು ವೀಕ್ಷಿಸಲು ಬಂದಿದ್ದರು. 
 

47

ಚಿತ್ರ ವೀಕ್ಷಿಸಿದ ನಂತರ ಇಬ್ಬರೂ ಪ್ರತ್ಯೇಕವಾಗಿ ಥಿಯೇಟರ್‌ನಿಂದ ಹೊರಬಂದು ತಮ್ಮ ತಮ್ಮ ಕಾರುಗಳಲ್ಲಿ ಹೊರಟರು. ಇವರಿಬ್ಬರನ್ನೂ ಹೀಗೆ ಒಟ್ಟಿಗೆ ನೋಡಿದ ಶ್ರದ್ಧಾ ಅವರ ಜೀವನದಲ್ಲಿ ಮತ್ತೊಮ್ಮೆ ವಿಶೇಷ ವ್ಯಕ್ತಿಯೊಂದಿಗೆ ಪ್ರೀತಿ ಆಗಿದೆ ಎಂದು ಜನ ಊಹಿಸುತ್ತಿದ್ದಾರೆ.

57

ಶ್ರದ್ಧಾ ಮತ್ತು ರಾಹುಲ್ ಅವರ ಫೋಟೋಗಳು ವೈರಲ್ ಆಗಲು ಪ್ರಾರಂಭಿಸಿದವು ಮತ್ತು ಅವರ ಸಂಬಂಧದ ವದಂತಿಗಳು ಸುತ್ತಲು ಪ್ರಾರಂಭಿಸಿದವು. ಅದೇ ಸಮಯದಲ್ಲಿ, ನಟಿ ಇದುವರೆಗೂ ಈ ಬಗ್ಗೆ ಮೌನ ಮುರಿದಿಲ್ಲ.

67

ಶ್ರದ್ಧಾ ಲವ್ವಲ್ಲಿ ಬಿದ್ದಿದ್ದಾರೆಂದು ಗಾಸಿಪ್‌ಗಳು ಹರಿದಾಡುತ್ತಲೇ ಇದೆ. ಆದರೆ, ಈ ಬಗ್ಗೆ ನಟಿ ಯಾವಾಗ ಮೌನ ಮುರಿಯುತ್ತಾರೆ ಎಂದು ಫ್ಯಾನ್ಸ್ ಕೌತುಕರಾಗಿದ್ದಾರೆ.

77

 ಶ್ರದ್ಧಾ ಕಪೂರ್ ಶೀಘ್ರದಲ್ಲೇ ದಿನೇಶ್ ವಿಜನ್ ಅವರ 'ಸ್ತ್ರೀ 2' ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೊದಲ ಭಾಗವೂ ಹಿಟ್ ಆಗಿತ್ತು.

Read more Photos on
click me!

Recommended Stories