ಸೌತ್ ನಟರು ಸೆಟ್‌ಗಳಲ್ಲಿ ಹೇಗೆ ಪರಿಗಣನೆ ಮತ್ತು ಗೌರವ ಹೊಂದಿದ್ದಾರೆ ಎಂಬುದನ್ನು ಹಂಚಿಕೊಂಡ ನಟಿ, 'ನಾನು ರಾಮ್ ಚರಣ್ ಅಥವಾ (ನಾಗ) ಚೈತನ್ಯ, ನಾಗಾರ್ಜುನ ಸರ್ ಅವರ ಮಗನನ್ನು ನೋಡಿದ್ದೇನೆ, ಅವರೆಲ್ಲರೂ ತಮ್ಮ ಹುಡುಗರನ್ನು ತುಂಬಾ ಸಂಸ್ಕಾರ ನೀಡಿ, ಬೆಳೆಸಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರದ್ದು ಒಳ್ಳೆಯ ನಡತೆ, ಸುಸಂಸ್ಕೃತ, ಗೌರವಾನ್ವಿತರು. ನನ್ನ ಪ್ರಕಾರ, ಸಾಮಾನ್ಯವಾಗಿ ಜಗತ್ತಿನಲ್ಲಿ ಮಹಿಳೆಯರ ಬಗ್ಗೆ ಗೌರವ ಅಪರೂಪ ಮತ್ತು ಕೆಲವೊಮ್ಮೆ ನಮ್ಮ ದೇಶದಲ್ಲಿ ಕಡಿಮೆ. ಆದರೆ ನಾನು ಅಲ್ಲಿ ಕೆಲಸ ಮಾಡಿದ ಕೆಲವು ಪುರುಷರೊಂದಿಗೆ ನನಗೆ ಅನಿಸುತ್ತದೆ, ಅವರು ತುಂಬಾ ಸಭ್ಯರು ಸೆಟ್‌ನಲ್ಲಿರುವ ಮಹಿಳೆ ಆರಾಮವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.ಚಿರಂಜೀವಿ ಸರ್ ಅವರಲ್ಲಿ ಒಬ್ಬರು' ಎಂದು ತಮನ್ನಾ ಹೇಳಿದ್ದಾರೆ.